ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲು ಮಾರುತ್ತಿದ್ದ ಶಿಲ್ಪಾಶೆಟ್ಟಿ ಪತಿ ಈಗ ಬಾಜಿಗರ್!

By Srinath
|
Google Oneindia Kannada News

ನವದೆಹಲಿ, ಜೂನ್ 7: ಐಪಿಎಲ್ ಕಳ್ಳಾಟದ ಕೋವೆಗಳು ಪೊಲೀಸರನ್ನು ಎಲ್ಲೆಲ್ಲಿಗೋ ಎಳೆದೊಯ್ಯುತ್ತಿದೆ. ಖದೀಮರು ಒಬ್ಬೊಬ್ಬರಾಗಿ ಹೊರಬರುತ್ತಿದ್ದಾರೆ. ಈ ಮಧ್ಯೆ, ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕರಾದ ಕನ್ನಡತಿ ಶಿಲ್ಪಾ ಶೆಟ್ಟಿ ಅವರು ಗರಂ ಆಗಿದ್ದಾರೆ.

ಏಕೆಂದರೆ ಅನಗತ್ಯವಾಗಿ ಮಾಧ್ಯಮಗಳು ಆಕೆಯ ಪತಿರಾಯನ ಮೇಲೆ ಗೂಬೆ ಕೂರಿಸುತ್ತಿವೆ ಎಂದು ಕೆಂಡಕಾರಿದ್ದಾರೆ. ಆದರೆ ಪ್ರಕರಣದ ಬೆನ್ನುಹತ್ತಿರುವ ದಿಲ್ಲಿ ಪೊಲೀಸರು ಮಾತ್ರ ಇಲ್ಲಮ್ಮಿ, ನಿನ್ನ ಗಂಡ ನಿಜಕ್ಕೂ ದೊಡ್ಡ ಬಾಜಿಗರ್. ಬಾಜಿ ಕಟ್ಟಿ ನೋಡು ಬಾರಾ ಎಂದು ನೀನೂ ಅವನಿಗೆ ಹಣ ಒದಗಿಸಿದ್ದೀಯಾ, ಛುಪ್! ಎಂದಿದ್ದಾರೆ.

ತತ್ಸಂಬಂಧ ವಿಚಾರಣೆಗೆಂದು ಪೊಲೀಸರು ಇನ್ನೇನು ಇಷ್ಟರಲ್ಲೇ ಶಿಲ್ಪಾಳನ್ನೂ ಹರಿಶಿನ ಕುಂಕುಮಕ್ಕೆ ಕರೆಯುವ ಲಕ್ಷಣಗಳು ದಟ್ಟವಾಗಿವೆ. ಈ ಮಧ್ಯೆ, ಶಿಲ್ಪಾರ ಯಜಮಾನರಾದ ರಾಜ್ ಕುಂದ್ರಾರನ್ನು ಪೊಲೀಸರು ತುಸು ಹೆಚ್ಚಿಗೇ ವಿಚಾರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ ಕುಂದ್ರಾ ಭೂತದ ಬಗ್ಗೆ ಒಂದಷ್ಟು ಬೆಳಕು ಚೆಲ್ಲಿದಾಗ...

 pashmina shawl ಮಾರಾಟಗಾರ

pashmina shawl ಮಾರಾಟಗಾರ

ರಾಜ್ ಕುಂದ್ರಾ ಕ್ರಿಕೆಟ್ಟಿಗೆ ಎಂಟ್ರಿ ಕೊಡುವ ಮುನ್ನ ಕಾಲೇಜಿನಲ್ಲಿ ಡ್ರಾಪ್ ಔಟ್ ಆಗಿದ್ದ. ಮುಂದೆ ಶಾಲುಗಳನ್ನು ಮಾರಾಟ ಮಾಡುತ್ತಾ ನಾಲ್ಕು ಕಾಸು ಮಾಡಿಕೊಂಡರು. ಇತ್ತೀಚೆಗೆ ಹೆಣ್ಣುಮಕ್ಕಳು ಫ್ಯಾಷನಬಲ್ ಆಗಿ ದುಪ್ಪಟ್ಟ (ವೇಲ್) ಬದಲಿಗೆ ಭುಜದ ಮೇಲೆ ಹಾಕಿಕೊಳ್ಳುತ್ತಾರಲ್ಲ ಆ ಶಾಲುಗಳು ಮಾರುಕಟ್ಟೆಗೆ ಪರಿಚಯಿಸಿದ್ದೇ ಈ ಕುಂದ್ರಾ ಕುಡಿ.

ವೆಬ್ ಸೈಟಿನಲ್ಲಿದೆ ಕುಂದ್ರಾ ಜಾತಕ

ವೆಬ್ ಸೈಟಿನಲ್ಲಿದೆ ಕುಂದ್ರಾ ಜಾತಕ

37 ವರ್ಷದ ಬ್ರಿಟನ್-ಬಾರ್ನ್ ರಾಜ್ ಕುಂದ್ರಾ ಮುಂದೆ ಹೈ ಪ್ರೊಫೈಲ್ ವ್ಯಕ್ತಿಯಾಗಿ ಮಾರ್ಪಟ್ಟಿರುವುದುರ ಝಲಕುಗಳನ್ನು ನೋಡಬೇಕೆಂದರೆ ಆತನ ವೆಬ್ ಸೈಟಿಗೆ ಭೇಟಿ ನೀಡಬಹುದು. http://rajkundra.net/

ತತ್ವಜ್ಞಾನಿ ಕುಂದ್ರಾ ತತ್ತ್ವಗಳೇನು?

ತತ್ವಜ್ಞಾನಿ ಕುಂದ್ರಾ ತತ್ತ್ವಗಳೇನು?

ಕುಂದ್ರಾ ತಮ್ಮ ಏರುಗತಿಯ ಅಭಿವೃದ್ಧಿಯ ಬಗ್ಗೆ ತತ್ವಜ್ಞಾನಿಯಂತೆ ಹೀಗೆ ಹೇಳಿಕೊಂಡಿದ್ದಾರೆ. Life teaches you many things. My journey as an entrepreneur has been my practical MBA in life! On the way I have made many mistakes and learnt from them. ಇದು ಇಂದಿನ ಆತನ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ.

ಮಗನ ತಲೆಸವರಿ ಬುದ್ಧಿವಾದ ಹೇಳಿದ್ದರು

ಮಗನ ತಲೆಸವರಿ ಬುದ್ಧಿವಾದ ಹೇಳಿದ್ದರು

ಕುಂದ್ರಾ ತಂದೆ ಲಂಡನ್ನಿನಲ್ಲಿ ಬಟ್ಟೆ ಫ್ಯಾಕ್ಟರಿಯಲ್ಲಿ ಮೈಮುರಿದು ದುಡಿಯುತ್ತಿದ್ದರು. ತಾಯಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ದಂಪತಿ ಪಂಜಾಬ್ ಮೂಲದವರು. ಮಗ ಕಾಲೇಜು ಮೆಟ್ಟಿಲು ಹತ್ತುತ್ತಿದ್ದಂತೆ ನನಗೆ ಶಿಕ್ಷಣ ಸಾಕು ಎಂದು ಘೋಷಿಸಿದಾಗ ಅವನ ತಲೆ ಸವರುತ್ತಾ ಅಪ್ಪ ಬಾಲಕೃಷ್ಣ ಕುಂದ್ರಾ 'ಮಗಾ ನಿನ್ನ ಭವಿಷ್ಯದ ಬಗ್ಗೆ ಆಲೋಚಿಸು. ಏನಾದರೂ ವ್ಯಾಪಾರವಾದರೂ ಮಾಡು' ಎಂದು ಬೆನ್ನು ತಟ್ಟಿ ಎಬ್ಬಿಸಿದರು.

ಕುಂದ್ರಾ ವಜ್ರ ವ್ಯಾಪಾರಿಯೂ ಆದರು

ಕುಂದ್ರಾ ವಜ್ರ ವ್ಯಾಪಾರಿಯೂ ಆದರು

ಬೆನ್ನುಕೊಡವಿಕೊಂಡು ಎದ್ದ ಕುಂದ್ರಾ ಸೀದಾ ನೇಪಾಳಕ್ಕೆ ಹಾರಿಬಂದ. ಅಲ್ಲಿ ಪಷ್ಮಿನ ಶಾಲುಗಳನ್ನು ಖರೀದಿಸತೊಡಗಿದ. ಅದನ್ನು ನೇರವಾಗಿ ಬ್ರಿಟನ್ನಿಗೆ ಹೊತ್ತೊಯ್ದು ಮಾರಾಟ ಮಾಡತೊಡಗಿದ. ಹಾಗೆ ಕುಂದ್ರಾ ಹರಡಿದ ಶಾಲು ಮೇಲೆ ಲಕ್ಷಾಂತರ ರೂ ಝಣಝಣ ಎಂದಿತು.
ಆದರೆ ಶಾಲು ಹಾಸಿದ್ದು ಸಾಕು ಎನಿಸಿ, ಕುಂದ್ರಾ ಅಲ್ಲಿಂದ ಸೀದಾ ದುಬೈಗೆ ತೆರಳಿ ಅಲ್ಲಿ ವಜ್ರಾಭರಣ ವ್ಯಾಪಾರಕ್ಕೆ ಕೈಹಾಕುತ್ತಾರೆ. ಜತೆಗೆ ಆ ಬಗ್ಗೆ ಅಲ್ಪಾವಧಿ ಕೋರ್ಸ್ ಸಹ ಮಾಡುತ್ತಾರೆ. ಕುತೂಹಲಕಾರಿ ಸಂಗತಿಯೆಂದರೆ ಅದೇ ಸಂದರ್ಭದಲ್ಲಿ ಅಂದರೆ 2012ರಲ್ಲಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡುವ ಕುಂದ್ರಾ, ದಾರಾ ಸಿಂಗ್ ಪುತ್ರ ತನಗೆ ಆತ್ಮೀಯ ಸ್ನೇಹಿತ ಎಂದು ಹೇಳಿಕೊಳ್ಳುತ್ತಾರೆ. 2004ರ ವೇಳೆಗೆ ಕುಂದ್ರಾ 198th richest British Asian ಎಂದು ಗುರುತಿಸಲ್ಪಡುತ್ತಾರೆ.

ರಿಯಾಲ್ಟಿ ಷೋ ಬೆಡಗಿಯ ಮೇಲೆ ಬಿತ್ತು ಕಣ್ಣು

ರಿಯಾಲ್ಟಿ ಷೋ ಬೆಡಗಿಯ ಮೇಲೆ ಬಿತ್ತು ಕಣ್ಣು

ಹೈಪ್ರೊಫೈಲ್ ಲೈಫ್ ಗೆ ಒಗ್ಗಿಕೊಂಡ ಕುಂದ್ರಾ ಮೊದಲ ಮದುವೆ ಎರಡೇ ವರ್ಷದಲ್ಲಿ ಮುರಿದುಬೀಳುತ್ತದೆ. Celebrity Big Brother ಟಿವಿ ರಿಯಾಲ್ಟಿ ಷೋನಲ್ಲಿ ಅದಾಗತಾನೆ ಬ್ರಿಟನ್ನಿನಲ್ಲಿ ಮನೆಮಾತಾಗಿದ್ದ ಶಿಲ್ಫಾ ಶೆಟ್ಟಿ ಎಂಬ ಬೆಡಗಿ ಕುಂದ್ರಾ ಮನದ ಮಾತಾಗುತ್ತಾಳೆ. 2008ರಲ್ಲಿ ಮಂಗಳೂರು ಕುಡಿ ಶಿಲ್ಪಾ ಆತನೊಂದಿಗೆ ಸಪ್ತಪದಿ ತುಳಿದು, ಆತನ ಮನೆ ಸೇರಿಕೊಳ್ಳುತ್ತಾಳೆ.
ದುಬೈನಲ್ಲಿರುವ ವಿಶ್ವದ ಅತಿ ಎತ್ತರದ ಬಿಲ್ಡಿಂಗ್ Burj Khalifaದಲ್ಲಿ ಒಂದು ಅಪಾರ್ಟ್ ಮೆಂಟ್ ಮತ್ತು ಮಧ್ಯ ಲಂಡನ್ನಿನಲ್ಲಿ ಒಂದು ಮನೆಯನ್ನು ಶಿಲ್ಪಾಗೆ ಮದುವೆ ಗಿಫ್ಟ್ ಆಗಿ ಕೊಡುತ್ತಾರೆ. ಮುಂದೆ ಶಿಲ್ಪಾ ಕಾಲ್ಗುಣವೆಂದು ಆಂಟ್ವರ್ಪ್, ರಷ್ಯಾ, ಉಕ್ರೇನ್ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಗಣಿಗಾರಿಕೆ, ರಿಯಲ್ ಎಸ್ಟೇಟ್ ಮತ್ತು ಮರು ಇಂಧನ ವಹಿವಾಟು, ಮನೋರಂಜನೆ, ಆತಿಥ್ಯೋದ್ಯಮ ಕ್ಷೇತ್ರಗಳಲ್ಲಿ ಕುಂದ್ರಾ ದಂಪತಿ ರಾಕೆಟ್ ವೇಗದಲ್ಲಿ ಪ್ರಗತಿ ಸಾಧಿಸುತ್ತಾರೆ.

'ಬುಕ್ಕಿ' ಉಮೇಶ್ ಗೋಯಂಕಾ ಸಾಥ್

'ಬುಕ್ಕಿ' ಉಮೇಶ್ ಗೋಯಂಕಾ ಸಾಥ್

ಈ ಮಧ್ಯೆ ಅಶ್ವಿನಿ ಸ್ಟೀಲ್ ಎಂಬ ಕಂಪನಿ ಅಸ್ತಿತ್ವಕ್ಕೆ ಬರುತ್ತದೆ. ಅದರಲ್ಲಿ ರಾಜ್ ಕುಂದ್ರಾ, ಕರಣ್ ಸಿಂಗ್ ಗುಲಾಟಿ ಮತ್ತು ಉಮೇಶ್ ಗೋಯೆಂಕಾ ಪ್ರವರ್ತಕರಾಗಿ ಕಾಣಿಸಿಕೊಳ್ಳುತ್ತಾರೆ. ಈ ತ್ರಿಮೂರ್ತಿಗಳ ಪೈಕಿ ದಿಲ್ಲಿ ಪೊಲೀಸರು ಉಮೇಶ್ ಗೋಯಂಕಾಗೆ ಈಗಾಗಲೇ 'ಬುಕ್ಕಿ' ಎಂಬ ಹಣೆಪಟ್ಟಿ ಹಚ್ಚಿದ್ದಾರೆ. ಈ ಬುಕ್ಕಿ ಮೂಲಕವೇ ಬಾಜಿಗಾರ್ ಕುಂದ್ರಾ ಬೆಟ್ಟಿಂಗ್ ನಡೆಸುತ್ತಿದ್ದುದು ಎಂದು ಪೊಲೀಸರು ಘೋಷಿಸಿದ್ದಾರೆ.

ಜೈಲುವಾಸಿ ಸಂಜಯ್ ದತ್ ಸಹಭಾಗಿತ್ವ

ಜೈಲುವಾಸಿ ಸಂಜಯ್ ದತ್ ಸಹಭಾಗಿತ್ವ

ಮನೋರಂಜನೆ ಕ್ಷೇತ್ರದಲ್ಲಿ ಹಿಡಿತ ಸಿಕ್ಕ ಬಳಿಕ ಕುಂದ್ರಾ, ಹಾಲಿ ಜೈಲುವಾಸಿ ಸಂಜಯ್ ದತ್ ಸಹಭಾಗಿತ್ವದಲ್ಲಿ Super Fight League ಮೂಲಕ ಮಾರ್ಷಲ್ ಕಲೆಗಳನ್ನು ಭಾರತಕ್ಕೆ ಪರಿಚಯಿಸುತ್ತಾರೆ.

ಮೂಲದಿಂದಲೇ ಸಾಮ್ರಾಜ್ಯ ವಿಸ್ತಾರ

ಮೂಲದಿಂದಲೇ ಸಾಮ್ರಾಜ್ಯ ವಿಸ್ತಾರ

ಕೊನೆಗೆ ಕುಂದ್ರಾ ತನ್ನ ವೆಬ್ ಸೈಟಿನಲ್ಲಿ ಹೀಗೆ ಬರೆದುಕೊಂಡಿದ್ದಾರೆ- ಅಮೆರಿಕದ ಖ್ಯಾತ ಉದ್ಯಮಿ, ಆಗರ್ಭ ಶ್ರೀಮಂತ ವಾರೆನ್ ಬಫೆಟ್ ಹೇಳುವಂತೆ ಒಂದೇ ಮೂಲವನ್ನು ನೆಚ್ಚಿಕೊಂಡು ಉದ್ಯಮ ಬೆಳೆಸಬಾರದು. ಹಿಂದಿನ ಮೂಲದಿಂದ ಬಂದ ಹಣದಿಂದ ಮತ್ತಷ್ಟು ಮಗದಷ್ಟು ಮೂಲಗಳನ್ನು ನಿರ್ಮಿಸಿಕೊಳ್ಳಬೇಕು ಎಂಬ ಜಾಣ್ನುಡಿಯನ್ನು ಕುಂದ್ರಾ ಶಿರಸಾವಹಿಸಿ ಪಾಲಿಸುತ್ತಾರೆ. ಅದು ಕೊನೆಗೆ ಈಗೀಗ ದಿಲ್ಲಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ 12 ಗಂಟೆ ಕಾಲ ವಿಚಾರಣೆಗೆ ಒಳಗಾಗುವವರೆಗೂ ಕುಂದ್ರಾ ಜೀವನಗಾಥೆ ಮುಂದುವರಿದಿದೆ.

English summary
IPL Spot Fixing Raj Kundra college dropout pashmina shawls seller to baazigar. A man, they say, is known by the company he keeps. And the snapshots posted on the website, rajkundra.net, suggest that the 37-year-old British-Asian was often in august company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X