ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು : ತರಕಾರಿ ಬೆಲೆ ಕೇಳಿ ಜನರು ಸುಸ್ತು

|
Google Oneindia Kannada News

vegetabels
ಬೆಂಗಳೂರು, ಜೂ.3 : ಮಹಾನಗರ ಬೆಂಗಳೂರಿನ ನಾಗರೀಕರು ತರಕಾರಿ ಬೆಲೆ ಕೇಳಿ ಮತ್ತೊಮ್ಮೆ ಬೆಚ್ಚಿಬಿದ್ದಾರೆ. ಪ್ರತಿ ತಿಂಗಳು ತರಕಾರಿ ಬೆಳೆ ಹೆಚ್ಚಳವಾಗುತ್ತಿದ್ದು, ಮಾರುಕಟ್ಟೆಗೆ ತರಕಾರಿ ಕೊಳ್ಳಲು ಹೋದ ಜನಸಾಮಾನ್ಯರು ತರಕಾರಿಯನ್ನು ಕೇವಲ ನೋಡಿಕೊಂಡು ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮೇ ಕೊನೆಯ ವಾರದಲ್ಲಿ ಗಗನಕ್ಕೆ ಏರಿದ ತರಕಾರಿ ಬೆಲೆ ಕೆಳಗಿಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಮುಂಗಾರು ಮಳೆ ಭರ್ಜರಿಯಾಗಿ ಆರಂಭವಾದರೆ, ತರಕಾರಿ ಬೆಲೆಗಳು ಕಡಿಮೆ ಆಗುತ್ತವೆ ಎಂಬ ಮಾತುಗಳು ಹರಿದಾಡುತ್ತಿವೆ. ಆದ್ದರಿಂದ ವರುಣ ದೇವ ಮಾತ್ರ ತರಕಾರಿ ಬೆಲೆ ಬಿಸಿಗೆ ತಣ್ಣೀರು ಸುರಿಯಬಹುದು.

ರಾಜ್ಯದಲ್ಲಿ ಈಗಾಗಲೇ ಮಂದಗತಿಯಲ್ಲಿ ಆರಂಭವಾಗಿರುವ ಮುಂಗಾರು ಉತ್ತಮವಾಗಿ ಬಂದರೆ ಶೇ. 20 ರಷ್ಟು ತರಕಾರಿ ಬೆಲೆ ಕಡಿಮೆ ಆಗಲಿದೆ ಎನ್ನುವುದು ಹಾಪ್ ಕಾಮ್ಸ್ ಅಧಿಕಾರಿಗಳ ವಿಶ್ಲೇಷಣೆ. ಬೆಂಗಳೂರು ನಗರದ ಸುತ್ತ ಮುತ್ತಲೂ ಉತ್ತಮ ಮಳೆ ಆದರೆ, ತರಕಾರಿ ದರ ಕಡಿಮೆ ಆಗಲಿದೆ ಎನ್ನುತ್ತಾರೆ.

ಮಾರುಕಟ್ಟೆ, ಸಣ್ಣ ತರಕಾರಿ ಅಂಗಡಿಗಳು ಹಾಗೂ ಮಾಲ್‌ಗ‌ಳಲ್ಲಿ ತರಕಾರಿ ಬೆಲೆ ಹಾಪ್‌ಕಾಮ್ಸ್‌ಗಿಂತ ಶೇ.30 ರಷ್ಟು ಹೆಚ್ಚಳವಾಗಿದೆ. ಇದು ಕೂಡ ಗ್ರಾಹಕರ ಜೇಬಿಗೆ ಸರಿಯಾಗಿಯೇ ಕತ್ತರಿ ಹಾಕಿದೆ. ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ರೈತರಿಂದ ನೇರವಾಗಿ ತರಕಾರಿ ಖರೀದಿಸಿ, ಗ್ರಾಹಕರಿಗೆ ನೀಡಲಾಗುತ್ತಿದೆ. ಆದ್ದರಿಂದ ದರ ಸ್ಪಲ್ಪ ಕಡಿಮೆ ಇದೆ.

ಹೇಗಿದೆ ತರಕಾರಿ ರೇಟು : ಎರಡು ದಿನಗಳ ಹಿಂದೆ ಟೊಮೆಟೋ ಬೆಲೆ ಕೆಜಿಗೆ 54 ರೂ ಇತ್ತು ಶುಕ್ರವಾರ 80 ರೂ. ಆಗಿದೆ. ಬೀನ್ಸ್‌ 100 ರೂ, ಕ್ಯಾರೆಟ್‌ 80 ರೂ, ಹಸಿಮೆಣಸಿನಕಾಯಿ 160 ರೂ, ಶುಂಠಿ 400 ರೂ, ಬದನೆಕಾಯಿ 60 ರೂ.ಗೆ ಮಾರಾಟವಾಗುತ್ತಿದೆ.

ಕಡಿಮೆ ದರಕ್ಕೆ ಯಾವ ತರಕಾರಿ ದೊರೆಯುತ್ತದೆ ಎಂದು ಜನರು ಪೂರ್ಣ ಮಾರುಕಟ್ಟೆ ಸುತ್ತಿದರೂ ಏನು ದೊರೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಾಟಿ ಟೊಮೆಟೋ ಬೆಲೆ ಕೆಜಿಗೆ 160 ರೂಪಾಯಿಯಾಗಿದೆ. ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಜೊತೆಗೆ ತರಕಾರಿ ಕೊಳ್ಳುವುದು ಜನರಿಗೆ ಹೊರೆಯಾಗಿದೆ.

ಹೆಚ್ಚಳಕ್ಕೆ ಕಾರಣ : ನೀರಿನ ಸಮಸ್ಯೆ, ವಿದ್ಯುತ್‌ ಸಮಸ್ಯೆ, ತರಕಾರಿ ಸರಬರಾಜು ಮಾಡಲು ವಾಹನಗಳ ಅಧಿಕ ಬಾಡಿಗೆ ಮುಂತಾದ ಕಾರಣಗಳಿಂದಾಗಿ ಬೆಲೆ ಹೆಚ್ಚಳವಾಗಿದೆ. ಉತ್ತಮ ಮಳೆ ಆದರೆ ಮಾತ್ರ, ತರಕಾರಿಗಳ ಬೆಲೆ ಶೇ. 20 ರಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ.

ಬೆಂಗಳೂರಿಗೆ ತರಕಾರಿ ಸರಬರಾಜು ಮಾಡುವ ತುಮಕೂರು, ಕೋಲಾರ, ಮೈಸೂರು ಹಾಗೂ ಬೆಂಗಳೂರಿನ ಸುತ್ತಮುತ್ತ ಪ್ರತಿ ವರ್ಷ ತರಕಾರಿ ಬೆಳೆಯುವವರ ಸಂಖ್ಯೆ ಕುಸಿಯುತ್ತಿದೆ. ಬೆಂಗಳೂರಿನ ಸುತ್ತಮುತ್ತ ತರಕಾರಿ ಬೆಳೆಯುವ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದಿದೆ. ಆದ್ದರಿಂದ ಬೆಳೆ ನೀರಿನ ಕೊರತೆ ಉಂಟಾಗಿದೆ.

ತರಕಾರಿ ಬೆಲೆ ಪಟ್ಟಿ (ಕೆ.ಜಿ)
ಬೀನ್ಸ್‌ - 100 ರೂ.
ಟೊಮೆಟೋ - 80 ರೂ.
ಕ್ಯಾರೆಟ್‌ - 80 ರೂ.
ಬೀಟರೂಟ್‌ - 60 ರೂ.
ಬದನೆಕಾಯಿ - 60 ರೂ.
ಹೂ ಕೋಸು - 30 ರೂ.
ಶುಂಠಿ - 218 ರೂ.

English summary
Compared to May month, the prices of all vegetables has doubled in Bangalore city. because of water problem in Bangalore rural areas prices of all vegetables has doubled. according to hop coms officials this will continue for till this month end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X