ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಬಳ ಕೊಡಲು ಬಿಡಿಗಾಸಿಲ್ಲ ಎಂದ ಮಲ್ಯ

By Mahesh
|
Google Oneindia Kannada News

Vijay Mallya to Kingfisher staff
ಬೆಂಗಳೂರು, ಜೂ.7: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿರುವ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ಏರ್ ಲೈನ್ಸ್ ಸಮಸ್ಯೆ ಮುಂದುವರೆಯುತ್ತಲೇ ಇದೆ. ಸಿಬ್ಬಂದಿಗಳು ಸಂಬಳಕ್ಕಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೂತರೂ ಕರಗದ ಮದ್ಯದ ದೊರೆ ನನ್ನ ಬಳಿ ಬಿಡಿಗಾಸಿಲ್ಲ ಎಂದಿದ್ದಾರೆ.
ಸಿಎನ್ಎನ್ ಐಬಿಎನ್ ಸುದ್ದಿ ವಾಹಿನಿ ಜೊತೆ ಮಾತನಾಡಿದ ಕಿಂಗ್ ಫಿಷರ್ ಏರ್ ಲೈನ್ಸ್ ಒಡೆಯ ವಿಜಯ್ ಮಲ್ಯ, ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಸಿಬ್ಬಂದಿಗಳಿಗೆ ತಕ್ಷಣಕ್ಕೆ ಸಂಬಳ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಸುಮಾರು 60-70 ಮಂದಿ ಕಿಂಗ್ ಫಿಷರ್ ಸಿಬ್ಬಂದಿಗಳು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೂತಿದ್ದರು.

ಕಿಂಗ್ ಫಿಷರ್ ಹೌಸ್ ಎದುರು ಕುಳಿತ್ತಿದ್ದ ಸಿಬ್ಬಂದಿಗಳ ಪೈಕಿ 15 ಮಂದಿಯನ್ನು ಕರೆಸಿಕೊಂಡು ಕೆಲ ಹೊತ್ತು ಮಲ್ಯ ಮಾತನಾಡಿದರು. ನಂತರ ಮಾಂಟ್ರಿಯಲ್ ನಲ್ಲಿ ಫಾಮ್ಯೂಲಾ ಒನ್ ರೇಸ್ ಇರುವುದು ನೆಪಗಾಗಿ ಸಭೆ ಮುಗಿಸಿ ಹೊರಟು ಬಿಟ್ಟರು ಎಂದು ತಿಳಿದು ಬಂದಿದೆ.

ಕಳೆದ ಆಗಸ್ಟ್ ತಿಂಗಳಿನಿಂದ ಸಿಬ್ಬಂದಿಗಳಿಗೆ ಸಂಬಳ ನೀಡಲಾಗಿಲ್ಲ. ಅಕ್ಟೋಬರ್ 2012ರಿಂದ ಕಿಂಗ್ ಫಿಷರ್ ವಿಮಾನ ಹಾರಾಟ ಕಂಡಿಲ್ಲ. ಡಿಸೆಂಬರ್ ನಿಂದ ಹಾರಾಟ ಲೈಸನ್ಸ್ ಕೂಡಾ ಕಿಂಗ್ ಫಿಷರ್ ಸಂಸ್ಥೆ ಕಳೆದುಕೊಂಡಿದೆ.

ಫೆಬ್ರವರಿ ತಿಂಗಳಿನಲ್ಲಿ ಸಿಬ್ಬಂದಿಗಳಿಗೆ ಸಂಬಳ ನೀಡಿ, ಸಂಸ್ಥೆ ಪುನಃ ಆರಂಭಿಸುವ ಬಗ್ಗೆ ವಿಜಯ್ ಮಲ್ಯ ಭರವಸೆ ನೀಡಿದ್ದು ಹುಸಿಯಾಗಿದೆ. ಸುಮಾರು 17ಕ್ಕೂ ಅಧಿಕ ಬ್ಯಾಂಕುಗಳಿಂದ 7,500 ಕೋಟಿ ರು ಗೂ ಅಧಿಕ ಸಾಲದ ಹೊರೆಯನ್ನು ಮಲ್ಯ ಹೊತ್ತಿದ್ದು ಈ ಪೈಕಿ 1000 ಕೋಟಿ ರು ಮಾತ್ರ ಚುಕ್ತಾ ಮಾಡಿದ್ದಾರೆ.

ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್(ಎಂಐಎಎಲ್) ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆ ಹಲವಾರು ತಿಂಗಳಿನಿಂದ ಸೇವಾ ತೆರಿಗೆ ಪಾವತಿಸಿಲ್ಲ ಎಂದು ಹೇಳಿ 7 ವಿಮಾನಗಳನ್ನು ಜಪ್ತಿ ಮಾಡಿತ್ತು. ನಂತರ ಕಿಂಗ್ ಫಿಷರ್ ಗೆ ಸೇರಿದ 15 ವಿಮಾನಗಳ ನೋಂದಣಿಯನ್ನು ಡಿಜಿಸಿಎ ರದ್ದುಗೊಳಿಸಿತ್ತು.

ಎಸ್ ಬಿಐನಿಂದಲೇ ಅರ್ಧದಷ್ಟು ಸಾಲದ ಮೊತ್ತ ವಿಜಯ್ ಮಲ್ಯ ಪಡೆದಿದ್ದಾರೆ. ಪೈಲಟ್ ಗಳ ಮುಷ್ಕರ, ವಿಮಾನ ಹಾರಾಟ ರದ್ದು, ವಿಮಾನಯಾನ ಸಂಸ್ಥೆ ಉಳಿಸಲು ಇತರೆ ಆಸ್ತಿ ಮಾರಾಟ ಮುಂತಾದ ಕಷ್ಟಕರ ಪರಿಸ್ಥಿತಿಯನ್ನು ಮಲ್ಯ ಎದುರಿಸಿದ್ದಾರೆ.

ಬ್ಯಾಂಕು ಗಳ ಅಂದಾಜಿನ ಪ್ರಕಾರ 'ಕಿಂಗ್ ಫಿಷರ್' ಬ್ರಾಂಡ್ ಮೌಲ್ಯ ಸುಮಾರು 4,100 ಕೋಟಿ ಇದೆ. ವಿಜಯ್ ಮಲ್ಯ ಸಂಸ್ಥೆ ವೈಯಕ್ತಿಕ ಗ್ಯಾರಂಟಿಯಾಗಿ 248.97 ಕೋಟಿ ರು ತೂಗುತ್ತಿದ್ದಾರೆ.

English summary
Vijay Mallya, chairman of the grounded Kingfisher Airlines today told his employees that he has no money to pay their salaries, CNBC-TV18 reported. The statement comes a day after a section of the employees sat on a hunger strike at the Kingfisher House in Mumbai
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X