ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಜ್ ಪಲಾವ್ ತಿನ್ನಲಾಗದ ದಿನಗಳು ಹತ್ತಿರ ಬರುತ್ತಿವೆ

|
Google Oneindia Kannada News

ಕೋಲಾರದಲ್ಲಿ ರೈತರು ಟೊಮ್ಯಾಟೊಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ರಾಷ್ಟೀಯ ಹೆದ್ದಾರಿಗೆ ಸುರಿದು ಪ್ರತಿಭಟನೆ ನಡೆಸುತ್ತಿದ್ದ ಕಾಲವಿತ್ತು. ಅದೇ ಟೊಮ್ಯಾಟೊಗೆ ಈಗ ಐವತ್ತರಿಂದ ಅರವತ್ತು ರೂಪಾಯಿ ಕೆಜಿಗೆ. ಗಗನಕ್ಕೆರಿದ ತರಕಾರಿ ಬೆಲೆಯ ನಡುವೆ ಮಧ್ಯಮ ವರ್ಗದವರ ಬದುಕು ದುಸ್ತರ ಸ್ವಾಮಿ ದುಸ್ತರ.

ಕೆಲವೊಂದು ತರಕಾರಿಯ ಬೆಲೆಗಳು ಚಿಕನ್, ಮಟನ್ ಬೆಲೆಯನ್ನೂ ಮೀರಿಸಿದ್ದು ಸೂಕ್ತ ಸಮಯದಲ್ಲಿ ಮಳೆಯಾಗದಿದ್ದರೆ ಏನು ಪರಿಣಾಮ ಆದೀತು ಎನ್ನುವುದಕ್ಕೊಂದು ಉದಾಹರಣೆ. ರಾಜ್ಯದ ಹೆಚ್ಚಿನ ಕಡೆ ಮುಂಗಾರು ಆರಂಭವಾಗಿದ್ದರೂ ತರಕಾರಿ ಬೆಲೆ ಇಳಿಯುತ್ತಿಲ್ಲ.

ರೈತರಿಂದ ಮಂಡಿಗೆ ಅಥವಾ ಎಪಿಎಂಸಿಗೆ ತರಕಾರಿ ಕೈಗೆಟಕುವ ಬೆಲೆಗೆ ಬಂದರೂ ಈ "ದಲ್ಲಾಳಿ"ಗಳಿದ್ದಾರಲ್ಲಾ ಅವರಿಂದಲೇ ತರಕಾರಿ ಬೆಲೆ ಹೆಚ್ಚಾಗುತ್ತಿರುವುದು ಎನ್ನುತ್ತಾರೆ ಬೆಂಗಳೂರಿನ ಕೆಲ ಚಿಲ್ಲರೆ ತರಕಾರಿ ವ್ಯಾಪಾರಸ್ಥರು. ಕೆಜಿಯೊಂದಕ್ಕೆ ಕನಿಷ್ಠ ಏಳರಿಂದ ಹದಿನೈದು ರೂಪಾಯಿವರೆಗೆ ಲಾಭ ಇಟ್ಟುಕೊಂಡೇ ವ್ಯಾಪರಕ್ಕೆ ಇಳಿಯುವ ದಲ್ಲಾಳಿಗಳು ದಿನಾಂತ್ಯಕ್ಕೆ ಜೇಬು ತುಂಬಿಕೊಂಡು ಹೋಗುತ್ತಿರುವುದು ದೈನಂದಿನ ಪರಿಪಾಠ.

ಪ್ರಮುಖವಾಗಿ ಮಲೆನಾಡು ಭಾಗದಲ್ಲಿ ತರಕಾರಿ ಬೆಲೆ ಈ ರೀತಿ ಹೆಚ್ಚಾಗಿರುವ ಉದಾಹರಣೆಗಳಿಲ್ಲ. ಸಸ್ಯಾಹಾರಿಗಳಿಗೆ ತರಕಾರಿ ಬೆಲೆ ಹೆಚ್ಚಾಗಿರುವುದು ದುಬಾರಿಯಾಗಿ ಪರಿಣಮಿಸುತ್ತಿದೆ. ದೈನಂದಿನ ಅಡಿಗೆಗೆ ಟೊಮ್ಯಾಟೊ ಬದಲು ಹುಣಸೇಹಣ್ಣು ಬಳಸುವುದೇ ಸೂಕ್ತ ಎನ್ನುವ ತೀರ್ಮಾನಕ್ಕೆ ಅಡುಗೆಯವರು ಬಂದರೂ ಅಚ್ಚರಿ ಪಡಬೇಕಾಗಿಲ್ಲ.

ಎಪಿಎಂಸಿ ಅಧಿಕಾರಿಗಳ ಪ್ರಕಾರ ರಾಜ್ಯದಲ್ಲಿ ಮಳೆಯಾಗಿದ್ದರೂ ತರಕಾರಿ ಬೆಲೆ ಇನ್ನೂ ಒಂದು ಅಥವಾ ಒಂದುವರೆ ತಿಂಗಳು ಕಮ್ಮಿಯಾಗುವ ಲಕ್ಷಣಗಳಿಲ್ಲ. ಬೀನ್ಸ್ ರೇಟ್ ಈ ಮಟ್ಟದಲ್ಲಿದ್ದರೆ ವೆಜಿಟೇಬಲ್ ಪಲಾವ್ ಎಲ್ಲಿಂದ ಮಾಡೋದು ಸ್ವಾಮಿ ಅನ್ನುತ್ತಾರೆ ದರ್ಶಿನಿ ಹೋಟೇಲ್ ನವರು.

ತರಕಾರಿ ಮತ್ತು ಹಣ್ಣಿನ ಕಳೆದೆರಡು ದಿನದ ಬೆಲೆ ಎಷ್ಟಿದೆ ಸ್ಲೈಡಿನಲ್ಲಿ ನೋಡಿ..

ತರಕಾರಿ ಬೆಲೆ (ಕೆಜಿಯೊಂದಕ್ಕೆ)

ತರಕಾರಿ ಬೆಲೆ (ಕೆಜಿಯೊಂದಕ್ಕೆ)

ಮಂಗಳೂರು ಸೌತೇಕಾಯಿ - 19 ರಿಂದ 25
ಡಬಲ್ ಬೀನ್ಸ್ - 130 ರಿಂದ 150
ಹೀರೇಕಾಯಿ - 40 ರಿಂದ 60
ಬೀಟ್ರೋಟ್ 35 ರಿಂದ 55
ಬದನೇಕಾಯಿ - 40 ರಿಂದ 65

ತರಕಾರಿ ಬೆಲೆ (ಕೆಜಿಯೊಂದಕ್ಕೆ)

ತರಕಾರಿ ಬೆಲೆ (ಕೆಜಿಯೊಂದಕ್ಕೆ)

ಕ್ಯಾಬಿಜ್ - 25 ರಿಂದ 37
ದೊಡ್ಡಮೆಣಸಿನಕಾಯಿ - 60 ರಿಂದ 65
ಕ್ಯಾರಟ್ - 45 ರಿಂದ 70
ಟೊಮ್ಯಾಟೊ - 50 ರಿಂದ 65
ಕ್ವಾಲಿಫ್ಲವರ್ - 30 ರಿಂದ 40

ತರಕಾರಿ ಬೆಲೆ (ಕೆಜಿಯೊಂದಕ್ಕೆ)

ತರಕಾರಿ ಬೆಲೆ (ಕೆಜಿಯೊಂದಕ್ಕೆ)

ಬಜ್ಜಿ ಮೆಣಸಿನಕಾಯಿ - 45 ರಿಂದ 50
ಹಸಿಮೆಣಸಿನಕಾಯಿ - 110 ರಿಂದ 125
ನುಗ್ಗೇಕಾಯಿ - 35 ರಿಂದ 40
ಬೆಂಡೇಕಾಯಿ - 35 ರಿಂದ 40
ಈರುಳ್ಳಿ - 38 ರಿಂದ 44
ತೊಂಡೇಕಾಯಿ - 38 ರಿಂದ 47

ತರಕಾರಿ, ಹಣ್ಣಿನ ಬೆಲೆ (ಕೆಜಿಯೊಂದಕ್ಕೆ)

ತರಕಾರಿ, ಹಣ್ಣಿನ ಬೆಲೆ (ಕೆಜಿಯೊಂದಕ್ಕೆ)

ಬೀನ್ಸ್ - 80 ರಿಂದ 120
ಹಸಿಶುಂಠಿ - 350 ರಿಂದ 410
ಬಟಾಣಿ - 280 ರಿಂದ 410
ತೆಂಗಿನಕಾಯಿ - 10 ರಿಂದ 18
ನೇಂದ್ರ ಬಾಳೆಹಣ್ಣು - 40 ರಿಂದ 45
ಏಲಕ್ಕಿ ಬಾಳೆಹಣ್ಣು - 45 ರಿಂದ 50
ಸಪೋಟ - 20 ರಿಂದ 30

ತರಕಾರಿ, ಹಣ್ಣಿನ ಬೆಲೆ (ಕೆಜಿಯೊಂದಕ್ಕೆ)

ತರಕಾರಿ, ಹಣ್ಣಿನ ಬೆಲೆ (ಕೆಜಿಯೊಂದಕ್ಕೆ)

ವಿವಿಧ ರೀತಿಯ ಮಾವಿನಹಣ್ಣು - 20 ರಿಂದ 70
ಮೂಸಂಬಿ - 50 ರಿಂದ 65
ಕಿತ್ತಳೆ ಹಣ್ಣು - 60 ರಿಂದ 70
ಪಪ್ಪಾಯಿ - 18 ರಿಂದ 25
ಅನಾನಸ್ -66 ರಿಂದ 65
ಆಲೂಗೆಡ್ಡೆ - 40 ರಿಂದ 48
ವಿವಿಧ ರೀತಿಯ ದ್ರಾಕ್ಷಿ - 45 ರಿಂದ 85

English summary
Prices of vegetables increasing day by day. Beans touched maximum of Rs. 125/- per kg and Tomato Rs. 60/- per kg.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X