ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಟ್ಟಿಂಗ್ ಜಾಲದಲ್ಲಿ ಶಿಲ್ಪಾ ಶೆಟ್ಟಿ, ಏನಿದು ಕತೆ?

By Mahesh
|
Google Oneindia Kannada News

ಮುಂಬೈ, ಜೂ.6: ಶ್ರೀನಿವಾಸನ್, ಗುರುನಾಥ್, ಶ್ರೀಶಾಂತ್, ಧೋನಿ ನಂತರ ಟಿವಿ ಮಾಧ್ಯಮಗಳ ಕಣ್ಣು ಈಗ ರಾಜಸ್ಥಾನ ರಾಯಲ್ಸ್ ಸಹ ಮಾಲೀಕ ರಾಜ್ ಕುಂದ್ರಾ ಮೇಲೆ ನೆಟ್ಟಿದ್ದ ಕಣ್ಣು ಈಗ ಶಿಲ್ಪಾ ಶೆಟ್ಟಿಯತ್ತ ತಿರುಗಿದೆ. ಫಿಕ್ಸಿಂಗ್ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಹೆಸರನ್ನು ವಿಚಾರಣಾಧೀನ ಬುಕ್ಕಿ ಬಾಯ್ಬಿಟ್ಟಿದ್ದಾನೆ.

ಬುಧವಾರ ಸುಮಾರು 12 ಗಂಟೆಗಳ ಕಾಲ ವಿಚಾರಣೆಗೆ ಒಳಪಟ್ಟ ರಾಜ್ ಕುಂದ್ರಾ ಬಗ್ಗೆ ತಂಡದ ಸಹ ಒಡತಿ ನಟಿ ಶಿಲ್ಪಾ ಶೆಟ್ಟಿ ಸಹಜವಾಗಿ ಕಂಗಾಲಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡ ಶ್ರೀಶಾಂತ್, ಅಜಿತ್ ಚಂಡಿಲ ಹಾಗೂ ಅಂಕಿತ್ ಚಾವ್ಹಾಣ್ ಅವರು ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಸದ್ಯಕ್ಕೆ ರಾಜ್ ಕುಂದ್ರಾ ಬಂಧನ ಭೀತಿ ಎದುರಿಸುತ್ತಿದ್ದಾರೆ ಎಂಬ ಸುದ್ದಿ ಬಂದಿತ್ತು.

Shilpa Shetty

ಲೇಟೆಸ್ಟ್ ಅಪ್ದೇಡ್ ನಿಮಗಾಗಿ ಇಲ್ಲಿದೆ:
ಸಮಯ 3.20:
* ಶಿಲ್ಪಾ ಶೆಟ್ಟಿ ಕೂಡಾ ಒಂದೆರಡು ಪಂದ್ಯಗಳ ಮೇಲೆ ಬೆಟ್ಟಿಂಗ್ ಕಟ್ಟಿದ್ದರು ಎಂದು ದೆಹಲಿ ಮೂಲದ ಬುಕ್ಕಿ ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಟ್ಟಿದ್ದಾನೆ.
* ಕ್ರೈಂ ಬ್ರ್ಯಾಂಚ್ ಪೊಲೀಸರ ಮುಂಚೆ ಸುಮಾರು 10-12 ಗಂಟೆ ವಿಚಾರಣೆಗೆ ಒಳಪಟ್ಟ ನಂತರ ಪೊಲೀಸರನ್ನು ಹೊಗಳಿ ಟ್ವೀಟ್ ಮಾಡಿದ್ದ ಜೊತೆಗೆ ನಾನು ಮಾಡಿದ್ದು ಬೆಟ್ಟಿಂಗ್, ಫಿಕ್ಸಿಂಗ್ ಅಲ್ಲ ಎಂದು ರಾಜ್ ಕುಂದ್ರಾ ಹೇಳಿದ್ದರು.

* ಶಿಲ್ಪಾ ಶೆಟ್ಟಿ ಒಡೆತನದ ರಾಜಸ್ಥಾನ್ ರಾಯಲ್ಸ್ ತಂಡ ಫೆಮಾ(FEMA) ಕಾಯ್ದೆ ಉಲ್ಲಂಘಿಸಿ, 100 ಕೋಟಿ ರು ದಂಡ ಹೊರೆ ಹೊತ್ತಿತ್ತು.

ಸಮಯ 2.15: ರಾಜ್ ಕುಂದ್ರಾ ಬಂಧನವನ್ನು ತಳ್ಳಿ ಹಾಕಿದ ದೆಹಲಿ ಪೊಲೀಸರು, ಸರಿಯಾದ ಸಾಕ್ಷಿ ಸಿಕ್ಕಿಲ್ಲ ಎಂದಿದ್ದಾರೆ.ಬ್ರಿಟಿಷ್ ನಾಗರೀಕ ರಾಜ್ ಕುಂದ್ರಾ ಬಂಧನ ಕೂಡಾ ಅಷ್ಟು ಸುಲಭವಲ್ಲ ಎನ್ನಲಾಗಿದೆ.

ಸಮಯ 12.00 : ಕುಂದ್ರಾರಿಂದ ತಪ್ಪೊಪ್ಪಿಗೆ: ಬೆಟ್ಟಿಂಗ್ ಮಾಡಿದ್ದು ನಿಜ.

* ಟೈಮ್ಸ್ ನೌ ಪ್ರಕಾರ ರಾಜ್ ಕುಂದ್ರಾ ಅವರು ಬೆಟ್ಟಿಂಗ್ ಮಾಡಿದ್ದನ್ನು ದೆಹಲಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.

* ಕುಂದ್ರಾ ಆಪ್ತ ಗೆಳೆಯ ಉಮೇಶ್ ಗೊಯಿಂಕಾ ಅವರು ಕುಂದ್ರಾ ಹೆಸರು ದುರ್ಬಳಕೆ ಮಾಡಿಕೊಂಡರು ಎಂದು ಶಿಲ್ಪಾ ಕಂಗಾಲು.

* ರಾಜ್ ಕುಂದ್ರಾ ಅವರ ಪಾಸ್ ಪೋರ್ಟ್ ಜಪ್ತಿ ಮಾಡಲಾಗಿದ್ದು, ದೇಶ ಬಿಟ್ಟು ತೆರಳದಂತೆ ಆದೇಶಿಸಲಾಗಿದೆ.

ಸಮಯ 10.00: ಅಂಕಿತ್ ಚೌವ್ಹಾಣ್ ಗೆ ನೀಡಿದ್ದ ಗಡುವು ಇಂದಿಗೆ ಮುಕ್ತಾಯವಾಗಿದ್ದು, ಕೋರ್ಟಿಗೆ ಶರಣಾಗಬೇಕಿದೆ. ಬೆಳಗ್ಗೆಯೇ ಮುಂಬೈ ಬಿಟ್ಟಿರುವ ಅಂಕಿತ್ ಅವರು ದೆಹಲಿ ತಲುಪಿ ಕೋರ್ಟಿಗೆ ಆಗಮಿಸಲಿದ್ದಾರೆ.

* ಜೂ.2 ರಂದು ಐಟಿ ಕನ್ಸಲ್ಟೆಂಟ್ ನೇಹಾ ಸಂಬಾರಿ ಅವರನ್ನು ಅಂಕಿತ್ ಚೌವ್ಹಾಣ್ ಮದುವೆಯಾಗಿದ್ದರು.

English summary
Rajasthan Royals' co-owner Raj Kundra's passport has been seized by Delhi Police which questioned him for about 10 hours in connection with the IPL spot-fixing scandal and allegations that he was into betting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X