ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋಕಾ ಪಕಡ್ ಬಂಧಿ ಬಿಗಿ: ಶ್ರೀಶಾಂತ್ ಕಥೆ ಫಿನಿಶ್

By Srinath
|
Google Oneindia Kannada News

ನವದೆಹಲಿ, ಜೂನ್ 5: ಕಳ್ಳಾಟದ ಬೆನ್ನುಹತ್ತಿರುವ ಪೊಲೀಸರು ನಿನ್ನೆ ಸಖತ್ ಧೈರ್ಯ/ಬುದ್ಧಿಮತ್ತೆ ತೋರಿದ್ದಾರೆ. ಕಳ್ಳಾಟಕ್ಕೆ ಸಾಧ್ಯವಾದಷ್ಟು ಮಟ್ಟಿಗೆ ಅಂತ್ಯಹಾಡಿ ಸಭ್ಯ ಆಟಕ್ಕೆ ಅಂಟಿರುವ ಕಳಂಕವನ್ನು ಹೋಗಲಾಡಿಸಲು ಮುಂದಾಗಿರುವ ಪೊಲೀಸರು ಕಳ್ಳಾಟದ A1 ಧೂರ್ತ ಶ್ರೀಶಾಂತನ ವಿರುದ್ಧ ಮೋಕಾ (MCOCA) ಕೇಸು ಜಡಿದಿದ್ದಾರೆ.

A1 ಧೂರ್ತ ಶ್ರೀಶಾಂತ ಈಗ ಒಂದಿನಿತೂ ಅನುಮಾನಕ್ಕೆ ಎಡೆಮಾಡಿಕೊಡದಂತೆ ತಾನು ತಪ್ಪಿತಸ್ಥನಲ್ಲ ಎಂದು ನಿರೂಪಿಸುವುದು ಅತ್ಯಗತ್ಯವಾಗಿದೆ. ಇಲ್ಲವಾದಲ್ಲಿ Maharashtra Control of Organised Crime Act ಅನ್ವಯ ಸೆಕ್ಷನ್ 3ರಲ್ಲಿ ದೆಹಲಿ ಪೊಲೀಸರು ಕೇಸು ದಾಖಲಿಸಿರುವುದರಿಂದ ಶ್ರೀಶಾಂತ ತಾನು ಬಳಸುತ್ತಿದ್ದ ಕುಖ್ಯಾತ ಬಿಳಿ ಟರ್ಕಿ ಟವಲಿನಲ್ಲಿ ಜೀವಾವಧಿ ಕಣ್ಣೀರು ಒರಿಸಿಕೊಳ್ಳುವ ದುರ್ಗತಿ ಒದಗಲಿದೆ.

ipl-spot-fixing-mcoca-charged-against-sreesanth
ಇದೇ ವೇಳೆ, ಐಪಿಎಲ್ ಕಳ್ಳಾಟದ ಪ್ರಕರಣವನ್ನು ಆಧಾರವಾಗಿಸಿಕೊಂಡು ದೆಹಲಿ ಪೊಲೀಸರು ಭಾರತದ most-wanted ಭೂಗತ ಪಾತಕಿ (ಇವನಿಗೆ underworld don ಪಟ್ಟ ಕಟ್ಟಲು ಮನಸು ಒಪ್ಪುವುದಿಲ್ಲ, ಅಲ್ವಾ?) ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲನ ವಿರುದ್ಧ ಅತ್ಯಂತ ಬಲಿಷ್ಠ ಮತ್ತು ಕಠಿಣ ಕಾನೂನಾದ ಮೋಕಾವನ್ನು ಜಾರಿಗೊಳಿಸಿದ್ದಾರೆ.

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಈ ತ್ರಿಮೂರ್ತಿಗಳ ವಿರುದ್ಧ ಬಲಾಢ್ಯ ಸಾಕ್ಷ್ಯವಿದೆ. ಹಾಗಾಗಿ ಅವರ ವಿರುದ್ಧ ಮೋಕಾ ಜಾರಿಗೊಳಿಸಿರುವುದಾಗಿ ಪೊಲೀಸರು ನಿನ್ನೆ ಕೋರ್ಟಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಪ್ರಕರಣದಲ್ಲಿ ಇನ್ನೂ 20ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದೇವೆ ಎಂದೂ ಪೊಲೀಸರು ಹೇಳಿದ್ದಾರೆ.

ಶ್ರೀಶಾಂತನ ವಿರುದ್ಧ ಆರೋಪ ದೃಢಪಟ್ಟರೆ ಜೀವಾವಧಿ ಶಿಕ್ಷೆ (ಇತ್ತೀಚೆಗೆ ಜೀವಾವಧಿ ಶಿಕ್ಷೆ ಅಂದರೆ ಜೀವನದುದ್ದಕ್ಕೂ ಜೈಲು ಶಿಕ್ಷೆ ಅನುಭವಿಸುವುದು ಎಂದು ಮಾರ್ಪಟ್ಟಿದೆ) ಜತೆಗೆ 5 ಲಕ್ಷ ರೂ ದಂಡ ತೆರಬೇಕಾಗುತ್ತದೆ. ಜತೆಗೆ ಆರೋಪಿಗಳಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಶ್ರೀಶಾಂತನೇನೋ ಸರಿ ಈಗಾಗಲೇ ತಮ್ಮ ಸುಪರ್ದಿಯಲ್ಲಿದ್ದಾನೆ. ಆದರೆ ಆ ಜೋಡಿಯೆಲ್ಲಿ? ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲರು? ಇವರನ್ನು ಯಾವಾಗ ಹೆಡೆಮುರಿಗೆ ಕಟ್ಟಿ ಭಾರತಕ್ಕೆ ತರುವುದು?

English summary
IPL Spot Fixing - MCOCA charged against Cricketer Sreesanth. He would have to prove his innocence or otherwise face life-time jail term, courtesy Section 3 of Maharashtra Control of Organised Crime Act or MCOCA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X