• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ : ಜಗತ್ತಿನ ಆಗು ಹೋಗು ಇಣುಕು ನೋಟ

By Mahesh
|

ಬೆಂಗಳೂರು, ಜೂ.3: ಬೆಂಗಳೂರಿನಲ್ಲಿ ಮಳೆ, ಮೋಡ ಮುಸುಕಿದ ವಾತಾವರಣ ಮುಂದುವರೆದಿದೆ. ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟಕ್ಕೇನೂ ತೊಂದರೆಯಾಗಿಲ್ಲವಂತೆ ಆದರೆ, ನಿನ್ನೆ ಮತ್ತು ಇವತ್ತು ಯಾಕೋ ಫಿಲಿಫೈನ್ಸ್, ಓಕ್ಲಹಾಮಾದಲ್ಲಿ ವಿಮಾನಗಳು ಹಾರಾಟದ ಬದಲು ತೂರಾಡಿ ಅಪಘಾತಕ್ಕೀಡಿರುವ ಸುದ್ದಿ ಚಿತ್ರ ಸಿಕ್ಕಿದೆ.

ಮುಂಗಾರು ಆರಂಭದ ಮುನ್ಸೂಚನೆ, ಎಲ್ಲಿದೆ ಈಗ ಮುಂಗಾರು ಮಾರುತ ಚಿತ್ರದಲ್ಲಿ ನೋಡಿ.. ನಾಟಿ ಕಾರ್ಯ ಎಲ್ಲಿ ಆರಂಭವಾಗಿದೆ ಎಂಬ ಮಾಹಿತಿ ಕೂಡ ನಿಮಗಾಗಿ ತಂದಿದ್ದೇವೆ.

ಸ್ಪೇನ್ ನ 17ನೇ ಶತಮಾನದ ವಿಶಿಷ್ಟ ಸಾಂಪ್ರದಾಯಿಕ ಆಚರಣೆಯ ಚಿತ್ರ ನಿಮ್ಮ ಮುಂದಿದೆ. ಭಾರತದಲ್ಲೂ ಈ ರೀತಿ ಸಂಪ್ರದಾಯ ಕಂಡಿರುವ ನೆನಪು ಬಂದರೆ ತಪ್ಪಲ್ಲ.

ಬೆಲ್ಜಿಯಂನಲ್ಲಿ ಕಲಾವಿದರು ತಮ್ಮ ಕೃತಿಗಳನ್ನು 'ಕೆರೆಗೆ ಹಾರ' ಮಾಡಿದ್ದರಂತೆ, ಏಕೆ ಚಿತ್ರ ನೋಡಿ ತಿಳಿದುಕೊಳ್ಳಿ. ಲಂಡನ್ ನಿಂದ ಸಿನಿಮಾ ಅಭಿಮಾನಿಗಳ ನೆಚ್ಚಿನ ತಾರಾ ಜೋಡಿ, ಬ್ರಾಡ್ ಪಿಟ್ ಹಾಗೂ ಏಂಜಲಿನಾ ಜೋಲಿ ಐಶ್ವರ್ಯಾ ರೈ ಅಭಿಷೇಕ್ ಚಿತ್ರ, ಸ್ಪೇನ್ ಸುಂದರಿ ನಟಿ ಸಲ್ಮಾ ಹಯೇಕ್ ಪೋಸ್ ನಿಮಗೆ ಕಾಣಿಸಲಿದೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಶಿರಡಿ ಭೇಟಿ, ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಭಂಗಿ ಇನ್ನಿತರ ಚಿತ್ರಗಳು ಇಂದಿನ ಪ್ಯಾಕೇಜ್ ನಲ್ಲಿದೆ ತಪ್ಪದೇ ನೋಡಿ. ಚಿತ್ರಸರಣಿಯಲ್ಲಿರುವ ಎಲ್ಲಾ ಚಿತ್ರಗಳ ಕೃಪೆ : ಪಿಟಿಐ/ಎಪಿ

ಎಲ್ಲೆಲ್ಲಿ ಮಾರುತ ಸಂಚಾರ ?

ಎಲ್ಲೆಲ್ಲಿ ಮಾರುತ ಸಂಚಾರ ?

ಕೇರಳ, ಕರ್ನಾಟಕದಲ್ಲಿ ಮುಂಗಾರು ಮಳೆ ನಿರೀಕ್ಷೆಯಂತೆ ಕಾಲಿಡುವ ಸೂಚನೆ ಸಿಕ್ಕಿದೆ. ಜೂ. 19 ರವರೆ ಭಾರಿ ಮಳೆ ನಿರೀಕ್ಷೆಯಿದೆ ಎಂಬ ಸುದ್ದಿ ಇದೆ. ಮುಂಗಾರು ಮಾರುತಗಳು ಎಲ್ಲಿಂದ ಎಲ್ಲಿ ತನಕ ಬೀಸಲಿದೆ ಎಂಬುದನ್ನು ಗ್ರಾಫಿಕ್ಸ್ ನಲ್ಲಿ ನೋಡಿ..

ಮೊದಲ ಮಳೆ ಕಂಡ ರೈತರ ಚಟುವಟಿಕೆ ಕುರಿತ ಚಿತ್ರ ಕೊನೆ ಸ್ಲೈಡ್ ನಲ್ಲಿದೆ

ರನ್ ವೇ ನಲ್ಲೇ ನಿದ್ದೆ

ರನ್ ವೇ ನಲ್ಲೇ ನಿದ್ದೆ

ದಾವೊ: ಚೆಬು ಫೆಸಿಫಿಕ್ ಏರ್ ಬಸ್ ಎ320 ಪ್ಯಾಸೆಂಜರ್ ವಿಮಾನ ಸೋಮವಾರ(ಜೂ.3) ರನ್ ವೇ ಬಳಿ ಕುಸಿದಿದೆ. ಆದರೆ, ದಕ್ಷಿಣ ಫಿಲಿಫೈನ್ಸ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಈ ಘಟನೆಯಲ್ಲಿ ವಿಮಾನದಲ್ಲಿದ್ದ 161 ಪ್ರಯಾಣಿಕರಿಗೆ ಏನು ತೊಂದರೆಯಾಗಿಲ್ಲ.

ವಿಮಾನ ಸಿಬ್ಬಂದಿಗಳಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ. ಸದ್ಯಕ್ಕೆ ತಾತ್ಕಾಲಿಕವಾಗಿ ವಿಮಾನ ಹಾರಾಟ ನಿಲ್ಲಿಸಲಾಗಿದೆ. 80ಕ್ಕೂ ಅಧಿಕ ವಿಮಾನಗಳು ನಿಂತಲ್ಲೇ ನಿಂತಿವೆ.

ದುಷ್ಟಶಕ್ತಿಯ ಜಂಪ್

ದುಷ್ಟಶಕ್ತಿಯ ಜಂಪ್

ಕ್ಯಾಸ್ಟ್ರಿಲ್ಲೊ ಡಿ ಮುರ್ಸಿಯಾ: ಇಲ್ಲಿನ ಗ್ರಾಮದಲ್ಲಿ ಪಿಶಾಚಿ ವೇಷಧಾರಿ ಎಲ್ ಕೊಲಾಚೋ ಪ್ರತಿನಿಧಿಯಾಗಿ ಹಸುಳೆಗಳ ಮೇಲೆ ಹಾರುತ್ತಿದ್ದಾನೆ.

ಉತ್ತರ ಸ್ಪೇನಿನ ಬರ್ಗೊಸ್ ನಲ್ಲಿ ಭಾನುವಾರ ಕಂಡು ಬಂಡ ಈ ದೃಶ್ಯ 17ನೇ ಶತಮಾನದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ.

ದುಷ್ಟಶಕ್ತಿಗಳು ಈ ರೀತಿ ಮಗುವನ್ನು ದಾಟಿದರೆ ಕೆಟ್ಟ ಗಾಳಿ ಎಂದಿಗೂ ಮಕ್ಕಳಿಗೆ ತಾಗುವುದಿಲ್ಲ ಎಂಬ ನಂಬಿಕೆ ಅಂದಿನಿಂದಲೂ ಬೆಳೆದು ಬಂದಿದೆ.

We Drift ; ತೇಲಿದ ಕಲಾಕೃತಿ

We Drift ; ತೇಲಿದ ಕಲಾಕೃತಿ

ಅಂತೆರ್ಪ್ : ಬೆಲ್ಜಿಯಂನ ಶೆಲ್ಟ್(Scheldt) ನದಿಯಲ್ಲಿ ಭಾನುವಾರ ಬಣ್ಣ ಬಣ್ಣದ ಕಲಾಕೃತಿಗಳನ್ನು ಕಲಾವಿದ ವಿಮ್ ಟೆಲ್ಲಿರ್ ತೇಲಿ ಬಿಟ್ಟಿದ್ದಾರೆ. '

We Drift' ಎಂಬ ಯೋಜನೆಯ ಅಡಿಯಲ್ಲಿ ಕಲಾಕೃತಿಗಳನ್ನು ಈ ರೀತಿ ತೇಲಿ ಬಿಡಲಾಗಿದೆ ನಮ್ಮ ನೂನ್ಯತೆಗಳನ್ನು ಈ ರೀತಿ ಹೊರಹಾಕಲಾಗಿದೆ ಎಂದು ಕಲಾವಿದ ಹೇಳಿದ್ದಾರೆ.

ಜಗದೇಕ ಜೋಡಿ

ಜಗದೇಕ ಜೋಡಿ

ಲಂಡನ್: ಇಲ್ಲಿನ ಸೆಂಟ್ರಲ್ ಸಿನಿಮಾ ಮಂದಿರದಲ್ಲಿ ವಾರ್ಡ್ ವಾರ್ Z ಚಿತ್ರದ ಪ್ರಿಮಿಯರ್ ಶೋ ವೇಳೆ ಕಾಣಿಸಿಕೊಂಡ ಬ್ರಾಡ್ ಪಿಟ್ ಹಾಗೂ ಏಂಜಲೀನಾ ಜೋಲಿ

ಮೂತಿ ಮುರಿದುಕೊಂಡ ವಿಮಾನ

ಮೂತಿ ಮುರಿದುಕೊಂಡ ವಿಮಾನ

ಎಲ್ ರೆನೋ: ಓಕ್ಲಾಹಾಮಾದ ಕೆನಡಿಯನ್ ವ್ಯಾಲಿ ಟೆಕ್ನಾಲಜಿ ಸೆಂಟರ್ ಆವರಣದಲ್ಲಿರುವ ಎವಿಯೇಷನ್ ಟೆಕ್ನಾಲಜಿ ಕಟ್ಟಡಕ್ಕೆ ಗುದ್ದಿದ ವಿಮಾನ. ಓಕ್ಲಾಹಾಮದಲ್ಲಿ ಚಂಡಮಾರುತ, ಮಳೆ, ಪ್ರವಾಹ ಇನ್ನೂ ಮುಂದುವರೆದಿದೆ.

ಸಾಯಿಬಾಬಾಗೆ ಪ್ರಣಬ್ ನಮನ

ಸಾಯಿಬಾಬಾಗೆ ಪ್ರಣಬ್ ನಮನ

ಶಿರಡಿ: ಶನಿವಾರ ಶಿರಡಿಗೆ ಭೇಟಿ ನೀಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಶ್ರೀಸಾಯಿಬಾಬಾ ಸಂಸ್ಥಾನ ಟ್ರಸ್ಟ್ ವತಿಯಿಂದ ಸಾಯಿಬಾಬಾ ಪ್ರತಿಮೆ ನೀಡಲಾಯಿತು.

ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಕಾರ್ತಿಕ್

ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಕಾರ್ತಿಕ್

ಲಂಡನ್ : ಜೂ.6 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವಾಡಲಿರುವ ಭಾರತ ತಂಡಕ್ಕೆ ಹೊಸ ಸ್ಪೂರ್ತಿ ನೀಡಿದ ದಿನೇಶ್ ಕಾರ್ತಿಕ್.

ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಉತ್ತಮ ಲಯದಲ್ಲಿರುವ ಕಾರ್ತಿಕ್

ಜನಪ್ರಿಯ ತಾರಾ ಜೋಡಿ

ಜನಪ್ರಿಯ ತಾರಾ ಜೋಡಿ

ಲಂಡನ್: ದಿ ಸೌಂಡ್ ಆಫ್ ಚೇಂಜ್ ಲೈವ್ ಕಾರ್ಯಕ್ರಮದ ನಿರೂಪಕರಾಗಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್

ನಿರೂಪಕಿಯಾಗಿ ಸಲ್ಮಾ

ನಿರೂಪಕಿಯಾಗಿ ಸಲ್ಮಾ

ಲಂಡನ್ : ಐಶ್- ಅಭಿ ನಂತರ ನಿರೂಪಕರ ಪಾತ್ರವಹಿಸಿದ ಹಾಲಿವುಡ್ ನಟಿ ಸಲ್ಮಾ ಹಯೇಕ್ ಟ್ವಿಕೆನ್ ಹಾಮ್ ಸ್ಟೇಡಿಯಂನಲ್ಲಿ

ನ್ಯೂಜಿಲೆಂಡ್ ಗೆಲುವಿನ ರುವಾರಿ

ನ್ಯೂಜಿಲೆಂಡ್ ಗೆಲುವಿನ ರುವಾರಿ

ಸೌಥಾಂಪ್ಟನ್: ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸತತ ಎರಡು ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಗೆಲುವಿನ ರುವಾತಿಯಾದ ಮಾರ್ಟಿನ್ ಗಪ್ಟಿಲ್. ಭಾನುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮಾರ್ಟಿನ್ 189 ರನ್ ಬಾರಿಸಿ ನಾಟೌಟ್ ಆಗಿ ಉಳಿದರು.

ಮಹೇಂದ್ರ ಕರ್ಮ ಅಂತಿಮ ಸಂಸ್ಕಾರ

ಮಹೇಂದ್ರ ಕರ್ಮ ಅಂತಿಮ ಸಂಸ್ಕಾರ

ಅಲಹಾಬಾದ್: ನಕ್ಸಲ್ ದಾಳಿಗೆ ತುತ್ತಾಗಿ ಸಾವನ್ನಪ್ಪಿದ ಮಹೇಂದ್ರಕರ್ಮ ಅವರ ಚಿತಾಭಸ್ಮವನ್ನು ಗಂಗೆಗೆ ಹಾಕಿ ನಮಿಸುತ್ತಿರುವ ಅವರ ಕುಟುಂಬ ಸದಸ್ಯರು.

ಭತ್ತದ ನಾಟಿ ಕಾರ್ಯ ಆರಂಭ

ಭತ್ತದ ನಾಟಿ ಕಾರ್ಯ ಆರಂಭ

ಇಂದಿನ ಚಿತ್ರ ಸರಣಿಯ ಆರಂಭದಲ್ಲಿ ಮಳೆ ಮಾರುತಗಳ ಸೂಚನೆ ನೋಡಿದ ಮೇಲೆ ಮುಂಗಾರು ಆರಂಭದ ಮುನ್ಸೂಚನೆ ಸಿಕ್ಕ ಕೂಡಲೇ ಚಟುವಟಿಕೆಯಲ್ಲಿ ತೊಡಗಿರುವ ರೈತರನ್ನು ನೋಡಿ. ದೇಶದ ನೆತ್ತಿ ಮೇಲೆ ಭತ್ತದ ಸಸಿ ನಾಟಿ ಕಾರ್ಯ ಆರಂಭಗೊಂಡಿದೆ. ಶ್ರೀನಗರದ ರೈತರು ಗದ್ದೆಗಿಳಿದು ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ.

English summary
Todays News stories in Pics June 01, 2013: The Indian Monsoon Current refers to the seasonally varying ocean current regime found in the tropical regions of the northern Indian Ocean. Here is the monsoon fluctuation picture and Many More interesting pictures
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more