ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಎಸ್ ಧೋನಿ ಡೀಲ್ ಅಥವಾ ನೋ ಡೀಲ್?

By Mahesh
|
Google Oneindia Kannada News

ಬೆಂಗಳೂರು, ಜೂ.3: ಸ್ಪಾಟ್ ಫಿಕ್ಸಿಂಗ್ ಬಗ್ಗೆ ಮೌನವಹಿಸಿರುವ ಭಾರತೀಯ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ ಈಗ ಮಾತನಾಡಲೇ ಬೇಕಾದ ಪ್ರಸಂಗ ಎದುರಾಗಿದೆ. ರಿತಿ ಸ್ಫೋರ್ಟ್ಸ್ ಮ್ಯಾನೇಜ್ಮೆಂಟ್ ಸಂಸ್ಥೆ ಜೊತೆಗಿನ ವಾಣಿಜ್ಯ ಉದ್ದೇಶಿತ ಡೀಲ್ ಗಳ ಬಗ್ಗೆ ಧೋನಿ ಉತ್ತರಿಸಲೇ ಬೇಕಾಗಿದೆ.

ರಿತಿ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ಧೋನಿ ಶೇ 15ರಷ್ಟು ಪಾಲುದಾರಿಕೆ ಹೊಂದಿದ್ದಾರೆ ಹಾಗೂ ಅವರ ಆಪ್ತ ಗೆಳೆಯ ಅರುಣ್ ಪಾಂಡೆ ಈ ಸಂಸ್ಥೆ ಒಡೆಯ. ಧೋನಿ ಅಲ್ಲದೆ, ಸುರೇಶ್ ರೈನಾ, ರವೀಂದ್ರ ಜಡೇಜ, ಪ್ರಗ್ಯಾನ್ ಓಜಾ ಹಾಗೂ ಆರ್ ಪಿ ಸಿಂಗ್ ಅವರು ಸಹ ಪಾಲುದಾರರಾಗಿದ್ದಾರೆ.

ಇದರಲ್ಲಿ ತಪ್ಪೇನಿದೆ? : 2010ರಲ್ಲಿ ರಿತಿ ಸ್ಪೋರ್ಟ್ಸ್ ಸಂಸ್ಥೆಯೊಂದಿಗೆ ಧೋನಿ ಅವರು 3ವರ್ಷದ ಅವಧಿಗೆ ಸುಮಾರು 210 ಕೋಟಿ ರು.ಗಳ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಪ್ರತಿವರ್ಷ ಸುಮಾರು 70 ಕೋಟಿ ರು.ಗಳಷ್ಟು ಭಾರಿ ಮೊತ್ತ ಅವರಿಗೆ ಸಂದಾಯವಾಗುತ್ತದೆ. ಇದೇ ರೀತಿ ಇತರೆ ಆಟಗಾರರಿಗೂ ಇಂತಿಷ್ಟು ಹಣ ಸಿಗುತ್ತಿದೆ.

Dhoni's business deal in new controversy post IPL fixing row

ಪರಿಸ್ಥಿತಿ ಹೀಗಿರುವಾಗ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡದ ನಾಯಕರಾಗಿರುವ ಎಂಎಸ್ ಧೋನಿ ಅವರು ತಂಡ ಆಯ್ಕೆ ಸಂದರ್ಭದಲ್ಲಿ ಹೆಸರುಗಳನ್ನು ಸೂಚಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದ್ದಿದೆ. ರಿತಿಯಲ್ಲಿ ಧೋನಿ ಹಾಗೂ ಇತರೆ ಆಟಗಾರರು ಪಾಲುದಾರಿಕೆ ಹೊಂದಿದ್ದರೆ ಬಿಸಿಸಿಐ ನಿಯಮ ಉಲ್ಲಂಘನೆಯಾಗುತ್ತದೆ. ಕ್ರೀಡಾ ಪ್ರಚಾರ ಕಂಪನಿಯಲ್ಲಿ ಪಾಲುದಾರಿಕೆ ಹೊಂದಿರುವ ಧೋನಿ ಅವರು ನೈತಿಕವಾಗಿ ತಂಡದ ಆಯ್ಕೆ ಹೇಗೆ ಮಾಡುತ್ತಾರೆ.

ಬಿಸಿಸಿಐ ಅಧ್ಯಕ್ಷರಾಗಿ ಪಕ್ಕಕ್ಕೆ ಸರಿದಿರುವ ಎನ್ ಶ್ರೀನಿವಾಸನ್ ಒಡೆತನದ ಇಂಡಿಯಾ ಸಿಮೆಂಟ್ಸ್ ನಲ್ಲಿ ಧೋನಿ ಉಪಾಧ್ಯಕ್ಷರಾಗಿದ್ದಾರೆ ಎಂಬ ಸುದ್ದಿಯೂ ಇದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲೂ ಸುರೇಶ್ ರೈನಾ ಹಾಗೂ ಜಡೇಜ ಆಯ್ಕೆ ಬಗ್ಗೆ ಗೊಂದಲ ಇದ್ದೇ ಇದೆ. ಧೋನಿ ಎಂದಿನಂತೆ ಯಾವುದರ ಬಗ್ಗೆ ಉತ್ತರಿಸದೆ ಕ್ಯಾಪ್ಟನ್ ಕೂಲ್ ಎನಿಸಿದ್ದಾರೆ. ನೆನಪಿರಲಿ, ಭಾರತೀಯ ಕ್ರೀಡಾಪಟುಗಳ ಪೈಕಿ ಧೋನಿ ಅತ್ಯಂತ ಶ್ರೀಮಂತ ಕ್ರೀಡಾಳು.

English summary
Mahendra Singh Dhoni, who has been facing criticism over his silence on IPL spot fixing scandal, landed in a new controversy over his business deal with one sports marketing firm -- Rhiti Sports Management.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X