ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು-ಮೈಸೂರು ನಡುವೆ ಐಷಾರಾಮಿ ಫ್ಲೈ ಬಸ್

|
Google Oneindia Kannada News

KSRTC
ಬೆಂಗಳೂರು, ಜೂ. 3 : ಮೈಸೂರು ಮತ್ತು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಫ್ಲೈ ಬಸ್ ಯೋಜನೆ ಆಗಸ್ಟ್ 1ರಿಂದ ಪ್ರಾರಂಭವಾಗಲಿದೆ. ಕೆಎಸ್ಆರ್ ಟಿಸಿಯ ಮಹತ್ವಾಕಾಂಕ್ಷೆಯ ಈ ಯೋಜನೆಗೆ ಜನರಿಂದ ಉತ್ತಮ ಬೆಂಬಮ ವ್ಯಕ್ತವಾಗುವ ನಿರೀಕ್ಷೆ ಇದೆ ಎಂದು ಸಂಸ್ಥೆಯ ನಿರ್ದೇಶಕ ಮಂಜುನಾಥ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫ್ಲೈ ಬಸ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಮೊದಲ 15 ದಿನಗಳ ಕಾಲ ಒಂದು ಬಸ್ ಓಡಿಸುವ ಮೂಲಕ ಪರಿಕ್ಷಾರ್ಥ ಸಂಚಾರ ನಡೆಸಲಿದ್ದೇವೆ. ನಂತರ ಹೆಚ್ಚಿನ ಬಸ್ ಗಳು ಸಂಚರಿಸಲಿವೆ ಎಂದು ಹೇಳಿದರು.

ಫ್ಲೈ ಬಸ್ ಸೇವೆಯಲ್ಲಿ ವೋಲ್ವೋ ಮಲ್ಟಿ ಆಕ್ಷಲ್ ಬಸ್ ಗಳು ಬೆಂಗಳೂರು ವಿಮಾನ ನಿಲ್ದಾಣ ಮತ್ತು ಮೈಸೂರಿನ ನಡುವೆ ಸಂಚರಿಸಲಿವೆ. ಬಸ್ ಗಳು ಸುಖಾಸೀನ ಆಸನಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಇಷ್ಟವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಏನೇನಿದೆ : ಇದೊಂದು ಐಷಾರಾಮಿ ಬಸ್ ಆಗಿದ್ದು, ಪುಟ್ಟ ಅಡುಗೆ ಮನೆ, ರಾಸಾಯನಿಕ ಶೌಚಾಲಯವನ್ನು ಹೊಂದಿದೆ. ಪ್ರತಿ ಸೀಟಿನ ಹಿಂಭಾಗದಲ್ಲಿ ಟಿವಿ ವ್ಯವಸ್ಥೆ ಇದೆ, ಪ್ರಯಾಣಿಕರಿಗೆ ಕುಳಿತಲ್ಲಲಿಗೆ ಕುಡಿಯುವ ನೀರು ಸರಬರಾಜು ಆಗಲಿದೆ.

ನಾನ್ ಸ್ಟಾಪ್ : ಫ್ಲೈ ಬಸ್ ಮೈಸೂರು ಮತ್ತು ಬೆಂಗಳೂರಿನಲ್ಲಿ ಬಸ್ ಮಾತ್ರ ನಿಲ್ಲಲಿದೆ. ಕೆಂಗೇರಿ, ನೆಲಮಂಗಲ, ಹೆಬ್ಬಾಳದ ಮೂಲಕ ಬೆಂಗಳೂರು ವಿಮಾನ ನಿಲ್ದಾಣ ತಲುಪಲಿದೆ. ಸದ್ಯಕ್ಕೆ ಬಸ್ ದರ 1000 ರೂ ಎಂದು ನಿಗದಿ ಪಡಿಸಲಾಗಿದೆ. ಪ್ರಯಾಣಿಕರ ಪ್ರತಿಕ್ರಿಯೆ ನಂತರ ದರ ಪರಿಷ್ಕರಣೆ ಮಾಡುವ ಆಲೋಚನೆ ಇದೆ.

ಬೇರೆ ಸ್ಥಳಗಳಿಗೆ ವಿಸ್ತರಣೆ : ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಂಗಳೂರು, ಕೊಡಗು ಮತ್ತು ಮೈಸೂರಿನಿಂದ ಹೆಚ್ಚಿನ ಪ್ರಯಾಣಿಕರು ಆಗಮಿಸುತ್ತಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಆದ್ದರಿಂದ ಸೆಪ್ಟೆಂಬರ್ ತಿಂಗಳಿನಿಂದ ಫ್ಲೈ ಬಸ್ ಯೋಜನೆಯನ್ನು ಇತರ ನಗರಗಳಿಗೂ ವಿಸ್ತರಿಸುವ ಆಲೋಚನೆ ಇದೆ ಎಂದು ಮಂಜುನಾಥ್ ತಿಳಿಸಿದರು.

ಸಮಯ ಉಳಿತಾಯ : ಮೈಸೂರಿನಿಂದ ಬೆಂಗಳೂರಿನ ಬಸ್ ನಿಲ್ದಾಣಕ್ಕೆ ಬಂದು, ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಸಂಚರಿಸಬೇಕಾಗಿತ್ತು. ಆದರೆ ಫ್ಲೈ ಬಸ್ ಸೇವೆಯಿಂದಾಗಿ ಸಮುಯದ ಉಳಿತಾಯವಾಗಲಿದೆ. ಹಾಗೂ ಜನರು ನೇರವಾಗಿ ವಿಮಾನ ನಿಲ್ದಾಣ ತಲುಪಬಹುದಾಗಿದೆ.

ಒಟ್ಟಾರೆ ಮೈಸೂರಿನ ಜನರ ಬಹುದಿನಗಳ ಕನಸು ಆಗಸ್ಟ್ ನಲ್ಲಿ ನನಸಾಗಲಿದೆ. ಜನರು ಕೆಎಸ್ಆರ್ ಟಿಸಿಯ ಈ ಫ್ಲೈ ಬಸ್ ಸೇವೆಗೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕು.

English summary
Karnataka State Road Transport Corporation (KSRTC) will introduce a new service called “Flybus” to ferry people between Mysore and Bangalore International Airport (BIA) said, KSRTC Managing Director Manjunatha Prasad. this service will begins from August 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X