ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಕ್ತ ತಂತ್ರಾಂಶ ಪ್ರತಿಪಾದಕ, ತಂತ್ರಜ್ಞ ಅತುಲ್ ಇನ್ನಿಲ್ಲ

By Mahesh
|
Google Oneindia Kannada News

FOSS.IN founder and famed technologist Atul Chitnis passes away
ಬೆಂಗಳೂರು, ಜೂ.3: ಅತುಲ್ ಚಿಟ್ನಿಸ್ ಎಂಬ ಹೆಸರು ತಂತ್ರಜ್ಞಾನ ವಲಯದಲ್ಲಿ ಹೊಸ ಉತ್ಸಾಹ ಮೂಡಿಸುತ್ತದೆ. ಉಚಿತ ಹಾಗೂ ಮುಕ್ತ ತಂತ್ರಾಂಶಕ್ಕಾಗಿ ಸಂಸ್ಥೆ ಸ್ಥಾಪಿಸಿ ಎಲ್ಲರಿಗೂ ಅರಿವು ಮೂಡಿಸುತ್ತಿದ್ದ ಅತುಲ್ ಅವರು ಮಾರಕ ಕ್ಯಾನ್ಸರ್ ಗೆ ಸೋಮವಾರ(ಜೂ.3) ಬೆಳಗ್ಗೆ ಬಲಿಯಾಗಿದ್ದಾರೆ.

FOSS.in ಸ್ಥಾಪಕ, ಪಿಸಿಕ್ವೆಸ್ಟ್ ಅಂಕಣಕಾರ, ಹವ್ಯಾಸಿ ಸಂಗೀತಗಾರ ಆಗಿದ್ದ 51 ವರ್ಷದ ಅತುಲ್ ಅವರು ಪತ್ನಿ ಶುಭ ಹಾಗೂ ಪುತ್ರಿ ಗೀತಾಂಜಲಿ ಅವರನ್ನು ಅಗಲಿದ್ದಾರೆ.

ಲಿನಕ್ಸ್, ಉಚಿತ ಹಾಗೂ ಮುಕ್ತ ತಂತ್ರಾಂಶಕ್ಕಾಗಿ ಹಗಲಿರುಳು ದುಡಿಯುತ್ತಿದ್ದ ಅತುಲ್ ಅವರಿಗೆ ಕರುಳಿನ ಕ್ಯಾನ್ಸರ್ ಇರುವುದು 2012ರ ಆಗಸ್ಟ್ ನಲ್ಲಿ ಪತ್ತೆಯಾಗಿತ್ತು. ಆದರೂ ಧೈರ್ಯಗೆಡದೆ ಸ್ಟೇಜ್ 4 ಕ್ಯಾನ್ಸರ್ ಜೊತೆ ಹೋರಾಟ ಜಾರಿಯಲ್ಲಿದೆ ಎಂದು ತಮ್ಮ ಟ್ವಿಟರ್ ಪುಟದಲ್ಲಿ ಹಾಕಿಕೊಂಡು ತಮ್ಮ ವೃತ್ತಿ, ಕರ್ತವ್ಯ ಮುಂದುವರೆಸಿದ್ದರು.

ಜರ್ಮನ್ ನಲ್ಲಿ 1962ರಲ್ಲಿ ಅತುಲ್ ಅವರು ಹುಟ್ಟಿದರು. ಜರ್ಮನ್ ಮೂಲದ ತಾಯಿ ಮೋನಿಕಾ ಹಾಗೂ ಭಾರತೀಯ ಮೂಲದ ಜಿ.ಜಿ ಚಿಟ್ನಿಸ್ ಇವರ ತಾಯಿ, ತಂದೆ. ಬಾಲ್ಯದ ವಿದ್ಯಾಭ್ಯಾಸ ಜರ್ಮನಿಯಲ್ಲಿ ಪಡೆದ ಮೇಲೆ 1972ರಲ್ಲಿ ಬೆಳಗಾವಿಯ ಮಿಲಿಟರಿ ಶಾಲೆಗೆ ಸೇರಿದರು. ಜಿಎಸ್ ಎಸ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು.

ಘಾಟ್ಕೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 1981ರಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಪದವಿ ಪಡೆದು, ಮುಂಬೈನಲ್ಲಿ ಕೆಲಕಾಲ ಉದ್ಯೋಗ ನಿರತರಾಗಿದ್ದರು.1986ರ ನಂತರ ಬೆಂಗಳೂರಿಗೆ ಬಂದು ನೆಲೆಸಿದರು.

FOSS.in ಸ್ಥಾಪಿಸಿ ಏಷ್ಯದ ಅತಿ ದೊಡ್ಡ ಉಚಿತ ಮತ್ತು ಮುಕ್ತ ತಂತ್ರಾಂಶ ಸಮ್ಮೇಳನ ಆಯೋಜನೆ ಮಾಡಿದ್ದರು. ಪಿಸಿ ಕ್ವೆಸ್ಟ್ ಮ್ಯಾಗಜೀನ್ ಗೆ 1996 ರಿಂದ 2002ರ ತನಕ ಸಂಪಾದಕರಾಗಿದ್ದರು. ಅತುಲ್ ಅವರ ನಿಧನಕ್ಕೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಅಪಾರ ಸಂಖ್ಯೆಯಲ್ಲಿ ವಿಷಾದ ಸಂದೇಶಗಳು ಬಂದಿದೆ.

English summary
Famed technologist and a passionate writer, Atul Chitnis (51) has lost his battle with cancer this morning. He is survived by wife Shubha and daughter Geetanjali. The industry mourns the loss of respected professional who played a pivotal role in popularizing linux and free and open source software.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X