ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುರ್ಚಿ ಬಿಡದ ಶ್ರೀನಿವಾಸನ್, ದಾಲ್ಮಿಯಾ ಹಂಗಾಮಿ ಅಧ್ಯಕ್ಷ

|
Google Oneindia Kannada News

ಚೆನ್ನೈ, ಜೂ.2 : ಹಲವಾರು ಒತ್ತಡಗಳ ನಡುವೆಯೂ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ತಮ್ಮ ಮೊಂಡುತನ ಬಿಟ್ಟಿಲ್ಲ. ಬಿಸಿಸಿಐ ಅಧ್ಯಕ್ಷ ಸ್ಥಾನ ತೊರೆಯಲು ಅವರು ನಿರಾಕರಿಸಿದ್ದಾರೆ. ಆದ್ದರಿಂದ ಬಿಸಿಸಿಐ ಹಂಗಾಮಿ ಅಧ್ಯಕ್ಷರಾಗಿ ಜಗಮೋಹನ್ ದಾಲ್ಮಿಯಾ ಅವರನ್ನು ನೇಮಿಸಲಾಗಿದೆ.

ಭಾನುವಾರ ಮಧ್ಯಾಹ್ನ ಚೆನ್ನೈನ ಖಾಸಗಿ ಹೋಟೆಲ್ ನಲ್ಲಿ ಬಿಸಿಸಿಐ ಕಾರ್ಯಕಾರಿ ಸಮಿತಿಯ ತುರ್ತು ಸಭೆ ನಡೆಯಿತು. ಸುಮಾರು ಮೂರು ಗಂಟೆಗೂ ಅಧಿಕ ಸಮಯ ನಡೆದ ಸಭೆಯಲ್ಲಿ ಶ್ರೀನಿವಾಸನ್ ಯಾವುದೇ ಒತ್ತಡಕ್ಕೂ ಮಣಿಯದೇ ರಾಜೀನಾಮೆ ನೀಡಲು ನಿರಾಕರಿಸಿದರು. ಆದರೆ, ಅಧ್ಯಕ್ಷ ಹುದ್ದೆಯ ಕೆಲಸ ಕಾರ್ಯಗಳಿಂದ ಒಂದು ತಿಂಗಳ ಕಾಲ ದೂರವುಳಿಯಲಿದ್ದಾರೆ.

Jagmohan Dalmiya

ತಮ್ಮ ಅಳಿಯ ಗುರುನಾಥ್ ಅವರ ವಿಚಾರಣೆ ಪೂರ್ಣಗೊಳ್ಳುವರೆಗೂ ಶ್ರೀನಿವಾಸನ್ ಅಧ್ಯಕ್ಷ ಹುದ್ದೆಯ ಕೆಲಸಗಳಿಂದ ದೂರವುಳಿಯಲಿದ್ದಾರೆ. ಆದ್ದರಿಂದ ಒಂದು ತಿಂಗಳ ಮಟ್ಟಿಗೆ ಹಂಗಾಮಿ ಅಧ್ಯಕ್ಷರನ್ನಾಗಿ ಜಗಮೋಹನ್ ದಾಲ್ಮಿಯಾ ಅವರನ್ನು ನೇಮಿಸಲಾಯಿತು. ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡದೆ, ಒಂದು ತಿಂಗಳ ಕಾಲ ಶ್ರೀನಿವಾಸನ್ ತಟಸ್ಥವಾಗಿ ಉಳಿಯಲಿದ್ದಾರೆ.

ಸಭೆಯ ಮುಖ್ಯಾಂಶಗಳು
* ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೆ, ಹಂಗಾಮಿ ಅಧ್ಯಕ್ಷರನ್ನು ನೇಮಿಸಿದ ಶ್ರೀನಿವಾಸನ್
* ಸಮಿತಿಯ ಸದಸ್ಯರ ಒತ್ತಡಕ್ಕೆ ಮಣಿಯದ ಶ್ರೀನಿವಾಸನ್
* ಜಗಮೋಹನ್ ದಾಲ್ಮಿಯಾ ಹಂಗಾಮಿ ಅಧ್ಯಕ್ಷ
* ಒಂದು ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನದಿಂದ ಶ್ರೀನಿವಾಸನ್ ದೂರ
* ಸದಸ್ಯರ ರಾಜೀನಾಮೆ ಒತ್ತಡಕ್ಕೂ ಬಗ್ಗದೆ ಮೊಂಡುತನ ಮುಂದುವರೆಸಿದ ಶ್ರೀನಿವಾಸನ್
* ರಾಜೀನಾಮೆ ಬಗ್ಗೆ ಒಮ್ಮತಕ್ಕೆ ಬರುವಲ್ಲಿ ಸಭೆ ವಿಫಲ
* ಅಳಿಯ ಗುರುನಾಥ್ ವಿರುದ್ಧದ ತನಿಖೆ ಮುಗಿಯುವ ವರೆಗೆ ಅಧ್ಯಕ್ಷ ಸ್ಥಾನದಿಂದ ದೂರ
* ಹಂಗಾಮಿ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಶಿರ್ಕೆ ಮತ್ತು ಸಂಜಯ್ ಜಗದಾಳೆ ಹೆಸರು ಪ್ರಸ್ತಾಪ
* ಅಂತಿಮವಾಗಿ ದಾಲ್ಮಿಯಾ ಹೆಸರಿಗೆ ಸಭೆಯ ಸಹಮತ
* ಗೋವಾ, ಪಂಜಾಬ್ ಮತ್ತು ಅಸ್ಸಾಂ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಿಂದ ಶ್ರೀನಿವಾಸನ್ ರಾಜೀನಾಮೆಗೆ ಪಟ್ಟು

English summary
Board of Control for Cricket in India (BCCI) president N.Srinivasan Srinivasan refuses to quit his post. after BCCI committee meeting Jagmohan Dalmiya appointed‎ as Acting President for BCCI for one month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X