ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಸಾರ್ ಪಾಟೀಲ್ ಕ್ಷಮೆಯಾಚಿಸಿದ ಪೈ, ಶಾ

By Mahesh
|
Google Oneindia Kannada News

TV Mohandas Pai and Kiran Mazumdar Shaw apology to SR Patil
ಬೆಂಗಳೂರು, ಜೂ.1 : ಮಣಿಪಾಲ್ ವಿದ್ಯಾಸಂಸ್ಥೆ ಚೇರ್ಮನ್ ಮೋಹನ್ ದಾಸ್ ಪೈ ಹಾಗೂ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಐಟಿ ಬಿಟಿ ಸಚಿವ ಎಸ್. ಆರ್ ಪಾಟೀಲ್ ಅವರ ಕ್ಷಮೆಯಾಚಿಸಿದ್ದಾರೆ.

65 ವರ್ಷ ವಯಸ್ಸಿನ ಮಂತ್ರಿಯನ್ನು ಐಟಿ ಬಿಟಿ ಸಚಿವರಾಗಿ ಪಡೆದು ನಾವು ಏನು ಪ್ರಗತಿ ಸಾಧಿಸಲು ಸಾಧ್ಯ ಎಂದು ಈ ಇಬ್ಬರು ಗಣ್ಯರು ಪ್ರಶ್ನೆ ಎತ್ತಿದ್ದರು. ಇದಕ್ಕೆ ಎಸ್ ಆರ್ ಪಾಟೀಲ್ ಅವರು ಖಡಕ್ ಉತ್ತರ ನೀಡಿದ್ದರು.

ಶುಕ್ರವಾರ (ಮೇ.31) ವಿಧಾನಸೌಧದಲ್ಲಿ ಐಟಿ ಬಿಟಿ ಸಚಿವ ಎಸ್ ಆರ್ ಪಾಟೀಲ್ ಅವರನ್ನು ಭೇಟಿ ಮಾಡಿದ ಪೈ ಹಾಗೂ ಶಾ ಅವರು ICT ಸಮೂಹದ ಪರವಾಗಿ ಐಟಿ ರೋಡ್ ಮ್ಯಾಪ್ 2020 ವರದಿಯನ್ನು ಸಲ್ಲಿಸಿದರು.

ಗುಲ್ಬರ್ಗಾ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ 2ನೇ ಹಂತದ ನಗರಗಳಿಗೂ ಐಟಿ, ಬಿಟಿ ಉದ್ಯಮಗಳನ್ನು ಆರಂಭಿಸುವ ಬಗ್ಗೆ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದರು.

ಪಾಟೀಲ್ ಸವಾಲು: ಎಸ್ಸೆಂ ಕೃಷ್ಣ ಅವರು 75 ವರ್ಷದ ಇಳಿ ವಯಸ್ಸಿನಲ್ಲಿ ಬೆಂಗಳೂರನ್ನು ಐಟಿ ರಾಜಧಾನಿ ದರ್ಜೆಗೆ ಏರಿಸ ಬಹುದಾದರೆ ನಾನು 65 ವರ್ಷ ವಯಸ್ಸಿನವ ನಾನು ಏಕೆ ಐಟಿ ಕ್ಷೇತ್ರ ಉದ್ಧಾರ ಮಾಡಲು ಸಾಧ್ಯವಿಲ್ಲ. ವಯಸ್ಸಿಗೂ ಹುದ್ದೆಗೂ ತಾಳೆ ಹಾಕಿ ತೂಗುವ ಪ್ರವೃತ್ತಿ ಬಿಡಿ ನನಗೂ ಐಟಿ ಕ್ಷೇತ್ರದ ಪರಿಚಯವಿದೆ

2020ರೊಳಗೆ ರಾಜ್ಯದ ಸಾಫ್ಟ್ ವೇರ್ ರಫ್ತು ಪ್ರಮಾಣವನ್ನು 4,00,000 ಕೋಟಿ ರು ಗೆ ಏರಿಸುವ ಗುರಿ ಹೊಂದಿದ್ದೇನೆ. ಸಿದ್ದರಾಮಯ್ಯ ಅವರು ನನ್ನ ಮೇಲೆ ನಂಬಿಕೆ ಇಟ್ಟು ಈ ಖಾತೆ ನೀಡಿದ್ದಾರೆ. ನನ್ನ ಉತ್ಸಾಹಕ್ಕೆ ಭಂಗ ತರಬೇಡಿ ಎಂದು ಪಾಟೀಲ್ ಹೇಳಿದ್ದಾರೆ. ಸದ್ಯಕ್ಕೆ ರಾಜ್ಯದ ಸಾಫ್ಟ್ ವೇರ್ ರಫ್ತು ಪ್ರಮಾಣ 1,35,000 ಕೋಟಿ ರು ನಷ್ಟಿದೆ ಎಂದಿದ್ದರು.

ಬೆಂಗಳೂರು ಕೇಂದ್ರಿಕೃತ ಐಟಿ -ಬಿಟಿ ಉದ್ಯಮವನ್ನು ಎರಡನೇ ಹಾಗೂ ಮೂರನೇ ಸ್ತರದ ನಗರಗಳಿಗೆ ಕೊಂಡೊಯ್ಯುವುದು ನನ್ನ ಗುರಿ. ಸಾಮಾನ್ಯ ಜನರ ಜೊತೆ ಐಟಿ ಸಂಪರ್ಕ ಸಾಧಿಸಲು ಯತ್ನಿಸುತ್ತೇನೆ ಎಂದು ಪಾಟೀಲ್ ಭರವಸೆ ನೀಡಿದ್ದಾರೆ.

English summary
SR Patil, IT-BT Minister of Karnataka who promises to help raise exports to Rs 4 lakh crore by 2020.TV Mohandas Pai and Kiran Mazumdar Shaw apologizes to the veteran minister and submitted IT roadmap report
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X