ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಗೆ ಡ್ರೆಸ್ ಕೋಡ್ ಏನಾದ್ರು ಇದ್ಯಾ?

By Mahesh
|
Google Oneindia Kannada News

ಬೆಂಗಳೂರು, ಮೇ.31: ವಿಶಿಷ್ಟ ಗುರುತಿನ ಚೀಟಿ ಆಧಾರ್ ಕಾರ್ಡ್ ಮಾಡಿಸಲು ಹೋದಾಗ ಮೇಲಿಂದ ಕೆಳಗೆ ನಿಮ್ಮನ್ನು ನೋಡಿ ನಿಮ್ಮ ವಸ್ತ್ರ ಸಂಹಿತೆ ಸರಿಯಿಲ್ಲ ಹೋಗಿ ಎಂದರೆ ಏನು ಮಾಡುತ್ತಿರಾ? ಚೆನ್ನೈನಲ್ಲಿ ಲಾವಣ್ಯ ಮೋಹನ್ ಅವರಿಗೆ ಈ ರೀತಿ ತೊಂದರೆ ಆಗಿತ್ತಂತೆ.

ಇತ್ತೀಚೆಗೆ ಆಧಾರ್ ಕಾರ್ಡ್ ಮಾಡಿಸಲು ಹೋದಾಗ ಆದ ಅನುಭವವನ್ನು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಆಧಾರ್ ಕಾರ್ಡ್ ಫೋಟೊ ಗುರುತು ನೀಡಲು ಗಂಟೆಗಟ್ಟಲೆ ಕಾದು ನಿಂತಿದ್ದೆ. ನನ್ನ ಸರತಿ ಬಂದಾಗ ಮೇಲಿಂದ ಕೆಳಗೆ ನನ್ನನ್ನು ದಿಟ್ಟಿಸಿ ನೋಡಿದ ಅಧಿಕಾರಿ ನೀವು ದುಪ್ಪಟ್ಟಾ ಹಾಕಿಕೊಂಡಿಲ್ಲ ಫೋಟೊ ತೆಗೆಯಲು ಸಾಧ್ಯವಿಲ್ಲ ಹೋಗಿ ಎಂದುಬಿಟ್ಟರು ಎಂದು ಲಾವಣ್ಯ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಪ್ರಕಟವಾದ ನಿಮಿಷಗಳ ನಂತರ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ನಲ್ಲಿ #Dupatta ಹಾಗೂ #Aadhaarcard ಸಕತ್ ಆಗಿ ಟ್ರೆಂಡ್ ಆಗುತ್ತಿದೆ. ಆಧಾರ್ ಕಾರ್ಡ್ ಹುಳುಕುಗಳು, ಆಧಾರ್ ಕಾರ್ಡ್ ಲಾಭಗಳ ಬಗ್ಗೆ ಬಿಸಿಬಿಸಿ ಚರ್ಚೆ ನಡೆದಿದೆ.

ಲಾವಣ್ಯ ಅವರ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಧಾರ್ ನೋಂದಣಿ ಪ್ರಕ್ರಿಯೆ ಅಧಿಕಾರಿ ಎಂಆರ್ ವಿ ಕೃಷ್ಣರಾವ್, ಈ ರೀತಿ ಯಾವುದೇ ವಸ್ತ್ರ ಸಂಹಿತೆ ನಾವು ವಿಧಿಸಿಲ್ಲ ಎಂದಿದ್ದಾರೆ. ಆದರೆ, ಈ ಮುಂಚೆ UIDAI ನಿಯಮದ ಪ್ರಕಾರ ಶರ್ಟ್ ಇಲ್ಲದ, ಕಾಲರ್ ಇಲ್ಲದ ವ್ಯಕ್ತಿಗಳ ಫೋಟೋ ತೆಗೆಯುವುದನ್ನು ನಿರ್ಬಂಧಿಸಲಾಗಿತ್ತು. ಆದರೆ, ನಂತರ ಈ ನಿಮಯವನ್ನು ತೆಗೆದು ಹಾಕಲಾಗಿತ್ತು.

ಕಾಂಚಿಪುರದ ಬ್ರಾಹ್ಮಣ ಸಮುದಾಯದವರು ಶರ್ಟ್ ಹಾಕಿಕೊಳ್ಳದೆ ಫೋಟೊ ತೆಗೆಸಿಕೊಳ್ಳಲು ಅನುಮತಿ ಕೋರಿದರು. ಹೀಗಾಗಿ ನಾವು ಯಾವುದೇ ಡ್ರೆಸ್ ಕೋಡ್ ನಿರ್ಬಂಧ ವಿಧಿಸಿಲ್ಲ ಎಂದು ಕೃಷ್ಣರಾವ್ ಹೇಳಿದ್ದಾರೆ.

ನನ್ನ ಬಳಿ ದುಪ್ಪಟ್ಟಾ ಇಲ್ಲ ನಾನು ಟವೆಲ್ ಬಳಸಬಹುದು ಎಂದು ಶ್ರೀಶಾಂತ್ ಹೇಳಿದಂತೆ ಹಾಕಿರುವ ರಮೇಶ್ ಅವರ ಟ್ವೀಟ್ ಸೇರಿದಂತೆ ಹಲವಾರು ಟ್ವೀಟ್ ಗಳು ಇಲ್ಲಿದೆ.

English summary
Is there a dress code to get an Aadhaar card? An incident on Thursday at an enrolment centre in Chennai shows that there indeed may be one, and that it smacks of moral policing. Woman without dupatta And man without shirt denied Aadhaar photo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X