ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾನುವಾರ ಜೂ.2 ಸುಚಿತ್ರಾದಲ್ಲಿ ಅಡಿಗರ ಸಂಸ್ಮರಣೆ

By Prasad
|
Google Oneindia Kannada News

Poet Gopalakrishna Adiga
ಬೆಂಗಳೂರು, ಮೇ. 31 : "ಹೊಸತು ಹಳೆಯದರ ಜೊತೆಗೂ, ಹಳೆಯದು ಹೊಸದರ ಜೊತೆಗೂ ಹೊಂದಿಕೊಳ್ಳದೆ ಬದುಕು ಸುಸಂಸ್ಕೃತವಾಗುವುದಿಲ್ಲ, ಕಾವ್ಯವು ಶ್ರೇಷ್ಠವಾಗುವುದಿಲ್ಲ." ಇಂತಹ ಅಮೃತವಾಣಿಯನ್ನು ನುಡಿದಿದ್ದ ಮೊಗೇರಿ ಗೋಪಾಲಕೃಷ್ಣ ಅಡಿಗ(1918-1992)ರ ಸಂಸ್ಮರಣೆ ಕಾರ್ಯಕ್ರಮವನ್ನು ಭಾನುವಾರ, ಜೂನ್ 2ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರ ಕಲಾಕೇಂದ್ರ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕಾವ್ಯಪ್ರಿಯರು ಸುಚಿತ್ರ ಸಭಾಂಗಣದಲ್ಲಿ ಭಾನುವಾರ ಬೆಳಿಗ್ಗೆ 10 ಗಂಟೆಗೆ ಜಮಾಯಿಸಬಹುದಾಗಿದೆ. ಅಡಿಗರ ಕುಟುಂಬ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದೆ.

ಖ್ಯಾತ ವಿಮರ್ಶಕ ಬಿ. ವೆಂಕಟಕೃಷ್ಣ ಕೆದಿಲಾಯ ಅವರು 'ಅಡಿಗರ ಗದ್ಯದ ಕಾವ್ಯ ಮೀಮಾಂಸೆ' ಎಂಬ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಅಮೆರಿಕ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ನಿರ್ದೇಶಕರಾಗಿರುವ ಡಾ.ಟಿ.ಎನ್. ಕೃಷ್ಣರಾಜು ಅವರು 'ಅಡಿಗರೊಂದಿಗೆ ಸಾಹಿತ್ಯಿಕ ಮತ್ತು ವೈಯಕ್ತಿಕ ಅನುಭವ' ಎಂಬ ವಿಷಯ ಕುರಿತು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.

ಕಥೆಗಾರ ಎಸ್ ದಿವಾಕರ್ ಮತ್ತು ರೋಸೀ ಡಿಸೋಜಾ ಅವರು ಗೋಪಾಲಕೃಷ್ಣ ಅಡಿಗರ ಕಾವ್ಯವಾಚನ ಮಾಡಲಿದ್ದಾರೆ. ಜೊತೆಗೆ, ಪಂಡಿತ ಡಾ. ನಾಗರಾಜರಾವ್ ಹವಾಲ್ದಾರ್ ಮತ್ತು ವಿದುಷಿ ಎಂ.ಡಿ. ಪಲ್ಲವಿ ಅವರು ಅಡಿಗರ ಕಾವ್ಯಕ್ಕೆ ಸ್ಥಳದಲ್ಲೇ ಸ್ವರ ಸಂಯೋಜನೆ ಮಾಡಿ ಹಾಡಲಿರುವುದು ಈ ಕಾರ್ಯಕ್ರಮದ ಮತ್ತೊಂದು ವಿಶೇಷ. ಎಲ್ಲರಿಗೂ ಸ್ವಾಗತ.

English summary
Attention poem lovers of Bangalore. A special program has been organized by Suchitra Art Gallery in Bangalore in the memory of poet Mogeri Gopalakrishna Adiga on June 2nd, Sunday at Suchitra Sabhangana. All are welcome.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X