ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭವಿಷ್ಯದ ವ್ಯಾಖ್ಯಾನ ಬದಲಿಸಿದ ಕೋಡಿಮಠಶ್ರೀ

By Srinath
|
Google Oneindia Kannada News

kodi-mutt-seer-rewrites-prediction-siddaramaiah-as-cm
ಅರಸೀಕೆರೆ (ಹಾಸನ), ಮೇ 30: ಸರಿಸುಮಾರು ತಿಂಗಳ ಹಿಂದೆ ಅಂದರೆ ಚುನಾವಣೆಗೆ ಮುನ್ನ ರಾಜ್ಯ ರಾಜಕೀಯದ ಬಗ್ಗೆ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಭವಿಷ್ಯ ನುಡಿದಿದ್ದರು.

ಅದರಂತೆ ತಾನು ಹೇಳಿದ್ದು ಈಗ ಸಂಪೂರ್ಣ ನಿಜವಾಗಿದೆ. ಆದರೆ ಪಾಮರರು ಅದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಕೋಡಿಮಠಶ್ರೀಗಳು ಅವಲತ್ತುಕೊಂಡಿದ್ದಾರೆ. ಅದನ್ನು ಕೆಲವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂಬುದು ಕೋಡಿಮಠಶ್ರೀಗಳ ವಿಷಾದ.

ಹಾಗಾಗಿ, ತಾವು ನುಡಿದಿದ್ದ ಭವಿಷ್ಯದ ವ್ಯಾಖ್ಯಾನವನ್ನು ಸರಿಯಾಗಿ ತಿದ್ದುತ್ತಾ, ಪಾಮರರಿಗೂ ಅರ್ಥವಾಗುವಂತೆ ಈ ಹಿಂದೆ ತಾವು ನುಡಿದಿದ್ದ ಭವಿಷ್ಯವನ್ನು ಕೋಡಿಮಠಶ್ರೀಗಳು ಹೀಗೆ ಬಿಡಿಸಿಟ್ಟಿದ್ದಾರೆ.

ಅಂಬಲಿ ಹಳಸಿತು, ಕಂಬಳಿ ಹಾಸಿತು, ಕೈಲಾಸದಲ್ಲಿ ಗಂಟೆ ಬಾರಿಸಿತು ಎಂದು ತಾಳೆಗರಿ ಭವಿಷ್ಯವನ್ನಾಧರಿಸಿ ಕೋಡಿಮಠಶ್ರೀಗಳು ನುಡಿದಿದ್ದ ಭವಿಷ್ಯ. ಅದಕ್ಕೆ ಸ್ಪಷ್ಟಕೀರಣ ರೂಪದಲ್ಲಿ ತಮ್ಮ ಭವಿಷ್ಯದ ಅರ್ಥವನ್ನು ಸ್ವಾಮೀಜಿ ಅವರು ಮಂಗಳವಾರ ವಿವರಿಸಿದ್ದು ಹೀಗೆ:
ಅಂಬಲಿ ಹಳಸಿತು ಅಂದರೆ ಡಾ ಪಿ. ಪರಮೇಶ್ವರ್ ಅವರು ದಲಿತ ಸಮಾಜದ ಮುಖಂಡರು ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷರು ಆಗಿದ್ದು ಅವರು ಸೋತಿದ್ದಾರೆ.

ಕಂಬಳಿ ಹಾಸಿತು ಅಂದರೆ ಹಿಂದುಳಿದ ವರ್ಗದ ಸಿದ್ದರಾಮಯ್ಯ ಅವರು ಕುರುಬ ಜನಾಂಗದ ಮುಂಖಡರಾಗಿದ್ದು, ಕಂಬಳಿ ಕುರುಬ ಜನಾಂಗದ ಸಂಕೇತ. ಹಾಗಾಗಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾದರು.

ಇನ್ನು ಕೈಲಾಸದಲ್ಲಿ ಗಂಟೆ ಬಾರಿಸಿತು ಎಂಬುದಕ್ಕೆ ಕಾಂಗ್ರೆಸ್ ಚಿಹ್ನೆಯಾದ ಕೈ ರಾಜ್ಯದ ಆಡಳಿತ ಸುಸೂತ್ರವನ್ನು ಹಿಡಿದ ಕಾರಣ ಕೈಲಾಸದಲ್ಲಿ ಕೈ ಗಂಟೆ ಬಾರಿಸಿತು ಎಂದು. ತಾಳೇಗರಿ ಗ್ರಂಥವನ್ನು ಕೆಲವು ಸಲ ಜನಸಾಮಾನ್ಯರು ಅರ್ಥೈಸಿಕೊಳ್ಳುವುದು ಕಷ್ಟಕರ ಸಂಗತಿ. ಎಲ್ಲದಕ್ಕೂ ನಂಬಿಕೆ ಮುಖ್ಯ ಕಾರಣ ಎಂದು ಶ್ರೀಗಳು ಹೇಳಿದ್ದಾರೆ.

English summary
During Karnataka assembly election time Sri Shivananda Rajendra Swamiji of Kodi Mutt in Arsikere in Hassan had predicted that after the assembly election Siddaramaiah will become Chief Minister. But it was wrongly understood says Kodimutt Seer. And he rewrote it yesterday with some clarifications.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X