ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಮೀನು ಸಿಕ್ಕರೂ 19 ವರ್ಷ ಜೈಲಿನಲ್ಲಿದ್ದಳು ಮಹಿಳೆ!

|
Google Oneindia Kannada News

court
ಲಕ್ನೋ, ಮೇ 30 : ದೇಶದ ನ್ಯಾಯಾಂಗ ವ್ಯವಸ್ಥೆ ಎಷ್ಟು ಕಠಿಣವಾಗಿದೆ ಎಂಬುದನ್ನು ಈ ಕರುಣಾಜನಕ ಕಥೆ ಸಾರಿ ಹೇಳುತ್ತದೆ. ನ್ಯಾಯಾಲಯ ಜಾಮೀನು ಪಡೆಯಲು ವಿಧಿಸಿದ್ದ ಹಣವನ್ನು ಹೊಂದಿಸಲು ಸಾಧ್ಯವಾಗದ ಮಹಿಳೆ 19 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ.

ಈ ಘಟನೆ ನಡೆದಿರುವುದು ಕಾನ್ಪುರದಲ್ಲಿ, ಇಲ್ಲಿನ ನಿವಾಸಿ ವಿಜಯಕುಮಾರಿ ಅವರಿಗೆ ನ್ಯಾಯಾಲಯ ಕೊಲೆ ಪ್ರಕರಣದಲ್ಲಿ 1990ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಕಾನೂನು ಹೋರಾಟ ನಡೆಸಿದ ಆಕೆ, 1999ರಲ್ಲಿ ಜಾಮೀನು ಪಡೆದರು.

ಆದರೆ, ಜಾಮೀನು ನೀಡಲು ಐದು ಸಾವಿರ ರೂ. ಪಾವತಿಸಬೇಕೆಂದು ನ್ಯಾಯಾಲಯ ಆದೇಶ ನೀಡಿತು. ಆದರೆ, ವಿಜಯ ಕುಮಾರಿ ಅವರಿಗೆ ಯಾರು ಜಾಮೀನು ನೀಡಲಿಲ್ಲ. ಪತಿಯು ಆಕೆಗೆ ಸಹಾಯ ಮಾಡಲಿಲ್ಲ. ಇದರಿಂದ ಅವರು 19 ವರ್ಷ ಜೈಲು ಶಿಕ್ಷೆ ಅನುಭವಿಸುವಂತಾಯಿತು.

ಜೈಲಿಗೆ ತೆರಳುವಾಗ ಗರ್ಭಿಣಿಯಾಗಿದ್ದ ಆಕೆಗೆ ಅಲ್ಲೆ ಮಗು ಹುಟ್ಟಿದೆ. ಆ ಮಗುವಿಗೆ ಸಸ್ಯ 19 ವರ್ಷ ವಯಸ್ಸಾಗಿದ್ದು, ಗಾರ್ಮೆಂಟ್ಸ್ ನಲ್ಲಿ ಹಗಲು-ರಾತ್ರಿ ದುಡಿದು ಆತ ಐದು ಸಾವಿರ ರೂ.ಹೊಂದಿಸಿ ತಾಯಿಯನ್ನು ಬಿಡುಗಡೆಗೊಳಿಸಲು ಮುಂದಾಗಿದ್ದಾನೆ.

ಶುಕ್ರವಾರ ವಿಜಯಕುಮಾರಿ ಅವರು ಜಾಮೀನು ಪಡೆಯಲಿದ್ದು, ಜೈಲಿನಿಂದ ಬಿಡುಗಡೆಗೊಳ್ಳಲಿದ್ದಾರೆ. ಹೆತ್ತ ತಾಯಿಯನ್ನು ಮಗನೇ ಕೂಲಿ ಮಾಡಿ ಬಿಡುಗಡೆಗೊಳಿಸಿದ ಪ್ರಸಂಗವಿದು.

"ಕಷ್ಟದಲ್ಲಿದ್ದಾಗ ನನಗೆ ಯಾರೊಬ್ಬರೂ ಸಹಾಯ ಮಾಡಲಿಲ್ಲ. ಕಾನೂನು ಕೂಡ ನೆರವಿಗೆ ಬರಲಿಲ್ಲ. ನನ್ನ ಹಕ್ಕಿಗಾಗಿ ನಾನು ಹೋರಾಟ ಮಾಡುತ್ತೇನೆ. ನನ್ನ ಮಗನನ್ನು ವಕೀಲನನ್ನಾಗಿ ಮಾಡುತ್ತೇನೆ" ಎಂದು ಬಿಡುಗಡೆ ಆಗಲಿರುವ ವಿಜಯಕುಮಾರಿ ವಿಶ್ವಾಸದಿಂದ ಹೇಳಿದ್ದಾಳೆ.

ಹೇಗಿದೆ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ಎನ್ನುವುದಕ್ಕೆ ಇದೊಂದು ಉದಾಹರಣೆ ಸಾಕು. ಕೊನೆಗೂ ವಿಜಯ ಕುಮಾರಿ ಬಿಡುಗಡೆ ಆಗುತ್ತಿದ್ದು, ಮಗುವಿಗೆ ಉತ್ತಮ ಭವಿಷ್ಯ ರೂಪಿಸಲಿ ಎಂದು ಹಾರೈಸೋಣ.

English summary
In Uttar Pradesh An Indian son finally secures the release of his mother who spent 19 years in jail on bail. The 19-year old worked night and day in a garment factory to raise Rs 5000. his mother was sentenced to life in prison for murder, but was released on bail. but she have not money to pay surety so she, spent 19 years in jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X