ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹತ್ವದ ಇ-ಆಧಾರ್ ಕಾರ್ಡ್ ಪ್ರಿಂಟ್ ಔಟ್ ತೆಗೆದುಕೊಳ್ಳಿ

By Srinath
|
Google Oneindia Kannada News

ತುಮಕೂರು, ಮೇ 29: ಮತ್ತೆ ಮತ್ತೆ ಹೇಳುತ್ತಿದ್ದೇವೆ. ಆಧಾರ್ ಕಾರ್ಡ್ ಗುರುತಿನ ಚೀಟಿಗೆ ಈಗ ಎಲ್ಲಿಲ್ಲದ ಮಹತ್ವ ಬಂದಿದೆ. ಹಾಗಾಗಿ ಮೊದಲು ಒಂದು ಆಧಾರ್ ಕಾರ್ಡನ್ನು ಮಾಡಿಸಿಟ್ಟುಕೊಳ್ಳಿ. ಏನು? ಈಗಾಗಲೇ ಅರ್ಜಿ ಗುಜರಾಯಿಸಿದ್ದೇವೆ. ಆದರೆ ಎಷ್ಟು ದಿನಗಳಾದರೂ ನಮಗೆ ಕಾರ್ಡ್ ಬಂದಿಲ್ಲ ಎನ್ನುತ್ತಿದ್ದಾರೆ. ಅದಕ್ಕೊಂದು ತಾತ್ಕಾಲಿಕ ಪರಿಹಾರ ಇಲ್ಲಿದೆ.

Aadhaar cardಗಾಗಿ ಈಗಾಗಲೇ ನೋಂದಣಿ ಮಾಡಿಸಿದ್ದರೆ UIDAI websiteನಲ್ಲಿ ಆ ನೋಂದಣಿಯ ಸಂಖ್ಯೆಯನ್ನು ನಮೂದಿಸಿ, ನಿಮ್ಮ Aadhaar Number ಇರುವ e-Aadhaar ಪ್ರತಿಯನ್ನು ಡೌನ್ ಲೋಡ್ ಮಾಡಿಟ್ಟುಕೊಳ್ಳಿ.

if-aadhaar-card-not-delivered-take-e-aadhaar-print

ಏಕೆಂದರೆ ತಾತ್ಕಾಲಿಕವಾಗಿ ಇದೇ Aadhaar card ಪ್ರತಿಯನ್ನು ಅಧಿಕೃತವಾಗಿ ನೀವು ಅಗತ್ಯವಿರುವ ಕಡೆ ಚಲಾಯಿಸಬಹುದು. UID ಉಪ ನಿರ್ದೇಶಕ ಅಶೋಕ್ ದಳವಾಯಿ ಅವರೇ ಇದನ್ನು ಸ್ಪಷ್ಟಪಡಿಸಿದ್ದಾರೆ.

ಲಕ್ಷಾಂತರ ಮಂದಿ ಕಾರ್ಡಿಗಾಗಿ ಬೇಡಿಕೆಯಿಟ್ಟು ಅರ್ಜಿ ಗುಜರಾಯಿಸುತ್ತಿದ್ದಾರೆ. ಇಡೀ ದೇಶದಲ್ಲಿ ಶತಕೋಟಿ ಮಂದಿಗೆ ಕಾರ್ಡು ವಿತರಿಸಬೇಕು. ಈ ಅಗಾಧ ಕಸರತ್ತು ನಡೆಸುವಾಗ ಒಂದಷ್ಟು ವಿಳಂಬಗಳಾಗುವುದು ಸಹಜ. ಆದರೂ ಹೆಚ್ಚು ವ್ಯತ್ಯಯ/ ಲೋಪವಾಗಬಾರದೆಂದು UID ಈ ಪೂರಕ ವ್ಯವಸ್ಥೆಗೆ ಶರಣಾಗಿದೆ.

ಏನಿದು e-Aadhaar?: ಇದು ನಿಮ್ಮ ಕಾಯಂ Aadhaar ಕಾರ್ಡಿನ ಡಿಜಿಟಲ್ ರೂಪ. ಎಲ್ಲ ಅರ್ಹ ಅರ್ಜಿದಾರರಿಗೂ ರಾಜ್ಯಾದ್ಯಂತ ಈ ಸೇವೆ ಲಭ್ಯವಿದೆ. ಸಮೀಪದ BangaloreOne ಕೇಂದ್ರದಲ್ಲಿ 9 ರೂ. ಶುಲ್ಕ ತೆತ್ತು ಈ ಸೇವೆಯನ್ನು ಪಡೆಯಬಹುದು.

ಗಮನಿಸಿ:ಗಮನಿಸಿ:

English summary
If Aadhaar Card not delivered take e-Aadhaar print by paying Rs 9 at BangaloreOne centres.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X