ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಸಿಐ ಹುದ್ದೆ: ಶ್ರೀನಿವಾಸನ್ ಇರ್ಬೇಕಾ? ಹೋಗ್ಬೇಕಾ?

By Mahesh
|
Google Oneindia Kannada News

IPL: oneindia readers divided on Srinivasan's resignation
ಬೆಂಗಳೂರು, ಮೇ.29: ಸ್ಪಾಟ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದ ಮೇಲೆ ಎಲ್ಲಾ ಮಾಧ್ಯಮಗಳು ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರ ಪದಚ್ಯುತಿಗೆ ಹಾತೊರೆಯುವುದು ಗೊತ್ತೇ ಇದೆ.

ಶ್ರೀನಿವಾಸನ್ ಅವರ ಅಳಿಯ ಸಿಎಸ್ ಕೆ ತಂಡದ ಗುರುನಾಥ್ ಮೇಯಪ್ಪನ್ ಅವರು ಆರೋಪಿಯಾದ ಮೇಲಂತೂ ಟಿವಿ ಮಾಧ್ಯಮಗಳಿಗೆ ಶ್ರೀನಿವಾಸನ್ ಅವರನ್ನು ಕೆಳಗಿಳಿಸುವ ಆಗ್ರಹಪೂರ್ವಕ ಸುದ್ದಿಗಳು ಅಹರ್ನಿಶಿ ಓಡುತ್ತಿವೆ. ಇದೇ ನಿಟ್ಟಿನಲ್ಲಿ ನಮ್ಮ ಓದುಗರ ಅಪೇಕ್ಷೆಯಂತೆ ಒನ್ ಇಂಡಿಯಾ ಸಂಸ್ಥೆ ಕೂಡಾ ಸಮೀಕ್ಷೆ ನಡೆಸಿ ಫಲಿತಾಂಶ ಪಡೆದಿದೆ.

ಕಳೆದ ಭಾನುವಾರ ಕೋಲ್ಕತ್ತಾದಲ್ಲಿ ಮುಂಬೈ ಇಂಡಿಯನ್ಸ್ ಕೈಗೆ ಐಪಿಎಲ್ 2013 ಟ್ರೋಫಿ ಇತ್ತ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರು ನಂತರ ಬಿಸಿಸಿಐ ಸಭೆಯಲ್ಲಿ ಕಾಣಿಸಿಕೊಂಡಿದ್ದರು. ನಂತರ ಸುದ್ದಿಗೋಷ್ಠಿ ನಡೆಸಿ ನನ್ನ ಅಳಿಯನಿಗೂ ಚೆನ್ನೈ ತಂಡಕ್ಕೂ ಸಂಬಂಧವಿಲ್ಲ. ನನ್ನ ಅಳಿಯನ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ. ನನ್ನ ರಾಜೀನಾಮೆಗೆ ಯಾರೂ ಆಗ್ರಹಿಸಿಲ್ಲ ಎಂದಿದ್ದರು.

ಆದರೆ, ಶ್ರೀನಿವಾಸನ್ ಅವರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಇಳಿಸಲು 3/4ನೇ ಭಾಗದಷ್ಟು ಸದಸ್ಯರು ಅವರ ವಿರುದ್ಧ ಮತ ಹಾಕಬೇಕು. ಅದು ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಅಂದರೆ ಸುಮಾರು 31 ಸದಸ್ಯರಿರುವ ಬೋರ್ಡ್ ನಲ್ಲಿ 24 ಸದಸ್ಯರು ಶ್ರೀನಿವಾಸನ್ ವಿರುದ್ಧ ಮತ ಹಾಕಬೇಕಾಗುತ್ತದೆ. ಆದರೆ, ಶ್ರೀನಿವಾಸನ್ ಅವರ ರಾಜೀನಾಮೆ ಬಗ್ಗೆ, ಚೆನ್ನೈ ತಂಡ ಮಾನ್ಯತೆ ರದ್ದುಗೊಳಿಸುವ ಬಗ್ಗೆ ಬಿಸಿಸಿಐ ಆತುರವಾಗಿ ನಿರ್ಧಾರ ಕೈಗೊಳ್ಳಲು ತಯಾರಿಲ್ಲ.

ಸದ್ಯಕ್ಕೆ ಶ್ರೀನಿವಾಸನ್ ವಿರುದ್ಧ ಅರುಣ್ ಜೇಟ್ಲಿ ಜೊತೆಗೆ ಕೆಲವು ಸದಸ್ಯರು ಮಾತನಾಡಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ಅವರು ಕೂಡಾ ರಾಜೀನಾಮೆ ಇತ್ತರೆ ಒಳ್ಳೆಯದು ಎಂದಿದ್ದಾರೆ. ಆದರೆ, ಶ್ರೀನಿವಾಸ್ ಗೆ ಸದಸ್ಯರ ಬೆಂಬಲ ಸಿಕ್ಕಿದೆ. ಆದರೆ, ಜನಬಲ ಸಿಕ್ಕಿಲ್ಲ.

ಒನ್ ಇಂಡಿಯಾ ಕನ್ನಡ ಓದುಗರು ಎನ್ ಶ್ರೀನಿವಾಸನ್ ಅವರು ತಕ್ಷಣವೇ ಕುರ್ಚಿ ಬಿಡಲಿ ಎಂದು ಫರ್ಮಾನು ಹೊರಡಿಸಿದ್ದರೆ, ಒನ್ ಇಂಡಿಯಾ ತಮಿಳು ಓದುಗರು 'ಶ್ರೀನಿ ಮಾಮ' ಇನ್ನೂ ಇರಲಿ, ತನಿಖೆ ಅದಮೇಲೆ ಸತ್ಯ ಗೊತ್ತಾಗುತ್ತೆ ಎಂದಿದ್ದಾರೆ. ಒನ್ ಇಂಡಿಯಾ ಉಳಿದ ವೆಬ್ ತಾಣಗಳಲ್ಲೂ ಶ್ರೀನಿವಾಸನ್ ರಾಜೀನಾಮೆಗೆ ಆಗ್ರಹಿಸಿವೆ. ಒನ್ ಇಂಡಿಯಾ ಓದುಗರ ಅಭಿಮತ ಇಂತಿದೆ:

ಒನ್ ಒಂಡಿಯಾ ತಮಿಳು ಓದುಗರ ಅಭಿಮತ
ಶ್ರೀನಿವಾಸನ್ ಇರ್ಬೇಕು : 4,873
ಶ್ರೀನಿವಾಸನ್ ವಿರುದ್ಧ: 3,968

ಒನ್ ಇಂಡಿಯಾ ಇಂಗ್ಲೀಷ್
ಶ್ರೀನಿವಾಸನ್ ಪರ : 189
ವಿರುದ್ಧ: 463

ಒನ್ ಇಂಡಿಯಾ ಕನ್ನಡ
ಶ್ರೀನಿವಾಸನ್ ಇರ್ಬೇಕು : 246
ವಿರುದ್ಧ: 3221

ದಟ್ಸ್ ಕ್ರಿಕೆಟ್

ಶ್ರೀನಿವಾಸನ್ ಪರ : 51
ವಿರುದ್ಧ: 123

English summary
He resisted the whole of weekend and went to Kolkata to present the IPL trophy to the Mumbai Indian team. BCCI president N Srinivasan has refused to step down as cricket board chief, despite demands and fierce opposition to his continuation at top post, from within and outside the cricketing world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X