ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನಿ ಲಾಂಡ್ರಿಂಗ್ : ಎಚ್ ಡಿಎಫ್ ಸಿ ಸೇರಿ 3 ಬ್ಯಾಂಕುಗಳಿಗೆ ನೋಟಿಸ್

By Mahesh
|
Google Oneindia Kannada News

Money laundering: I-T dept issues notices to ICICI, Axis, HDFC banks
ನವದೆಹಲಿ, ಮೇ.29: ಕೋಬ್ರಾಪೋಸ್ಟ್ ಕುಟುಕು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಮಂಗಳವಾರ ಐಸಿಐಸಿಐ, ಏಕ್ಸಿಸ್ ಹಾಗೂ ಎಚ್ ಡಿಎಫ್ ಸಿ ಬ್ಯಾಂಕು ಗಳಿಗೆ ನೋಟಿಸ್ ನೀಡಿದೆ.

ತೆರಿಗೆ ಉಲ್ಲಂಘನೆ ಪ್ರಕರಣದ ಪರಿಶೀಲನೆಗಾಗಿ ಈ 3 ಬ್ಯಾಂಕ್ ಗಳಿಂದ ಕೆಲ ದಾಖಲೆಗಳನ್ನು ಇಲಾಖೆ ಕೇಳಿದೆ. ಕಂದಾಯ, ಆರ್‌ಬಿಐ ಮತ್ತು ಹಣಕಾಸು ಗುಪ್ತಚರ ವಿಭಾಗ ನೀಡಿದ ರಹಸ್ಯ ವರದಿಯನ್ನು ಆಧರಿಸಿ ಈ ನೋಟಿಸ್ ಜಾರಿ ಮಾಡಲಾಗಿದೆ ಎನ್ನಲಾಗಿದೆ.

ಆದಾಯ ತೆರಿಗೆ ಇಲಾಖೆಯ ಮುಖ್ಯ ಉದ್ದೇಶ ತೆರಿಗೆ ಉಲ್ಲಂಘನೆಗೆ ಸಂಬಂಧಿಸಿ ಪರಿಶೀಲಿಸುವುದು, ಕಾಳಧನ ದಂಧೆಗೆ ಸಹಕಾರ ನೀಡಿದ್ದರಿಂದ ಆದ ಆದಾಯ ನಷ್ಟವನ್ನು ಪತ್ತೆಹಚ್ಚುವುದಾಗಿದೆ.

ವಿವರಣೆಗೆ ಸೂಚನೆ: ಇದರ ಜತೆಗೆ, ಕೋಬ್ರಾಪೋಸ್ಟ್ ಕುಟುಕು ಕಾರ್ಯಾಚರಣೆ ಬಳಿಕ ಬ್ಯಾಂಕ್‌ಗಳು ನಡೆಸಿದ ಆಂತರಿಕ ತನಿಖೆಯ ವಿವರ ನೀಡುವಂತೆಯೂ ಇಲಾಖೆ ಕೇಳಿದೆ. ಕೆಲವು ಪ್ರಕರಣಗಳಲ್ಲಿ ದಾಖಲೆಗಳ ಪರಿಶೀಲನೆ ವೇಳೆ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಖುದ್ದು ಹಾಜರಿದ್ದು, ವಿವರಣೆ ಮತ್ತು ಸ್ಪಷ್ಟನೆ ನೀಡಬೇಕು ಎಂದೂ ಆದಾಯ ತೆರಿಗೆ ಸೂಚಿಸಿದೆ.

ಮನಿಲಾಂಡ್ರಿಂಗ್ ಎಂದರೇನು? : ಕಾಳಧನಕ್ಕೆ ಯಾವುದೇ ತೆರಿಗೆ ಕಟ್ಟುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಜಾರಿ ನಿರ್ದೇಶನಾಲಯ, ತೆರಿಗೆ ಇಲಾಖೆ ಕಣ್ಣಿಗೆ ಬಿದ್ದು ಹಣ ಜಪ್ತಿಯಾಗುವ ಭೀತಿ ಎದುರಾದಾಗ ಡರ್ಟಿ ಮನಿಯನ್ನು ಸ್ವಚ್ಛ ನಗದಾಗಿ ಪರಿವರ್ತಿಸಲು ಮನಿ ಲಾಂಡ್ರಿಂಗ್ ಬಳಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಐಟಿ ಕಾಯ್ದೆ ಸೆಕ್ಷನ್ 131 ರ ಅಡಿಯಲ್ಲಿ ಬ್ಯಾಂಕುಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಆರ್ ಬಿಐಗೆ ಕಂದಾಯ ಇಲಾಖೆ ಇತ್ತೀಚೆಗೆ ನೀಡಿದ ವರದಿ ಹಾಗೂ ಫೈನಾನ್ಸ್ ಗುಪ್ತಚರ ಘಟಕ(FIU) ಮಾಹಿತಿಯನ್ನು ಆಧರಿಸಿ ಆದಾಯ ತೆರಿಗೆ ಇಲಾಖೆ ಈ ಕ್ರಮ ಕೈಗೊಂಡಿದೆ.

ಕೋಬ್ರಾಪೋಸ್ಟ್ ಕುಟುಕು ಕಾರ್ಯಾಚರಣೆಯಿಂದ ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಸುಮಾರು 23 ಬ್ಯಾಂಕ್ ಹಾಗೂ ವಿಮೆ ಕಂಪನಿಗಳಲ್ಲಿ ಮನಿ ಲಾಂಡ್ರಿಂಗ್ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.

ತನಿಖೆಯಿಂದ ಹೊರ ಬಿದ್ದ ಬ್ಯಾಂಕುಗಳ ಹೆಸರುಗಳು ಇಂತಿದೆ: ಎಸ್ ಬಿಐ, ಎಲ್ ಐಸಿ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ರಿಲಯನ್ಸ್ ಲೈಫ್, ಟಾಟಾ ಎಐಎ, ಯೆಸ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಐಡಿಬಿಐ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ದೇನಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಧನಲಕ್ಷ್ಮಿ ಬ್ಯಾಂಕ್, ಫೆಡರಲ್ ಬ್ಯಾಂಕ್, ಡಿಸಿಬಿ ಬ್ಯಾಂಕ್ ಹಾಗೂ ಬಿರ್ಲಾ ಸನ್ ಲೈಫ್

English summary
Income Tax department has issued notices to three top private lenders in the country - ICICI Bank, Axis Bank and HDFC Bank - in connection with alleged money laundering charges levelled by online portal Cobrapost.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X