ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಕ್ಕೆ 10 ಲಕ್ಷ ದಂಡ ಕಟ್ಟಿದ ಧೂಮಪಾನಿಗಳು

|
Google Oneindia Kannada News

smoking
ಬೆಂಗಳೂರು, ಮೇ 28 : ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬೇಡಿ ಎಂಬ ನಿಯಮವಿದ್ದರೂ ಅದನ್ನು ಗಾಳಿಗೆ ತೂರಿ ಜನರು ಧೂಮಲೀಲೆ ನಡೆಸುತ್ತಾರೆ. ಇಂತಹ ಧೂಮಲೀಲೆಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಪೊಲೀಸರ ಸಹಾಯದಿಂದ ಕಡ್ಡಾಯವಾಗಿ ಕಾನೂನು ಜಾರಿಗೊಳಿಸಲು ಇಲಾಖೆ ಚಿಂತನೆ ನಡೆಸಿದೆ.

ಕರ್ನಾಟಕದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಮತ್ತು ತಂಬಾಕು ಉತ್ಪನ್ನಗಳನ್ನು ಬಳಕೆ ಮಾಡುವುದನ್ನು 2004ರಿಂದ ನಿಷೇಧಿಸಲಾಗಿದೆ. ಈ ಕಾಯ್ದೆ 2008ರಿಂದ ಕಡ್ಡಾಯವಾಗಿ ಜಾರಿಗೆ ಬಂದಿದೆ. ಆದರಂತೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವಂತಿಲ್ಲ.

ಜನರು ಇದನ್ನು ಮರೆತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಂಡ ವಿಧಿಸುತ್ತದೆ. ಇಲಾಖೆ ಆಯುಕ್ತ ವಿ.ಬಿ.ಪಾಟೀಲ್ ಪ್ರಕಾರ, 2008ರಿಂದ ಇದುವರೆಗೂ ಹತ್ತು ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿಕೊಂಡು, 10.79 ಲಕ್ಷ ರೂ.ಹಣವನ್ನು ದಂಡ ರೂಪದಲ್ಲಿ ಪಡೆಯಲಾಗಿದೆ.

ಇನ್ನೂ 1,052 ಪ್ರಕರಣಗಳು ಇತ್ಯರ್ಥವಾಗಬೇಕಿದೆ. ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಸೇವನೆ ಮಾಡದಂತೆ ಜನರಿಗೆ ಅರಿವು ಮೂಡಿಸಲು ಇಲಾಖೆ ಹಲವಾರ ಯೋಜನೆಗಳನ್ನು ಜಾರಿಗೊಳಿಸಲು ಇಲಾಖೆ ಮುಂದಾಗಿದೆ. ಪೊಲೀಸರು ಸಹಕಾರದಿಂದ ಕಾಯ್ದೆಯನ್ನು ಕಡ್ಡಾಯವಾಗಿ ಜಾರಿಗೆ ತರಲು ಚಿಂತನೆ ನಡೆಸಿದೆ.

ಎನ್ ಜಿಓಗಳ ಸಹಕಾರ : ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯ ಧೂಮಪಾನ ನಿಷೇಧ ಕಾಯ್ದೆ ಕಡ್ಡಾಯವಾಗಿ ಜಾರಿಗೊಳಿಸಲು ಎನ್ ಜಿಓಗಳ ಸಹಕಾರ ಪಡೆಯಲು ಇಲಾಖೆ ನಿರ್ಧರಿಸಿದೆ. ಅಲ್ಲದೇ ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ರೈತರಿಗೆ ತಂಬಾಕು ಬೆಳೆಯವ ಬದಲು ಬೇರೆ ಬೆಳೆ ಬೆಳೆಯುವಂತೆ ಅರಿವು ಮೂಡಿಸಲು ಯೋಜನೆ ತಯಾರಿಸಲಾಗಿದೆ.

ಕಡ್ಡಾಯ ಪಾಲನೆ : ವಿದ್ಯಾಸಂಸ್ಥೆಗಳು ಇರುವ ಪ್ರದೇಶದ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯಕ್ತಿಗಳ ವಿರುದ್ದ ಪ್ರಕರಣ ದಾಖಲಿಸಲು ಇಲಾಖೆ ಸಜ್ಜಾಗಿದೆ. ಹಲವು ಇಲಾಖೆಗಳ ಜೊತೆ ಚರ್ಚೆ ನಡೆಸಿ, ಪ್ರತಿ ಜಿಲ್ಲೆಯಲ್ಲೂ ನೊಡೆಲ್ ಅಧಿಕಾರಿ ನೇಮಿಸಲಾಗಿದೆ.

ಪೊಲೀಸ್ ಇಲಾಖೆಯ ಸಹಕಾರವನ್ನು ಆರೋಗ್ಯ ಇಲಾಖೆ ಕೋರಿದ್ದು, ಸಾರ್ವಜನಿಕ ಸ್ಥಳ ಮತ್ತು ವಿದ್ಯಾಸಂಸ್ಥೆಗಳ ಆವರಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಂಬಾಕು ಉತ್ಪನ್ನ ಮಾರಾಟದ ವಿರುದ್ದ ಕ್ರಮ ಕೈಗೊಳ್ಳಲು ಸಜ್ಜಾಗಿದೆ.

ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ, ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡಿ ಇತರರ ಆರೋಗ್ಯಕ್ಕೂ ಹಾನಿ ಉಂಟುಮಾಡುವ ವ್ಯಕ್ತಿಗಳಿಗೆ ಇಲಾಖೆ ಅಂತಿಮ ಎಚ್ಚರಿಕೆ ನೀಡಿದೆ. ಅದರೆಂತೆ ಧೂಮಪಾನ ಮಾಡಿ ಸಿಕ್ಕಿಬಿದ್ದರೆ ದಂಡ ಕಟ್ಟಬೇಕಾಗಿರುವುದು ಖಂಡಿತ.

English summary
The Karnataka government has collected Rs 10.79 lakh as penalty from people smoking in public places said, Commissioner for Health and Family Welfare department V B Patil. and he added that, for Implementation of ban smoking in public places department seek for police help.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X