ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಗವಂತನಿಂದ ವಿಮುಖರಾಗುತ್ತಿರುವ ಭಾರತೀಯರು!

By Srinath
|
Google Oneindia Kannada News

london-atheism-survey-indians-stop-believing-god
ಲಂಡನ್, ಮೇ 28: ಶಿವ ಶಿವಾ ಎಂಥಾ ಸುದ್ದಿಯಪ್ಪಾ ಇದು. ಎಂಥ ಕೇಡುಗಾಲವೋ! ನಮ್ಮ ಭಾರತೀಯರು ದೇವರಲ್ಲಿ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ಅಪ್ಪಟ ಮಡಿವಂತರು/ದೈವಭಕ್ತರು ಮೂಗುಮುರಿಯಬಹುದು. ಆದರೆ ಅದು ವಾಸ್ತವವಾಗುತ್ತಿದೆ. ಆಧುನಿಕತೆಯ ಮೋಡಿಗೆ ಸಿಲುಕಿದ ಜನ ದೇವರಿಂದ ವಿಮುಖರಾಗುತ್ತಿದ್ದಾರೆ.

ಏನಪ್ಪಾ ಅಂದರೆ ಭಾರತದಲ್ಲಿ ಸಮೀಕ್ಷೆ ಆಧರಿತ 'ಧಾರ್ಮಿಕತೆ ಹಾಗೂ ನಾಸ್ತಿಕತೆಯ ಜಾಗತಿಕ ಸೂಚ್ಯಂಕ' (Global Index of Religiosity and Atheism) ಪ್ರಕಾರ ಭಾರತದಲ್ಲಿ ನಾಸ್ತಿಕರು ಅಂದರೆ ದೇವರಿಂದ ದೂರವಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. 8 ವರ್ಷಗಳಲ್ಲಿ ಈ ಬೆಳವಣಿಗೆಗಳು/ ಪರಿವರ್ತನೆಗಳು ಕಾಣಿಸಿಕೊಂಡಿವೆ.

2005ರಲ್ಲಿ ನಡೆದ ಸಮೀಕ್ಷೆಯ ಪ್ರಕಾರ ಶೇ. 87 ಮಂದಿ ಭಾರತೀಯರು ದೇವರಿಗೆ ಕೈಮುಗಿಯುತ್ತಾ ಭಗವಂತಾ ನಮಗೆ ನಿನ್ನಲ್ಲಿ ವಿಶ್ವಾಸವಿದೆ ಎಂದು ಕೈಮುಗಿದಿದ್ದರು. ಆದರೆ ಕೇವಲ 8 ವರ್ಷಗಳ ತರುವಾಯ ಅಂದರೆ 2013ರ ನಡೆದ ಮತ್ತೊಂದು ಸಮೀಕ್ಷೆಯಲ್ಲಿ ಶೇ. 81 ಮಾತ್ರವೇ ತಮಗೆ ದೇವರಲ್ಲಿ ಭಕ್ತಿ/ನಂಬುಗೆಯಿರುವುದು ಎಂದಿದ್ದಾರೆ.

ಆಯ್ತು ಭಕ್ತರ ಸಂಖ್ಯೆ ಹೀಗೆ. ಭಕ್ತಿ ಇಲ್ಲದವರ ಸಂಖ್ಯೆ ಏನಾಗುತ್ತಿದೆ ಎಂಬ ಕುತೂಹಲ ಮನೆ ಮಾಡಿದಾಗ... ನಾಸ್ತಿಕರು ಎಂದು ಗುರುತಿಸಿಕೊಳ್ಳುವವರ ಸಂಖ್ಯೆಯೂ ಇಳಿಮುಖವಾಗುತ್ತಿದೆ (ಶೇ. 1). 2005ರಲ್ಲಿ ಶೇ. 4 ಮಂದಿ ತಮಗೆ ದೇವರಲ್ಲಿ ನಂಬಿಕೆಯಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದರು. ಅದೇ 2013ರ ವೇಳೆಗೆ ಹೀಗೆ ಹೇಳುವವರ ಸಂಖ್ಯೆ ಶೇ. 3 ಕ್ಕೆ ಸೀಮಿತಗೊಂಡಿದೆ.

ಇನ್ನು, ಈ ವಿದ್ಯಮಾನ ಭಾರತಕ್ಕೆ ಸೀಮಿತವಾಗಿಲ್ಲ. ವಿಶ್ವಮಟ್ಟದಲ್ಲಿಯೂ ಆಸ್ತಿಕ/ನಾಸ್ತಿಕರ ನಡುವೆ ಅಂತರ ಕಾಣಿಸಿಕೊಳ್ಳುತ್ತಿದೆ. ಧಾರ್ಮಿಕ ಶ್ರದ್ದೆಯುಳ್ಳವರ ಸಂಖ್ಯೆ ಶೇ. 9ರಷ್ಟು ಕುಸಿತ ಕಂಡಿದ್ದರೆ, ನಾಸ್ತಿಕವಾದವು ಶೇ. 3ರಷ್ಟು ಹೆಚ್ಚಿದೆ. ಆದರೆ ಧರ್ಮಾಂಧ ಪಾಕಿಸ್ತಾನದಲ್ಲಿ ಧಾರ್ಮಿಕತೆಯಲ್ಲಿ ನಂಬುಗೆಯುಳ್ಳವರ ಸಂಖ್ಯೆ ಶೇ. 6ರಷ್ಟು ಹೆಚ್ಚಾಗಿದೆ. ಜಾಗತಿಕವಾಗಿ ಸರಾಸರಿ ನಾಸ್ತಿಕರ ಸಂಖ್ಯೆ ಶೇ. 13ರಷ್ಟಿದೆ.

ಪ್ರಸ್ತುತ ಪೋಪ್ ಫ್ರಾನ್ಸಿಸ್ ಅವರ ಕ್ರೈಸ್ತರ ನಾಡಾದ ಅರ್ಜೆಂಟೀನಾದಲ್ಲಿ ಧಾರ್ಮಿಕ ಮನೋಭಾವದ ಜನರ ಸಂಖ್ಯೆ ಶೇ. 8ರಷ್ಟು ಕುಸಿತ ಕಂಡಿದೆ. ಅದೇ ರೀತಿ, ದಕ್ಷಿಣ ಆಫ್ರಿಕಾದಲ್ಲಿ ಧರ್ಮದ ಮೇಲೆ ನಂಬಿಕೆ ಕಳೆದುಕೊಂಡವರ ಸಂಖ್ಯೆ ಶೇ. 19ರಷ್ಟು ಕುಸಿತ ಕಂಡಿದ್ದರೆ, ಅಮೆರಿಕದಲ್ಲಿ ಶೇ. 13, ಸ್ವಿಜರ್ಲೆಂಡ್ ಹಾಗೂ ಫ್ರಾನ್ಸ್‌ನಲ್ಲಿ ತಲಾ ಶೇ. 21 ಹಾಗೂ ವಿಯೆಟ್ನಾಂನಲ್ಲಿ ಶೇ. 23ರಷ್ಟು ಕುಸಿದಿದೆ.

ಜಾಗತಿಕವಾಗಿ ಐದು ಖಂಡಗಳ 57 ರಾಷ್ಟ್ರಗಳಿಂದ 51,927 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಚೀನಾದಲ್ಲಿ ಅತಿ ಹೆಚ್ಚು ನಾಸ್ತಿಕರಿದ್ದು, ಇಲ್ಲಿನ ಶೇ. 50ರಷ್ಟು ಜನ ತಮಗೆ ದೇವರಲ್ಲಿ ನಂಬಿಕೆ ಇಲ್ಲ ಎಂದಿದ್ದಾರೆ.

English summary
London Global Index Religiosity Atheism survey has found that the number of non religious people in India has risen. The survey also found a 1% dip in the number of people calling themselves as an atheist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X