ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫಿಯಂತೆ iGateನಿಂದಲೂ ಕೋಟ್ಯಂತರ ತೆರಿಗೆ ಬಾಕಿ

By Srinath
|
Google Oneindia Kannada News

igate-follow-other-mnc-face-i-t-dept-tax-evasion-notice
ಬೆಂಗಳೂರು, ಮೇ 28: ಏನೋಪ್ಪಾ ಇವರು ಏನು ಕೇಳುತ್ತಿದ್ದಾರೋ ಜನಸಾಮಾನ್ಯರಿಗಂತೂ ಗೊತ್ತಾಗ್ತಿಲ್ಲ. ಅಲ್ಲಾ ಇವರು ನೂರಾರು ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ತೆರಿಗೆ ಪಾವತಿಸಿ ಅಂತ ಕೇಳಿದರೆ ನಾವು ಕೋರ್ಟಿಗೆ ಹೋಗ್ತೀವಿ. ಅಲ್ಲಿ ಲೆಕ್ಕ ಚುಕ್ತಾ ಮಾಡ್ತೀವಿ ಬನ್ನಿ ಅನ್ತಿದ್ದಾರೆ.

ಅಂಥ ಕಾನೂನು ಯಾವುದಪ್ಪಾ, ಈ ನೆಲೆಯಲ್ಲಿ. ನೂರಾರು ಕೋಟಿ ತೆರಿಗೆ ಬಾಕಿಯಿದ್ದೂ ಅದನ್ನು ಕಟ್ಟುವುದರಿಂದ ತಪ್ಪಿಸಿಕೊಳ್ಳುವ ಕಾನೂನು. ಸ್ವಲ್ಪ ನಮಗೂ ಹೇಳಿಕೊಡಿ ಎಂದು ಚಿಲ್ರೆ ಲೆಕ್ಕದಲ್ಲಿ ಸಾವಿರಾರು ರೂಪಾಯಿ ತೆರಿಗೆಯನ್ನು ಪ್ರಾಮಾಣಿಕವಾಗಿ ಪಾವತಿಸುವ ಬಡ ಬೋರೇಗೌಡರು ಕೇಳುತ್ತಿದ್ದಾರೆ. ಸುಂಕದವನ ಮುಂದೆ ಸುಖ-ದುಃಖವೇ!?

ಆದರೂ ದೇಶದ ಅಗ್ರ ಐಟಿ ಕಂಪನಿಗಳಲ್ಲಿ ಒಂದಾದ ಬೆಂಗಳೂರು ಮೂಲದ ಇನ್ಫೋಸಿಸ್ ಟೆಕ್ನಾಲಜಿಸ್ ಲಿಮಿಟೆಡ್ ಬರೋಬ್ಬರಿ 582 ಕೋಟಿ ರೂ ಅಂದರೆ 106 ದಶಲಕ್ಷ ಡಾಲರ್ ಬಡ್ಡಿ ಸಹಿತ ಆದಾಯ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ.

ಹಾಗೆಯೇ, ಐಗೇಟ್‌ ಎಂಬ ಅಮೆರಿಕದ ಕಂಪನಿಯೊಂದು ಭಾರತದಲ್ಲಿ ಹೆಚ್ಚಾಗಿ ಕಾರ್ಚಾಚರಣೆ ಹೊಂದಿದ್ದು, ಅದೂ ಸಹ 738 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದೆ. ಮತ್ತು, ಅದೂ ಸಹ ತಾನು ತೆರಿಗೆ ಕಟ್ಟೋಲ್ಲ ಎನ್ನುತ್ತಿದೆ.

ಗಮನಾರ್ಹವೆಂದರೆ ಐಗೇಟ್‌ ಕಂಪನಿಯು ಲೈಂಗಿಕ ಹಗರಣದಲ್ಲಿ ಸಿಲುಕಿದ್ದ ತನ್ನ ಸಿಇಒ ಫ‌ಣೀಶ್‌ ಮೂರ್ತಿ ಅವರನ್ನು ಇತ್ತೀಚೆಗಷ್ಟೇ ಕಿತ್ತೂಗೆದಿದೆ. ಅದರ ಪ್ರಾಯಶ್ಚಿತ್ತವಾಗಿ ಕೋಟ್ಯಂತರ ರೂಪಾಯಿ ಪರಿಹಾರ ನೀಡಬೇಕಿದೆ. ಏಕೆಂದರೆ ಆ ಕಂಪನಿಯ ಸಿಇಒನೇ ತನ್ನ ಕೈಕೆಳಗಿನ ಮಹಿಳಾ ಸಿಬ್ಬಂದಿಯೊಬ್ಬರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿರುವುದು ಕಂಪನಿಗೆ ನುಂಗಲಾರದ ತುತ್ತಾಗಿದೆ.

ಸದರಿ ಕಂಪನಿಯು ಭಾರತದಲ್ಲಿ 738 ಕೋಟಿ ರೂ. ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿದೆ ಎಂದು ತಡವಾಗಿ ತಿಳಿದುಬಂದಿದೆ. ಐಗೇಟ್‌ ಕಂಪನಿಯು ಅಮೆರಿಕದ ನಾಸ್ಡಾಕ್ ಷೇರುಪೇಟೆಗೆ ಈ ಮಾಹಿತಿಯನ್ನು ಒದಗಿಸಿದೆ.

ಸುಮಾರು 6 ವರ್ಷ ಕಾಲದ ಅಂದರೆ 2004 ರಿಂದ 2010 ರವರೆಗಿನ ಅವಧಿಗೆ 738 ಕೋಟಿ ರೂ. ತೆರಿಗೆ ಪಾವತಿ ಮಾಡುವಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸದರಿ ಕಂಪನಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಈ ನೋಟಿಸ್‌ ಕುರಿತು ತೆರಿಗೆ ಮೇಲ್ಮನವಿ ಪ್ರಾಧಿಕಾರದ ಮೊರೆ ಹೋಗಿದ್ದೇವೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಇಂತಹ ಕಂಪನಿಗಳು ಇನ್ನೂ ಎಷ್ಟಿವೆಯೋ? ಇವು ಕಟ್ಟಬೇಕಿರುವ ಬಾಕಿ ತೆರಿಗೆ ಮೊತ್ತ ಎಷ್ಟೋ? Vodafone, Nokia, Shell, WNS ಮುಂತಾದ ಕಂಪನಿಗಳು ಸಾವಿರಾರು ಕೋಟಿ ರೂ ತೆರಿಗೆ ಪಾವತಿಸಬೇಕಾಗಿವೆ.

ಇಲ್ಲಿ ಒಂದು ವಿಷಯ ಹೇಳಲೇಬೇಕು ಅಥವಾ ಕೇಳಲೇಬೇಕು. ಏನಪಾ ಅಂದರೆ Section 10A benefits of the Indian Income Tax Act ಅನುಸಾರ ಆದಾಯ ತೆರಿಗೆ ಇಲಾಖೆಯು ಸದರಿ ಕಂಪನಿಗಳ ಬೆನ್ನುಹತ್ತಿ, ಮೊದಲು ತೆರಿಗೆ ಪಾವತಿಸಿ ಅನ್ನುತ್ತಿದೆ. Its ok, Fine enough.

ಆದರೆ ವಿಶೇಷ ವಿತ್ತ ವಲಯಗಳು (Special Economic Zones -SEZ) ಎಂಬ ವಿಫಲ ಆರ್ಥಿಕ ನೀತಿಯನ್ನು ಕೇಳಿದ್ದೀರಲ್ಲಾ. ಇಂತಹ ಬಲಾಢ್ಯ ಕಂಪನಿಗಳನ್ನು ಉದ್ಧಾರ ಮಾಡಲು ಮತ್ತು ರೈತರ ಭೂಮಿಯನ್ನು ಕಸಿಯಲೆಂದೇ ಜಾರಿಗೆ ಬಂದ ಆರ್ಥಿಕ ನೀತಿ ಎಂಬುದು ಈ ನೀತಿ ವಿರುದ್ಧವಿರುವ ಪ್ರಮುಖ ಆರೋಪ.

ಗಮನಾರ್ಹವೆಂದರೆ ಇಂತಹ SEZ ನೀತಿಯಡಿಯೇ ಕಂಪನಿಗಳು ಈ ತೆರಿಗೆ ರಜೆ, ಸವಲತ್ತುಗಳನ್ನು ಕೇಳುತ್ತಿರುವುದು. ಅದರ ಪ್ರಕಾರ SEZನಲ್ಲಿ ಸ್ಥಾಪನೆಗೊಂಡ ಯಾವುದೇ ಕಂಪನಿಯಾಗಿರಲಿ ಅದು ಮೊದಲ 5 ವರ್ಷ ಕಾಲ ಯಾವುದೇ ರೀತಿಯ ತೆರಿಗೆಯನ್ನು ಕಟ್ಟುವಂತಿಲ್ಲ. ಮತ್ತು ಆ ನಂತರ ಬರೋಬ್ಬರಿ 10 ವರ್ಷಗಳ ಕಾಲ ಶೇ. 50ರಷ್ಟು ತೆರಿಗೆ ಕಟ್ಟಿದರೆ ಸಾಕು.

ಆಯ್ತು ಇದನ್ನು ಒಪ್ಕೊಳ್ತೀವಿ. ಆದರೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಈ ಸರಳ ತೆರಿಗೆ ನೀತಿ ಅರ್ಥವಾಗಿಲ್ಲವಾ? ಸುಖಾಸುಮ್ಮನೆ ಕಂಪನಿಗಳನ್ನು ಕೋರ್ಟಿಗೆ ಎಳೆಯುತ್ತಿವೆಯಾ? ಏನೋಪ್ಪಾ ದೊಡ್ಡೋರ ವಿಷ್ಯಾ ನಮಗ್ಯಾಕೆ?

English summary
iGate follows other MNCs- Face IT Dept tax evasion notice. After Vodafone, Nokia, Shell, WNS and Infosys, iGate is the latest to face tax issues in India with the US-based outsourcing firm having an "unsettled" tax demand of 132.7 million dollars (about Rs 738 crore) for assessment years 2004-05 to 2009-10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X