ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Amway ಸಿಇಒಗೆ 14 ದಿನ ನ್ಯಾಯಾಂಗ ಬಂಧನ

By Srinath
|
Google Oneindia Kannada News

Kerala Police arrest Amway India CEO William Scott Pinckney
ತಿರುವನಂತಪುರ, ಮೇ 28: ಹಣಕಾಸು ದುರ್ವ್ಯವಹಾರದ ಮೇಲೆ ನಿನ್ನೆ ಬಂಧನಕ್ಕೊಳಗಾಗಿದ್ದ ಭಾರತದ ಆಮ್ ವೇ ಮುಖ್ಯಸ್ಥ ವಿಲಿಯಂ ಸ್ಕಾಟ್ ಪಿಂಕ್ನೆ ಮತ್ತು ಇತರೆ ಇಬ್ಬರು ನಿರ್ದೇಶಕರನ್ನು ಇಂದು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೂವರ ವಿರುದ್ಧವೂ ಕೇರಳದಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಹಿಂದಿನ ಸುದ್ದಿ: ಭಾರತದ ಆಮ್ ವೇ ಮುಖ್ಯಸ್ಥನನ್ನು ಹಣಕಾಸು ದುರ್ವ್ಯವಹಾರದ ಮೇಲೆ ಬಂಧಿಸಲಾಗಿದೆ. ಜತೆಗೆ, ಕಂಪನಿಯ ಇನ್ನೂ ಇಬ್ಬರು ನಿರ್ದೇಶಕರನ್ನೂ ಬಂಧಿಸಲಾಗಿದೆ.

ಕೇರಳ ಪೊಲೀಸರು ಈ ಮೂವರನ್ನೂ ಬಂಧಿಸಿದ್ದಾರೆ. ವಿಲಿಯಂ ಸ್ಕಾಟ್ ಪಿಂಕ್ನೆ (ಸಿಇಒ), ಸಂಜಯ್ ಮಲ್ಹೋತ್ರಾ ಮತ್ತು ಅಂಜು (ನಿರ್ದೇಶಕರು) ಬಂಧಿತರು. Amway ಅಂದರೆ American Way. ಇದು ಗ್ರಾಹಕ ಉತ್ಪನ್ನಗಳ ಪ್ರಮುಖ ಮಾರಾಟ ಕಂಪನಿ. ಕೇರಳದಲ್ಲಿ ಆಮ್ ವೇ ದುರ್ವ್ಯವಹಾರ ವಿಪರೀತವಾಗಿದ್ದು ಪೊಲೀಸರು ಕಂಪನಿಯ ಆರ್ಥಿಕ ಚಟುವಟಿಕೆಗಳ ಮೇಲೆ ನಿಗಾ ವಹಿಸಿದ್ದರು.

ಆರ್ಥಿಕ ಅಪರಾಧಗಳ ವಿಭಾಗದ ನೆರವಿನಿಂದ ಕೊಳಿಕ್ಕೋಡ್ ಪೊಲೀಸರು ಕಳೆದ ವರ್ಷವೂ ಹಣಕಾಸು ಅಕ್ರಮ ಆರೋಪದ ಮೇಲೆ ರಾಜ್ಯ ಮಟ್ಟದ ವಿತರಕರೊಬ್ಬರನ್ನು (ಚೆನ್ನೈನ ರಾಜಮೋಹನ್) ಬಂಧಿಸಿದ್ದರು. Prize Chits and Money Circulation Schemes (Banning) Act ಅನುಸಾರ ಅವರನ್ನು ಬಂಧಿಸಲಾಗಿತ್ತು.

English summary
Financial Scam - Kerala Police arrest Amway India CEO William Scott Pinckney along with company directors Sanjay Malhotra and Anju.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X