ಆನ್ ಲೈನ್: ಆಧಾರ್ ಕಾರ್ಡ್ ಮಾಹಿತಿ ಬದಲಾವಣೆ ಹೇಗೆ

Posted By:
Subscribe to Oneindia Kannada

ತುಮಕೂರು, ಮೇ 27: ಆಧಾರ್ ಕಾರ್ಡ್ ಗುರುತಿನ ಸಂಖ್ಯೆಗೆ ಈಗ ಎಲ್ಲಿಲ್ಲದ ಮಹತ್ವ ಬಂದಿದೆ. ಅದು ಅಡುಗೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಧನ ಪಡೆಯುವುದಕ್ಕಷ್ಟೇ ಸೀಮಿತವಾಗಿಲ್ಲ. ಶಾಲಾ ವಿದ್ಯಾರ್ಥಿಗೂ ಬೇಕಾಗುತ್ತದೆ. ಸ್ಕಾಲರ್ ಷಿಪ್ ಮತ್ತೊಂದು ಮಗದೊಂದು ಎಂದು ಸರಕಾರದಿಂದ ಧನ ಸಹಾಯ ಪಡೆಯಬೇಕಿದ್ದರೆ, ಅದು ನೆರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಬೇಕಿದ್ದರೆ, ಸರಿಯಾದ ಆಧಾರ್ ಕಾರ್ಡ್ ಗುರುತಿನ ಸಂಖ್ಯೆ ಅತ್ಯಗತ್ಯ.

ಇತ್ತೀಚೆಗೆ ರಾಜ್ಯದಲ್ಲಿ ನೂರಾರು ಕಾಲೇಜು ವಿದ್ಯಾರ್ಥಿಗಳು ಸರಿಯಾದ ಆಧಾರ್ ಕಾರ್ಡ್ ಗುರುತಿನ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರ ನೀಡದೆ ಸ್ಕಾಲರ್ ಷಿಪ್ ಪಡೆಯುವುದರಿಂದ ವಂಚಿತರಾಗಿದ್ದಾರೆ. ಹಾಗಾಗಿ ಮೊದಲು ಆಧಾರ್ ಕಾರ್ಡ್ ಮತ್ತು ಒಂದು ಬ್ಯಾಂಕ್ ಖಾತೆ ತೆರೆದಿಟ್ಟುಕೊಳ್ಳಿ.

ಈಗಾಗಲೇ ಆಧಾರ್ ಕಾರ್ಡ್ ಗುರುತಿನ ಚೀಟಿ ಪಡೆದಿರುವವರು ಅದರಲ್ಲೊಂದಿಷ್ಟು ಬದಲಾವಣೆಗಳನ್ನು ಮಾಡಬಯಸುವುದು ಖಚಿತ. ಏಕೆಂದರೆ ಹರಿಬರಿನಲ್ಲಿ ಸಧ್ಯ ಕಾರ್ಡ್ ಸಿಕ್ಕಿದದರೆ ಸಾಕಪ್ಪಾ ಎಂದು ಯಾವುದೋ ಒಂದು ತಪ್ಪು ಮಾಹಿತಿ ನೀಡುತ್ತಾರೆ. ಹಾಗಾಗಿ ಅಂತಹವರು ಸ್ಪಷ್ಟ/ನಿಖರ ಮಾಹಿತಿ ಒದಗಿಸಿ ತಮ್ಮ ತಮ್ಮ ಆಧಾರ್ ಕಾರ್ಡ್ ಅನ್ನು ಅಪ್ ಡೇಟ್ ಮಾಡಿಕೊಳ್ಳಬಹುದು.

ಕಾರ್ಡ್ ಮಾಡಿಸುವುದಕ್ಕೇ ಒಂದೆರಡು ದಿನ ರಜೆ ಹಾಕಿ ಓಡಾಡಿದ್ದೆವು. ಈಗ ಮತ್ತೆ ಯಾವೋನು ಹೋಗಿ ಸ್ವಾಮಿ ಎಂದು ಅಸಡ್ಡೆ ತೋರಬೇಡಿ. ರಜೆ ಪಡೆಯದೇ ಕಚೇರಿಯಲ್ಲೇ ಇಂಟರ್ ನೆಟ್ ಸೌಲಭ್ಯವಿದ್ದರೆ ಈ ಬದಲಾವಣೆಗಳನ್ನು ಕೇವಲ ಐದೇ ನಿಮಿಷದಲ್ಲಿ ಮಾಡಿಮುಗಿಸಬಹುದು. ವಿವರ ಇಲ್ಲಿದೆ.

Onlineನಲ್ಲಿ ಆಧಾರ್ ಮಾಹಿತಿ ಬದಲಾವಣೆ

Onlineನಲ್ಲಿ ಆಧಾರ್ ಮಾಹಿತಿ ಬದಲಾವಣೆ

ಮೊಬೈಲ್ ನಂಬರ್ ಚೇಂಜ್ ಮಾಡಿಸಿಕೊಳ್ಳುವುದು/ ವಿಳಾಸ ಬದಲಾಯಿಸಿಕೊಳ್ಳುವುದು/ ಜನ್ಮ ದಿನಾಂಕ ಸರಿಪಡಿಸಿಕೊಳ್ಳುವುದು/ಅಥವಾ ತಪ್ಪಾಗಿ ಮುದ್ರಿತವಾಗಿರುವ ಪುರುಷ/ಗಂಡು ಕಾಲಂ ಅನ್ನು ಸರಿತಿದ್ದಿಕೊಳ್ಳಬಹುದು. ಇದನ್ನು ಅಂಚೆ ಮೂಲಕ ಅಥವಾ ಖುದ್ದಾಗಿ ಆಧಾರ್ ವಿತರಣೆ ಕೇಂದ್ರಕ್ಕೆ ಹೋಗಿ ಮಾಡಿಸಿಕೊಳ್ಳಬಹುದು. ಆದರೆ ಇಲ್ಲಿ ಹೇಳಹೊರಟಿರುವುದು ಆನ್ ಲೈನ್ ಸೇವೆ ಮೂಲಕ. ಹಾಗಾಗಿ ವಿವರ ಇಲ್ಲಿದೆ.

Onlineನಲ್ಲಿ ಆಧಾರ್ ಕಾರ್ಡ್ ಮಾಹಿತಿ ಬದಲಾವಣೆ

Onlineನಲ್ಲಿ ಆಧಾರ್ ಕಾರ್ಡ್ ಮಾಹಿತಿ ಬದಲಾವಣೆ

ಮೂರು ಮುಖ್ಯ ಹಂತಗಳು ಹೀಗಿವೆ. ಮೊದಲು UIDAI Aadhaar Card ವೆಬ್ ಸೈಟನ್ನು ತೆರೆದಿಟ್ಟುಕೊಳ್ಳಿ.

Onlineನಲ್ಲಿ ಆಧಾರ್ ಕಾರ್ಡ್ ಮಾಹಿತಿ ಬದಲಾವಣೆ

Onlineನಲ್ಲಿ ಆಧಾರ್ ಕಾರ್ಡ್ ಮಾಹಿತಿ ಬದಲಾವಣೆ

ನಿಮ್ಮ ಮೊಬೈಲ್ ನಂಬರ್ ದಾಖಲಿಸಿ, PIN ನಂಬರ್ ಪಡೆದುಕೊಳ್ಳಿ. ಮುಂದೆ ಸದರಿ ಆನ್ ಲೈನ್ ಅರ್ಜಿಯಲ್ಲಿ ಮಾಹಿತಿಯನ್ನು ದಾಖಲಿಸಲು ಪಾಸ್ ವರ್ಡ್ ಅಗತ್ಯವಿರುತ್ತದೆ. ಅದು ನೀವು ನೀಡುವ ಮೊಬೈಲ್ ಗೆ SMS ರೂಪದಲ್ಲಿ ಕೆಲವೇ ಕ್ಷಣಗಳಲ್ಲಿ ಬರುತ್ತದೆ. ಹಾಗಾಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಸರಿಯಾಗಿ ನಮೂದಿಸಿರಿ.

Onlineನಲ್ಲಿ ಆಧಾರ್ ಕಾರ್ಡ್ ಮಾಹಿತಿ ಬದಲಾವಣೆ

Onlineನಲ್ಲಿ ಆಧಾರ್ ಕಾರ್ಡ್ ಮಾಹಿತಿ ಬದಲಾವಣೆ

ನಂತರ ಅಗತ್ಯ ಬದಲಾವಣೆಗಳನ್ನು ದಾಖಲಿಸಿಕೊಳ್ಳಿ. ಆದರೆ ಹಾಗೆ ಮಾಹಿತಿಯನ್ನು ಮಾರ್ಪಾಡು ಮಾಡಲು ಪೂರಕ ದಾಖಲೆಗಳು ಅತ್ಯವಶ್ಯಕ. ಅದನ್ನು ಮೊದಲೇ ನಿಮ್ಮ ಕಂಪ್ಯೂಟರಿನಲ್ಲಿ ಫೋಟೋ (JPG) ರೂಪದಲ್ಲಿ Save ಮಾಡಿಟ್ಟುಕೊಂಡಿರಿ. ಆ ಫೋಟೋ ರೂಪದ ದಾಖಲೆಯನ್ನು upload ಮಾಡಿ, ಬದಲಾವಣೆ ಕೋರಿ, ಅರ್ಜಿಯನ್ನು Submit ಮಾಡಿ. ಅಲ್ಲಿಗೆ ನಿಮ್ಮ ಕೆಸಲ ಮುಗಿಯುತ್ತದೆ.

Onlineನಲ್ಲಿ ಆಧಾರ್ ಕಾರ್ಡ್ ಮಾಹಿತಿ ಬದಲಾವಣೆ

Onlineನಲ್ಲಿ ಆಧಾರ್ ಕಾರ್ಡ್ ಮಾಹಿತಿ ಬದಲಾವಣೆ

ಮುಂದಿನದು Aadhaar Card ವಿತರಕರ ಕೆಲಸ. ಅವರು ನಿಮ್ಮ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ಮಾರ್ಪಾಡುಗಳನ್ನು ಮಾಡಿ, ಹೊಸ Aadhaar Card ಅನ್ನು ನಿಮ್ಮ ಮನೆಯ ಬಾಗಿಲಿಗೆ ತಲುಪಿಸುತ್ತಾರೆ.

Onlineನಲ್ಲಿ ಆಧಾರ್ ಕಾರ್ಡ್ ಮಾಹಿತಿ ಬದಲಾವಣೆ

Onlineನಲ್ಲಿ ಆಧಾರ್ ಕಾರ್ಡ್ ಮಾಹಿತಿ ಬದಲಾವಣೆ

Aadhaar Card ವೆಬ್ ಸೈಟ್ ವಿಳಾಸ ಹೀಗಿದೆ. https://portal.uidai.gov.in/ResidentPortal/statusLink

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Aadhaar card is almost becoming mandatory in India. Indian citizens must have this card number to get any government financial assistance. It's possible that you have received your Aadhaar card, but now wish to make changes in the same, as your address or mobile number has undergone a change. You can update information online or do so by sending certain documents by post. Here is the procedure.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ