ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ದುಲ್ ಕಲಾಂನಷ್ಟೇ ಬುದ್ದಿವಂತ ರೈತ ಕೃಷ್ಣಪ್ಪ

By ಹಳ್ಳಿಹುಡ್ಗ
|
Google Oneindia Kannada News

ಅಂತರಿಕ್ಷದಲ್ಲೂ ಸೌರ ವಿದ್ಯುತ್ ಬಳಕೆ ಮಾಡಬಹುದಾದ ಸಾಧ್ಯತೆಗಳ ಬಗ್ಗೆ ಅಬ್ದುಲ್ ಕಲಾಂ ಅವರು ಏನು ಹೇಳಿದ್ರು ಅನ್ನೋದನ್ನ ಮೊದಲು ಓದಿ ಆನಂತರ ದೊಡ್ಡಬಳ್ಳಾಪುರದ ವಿಷ್ಯಕ್ಕೆ ಬರೋಣ. ಕಲಾಂ ಆವತ್ತು ಹೇಳಿದ್ದು ಏನಂದ್ರೆ..

WASHINGTON (PTI): Former Indian President APJ Abdul Kalam and US' prestigious National Space Society are all set to announce their ambitious joint initiative to tap solar power in space.

ಅಂತರಿಕ್ಷದಲ್ಲಿ ವಿದ್ಯುತ್ ಸಮಸ್ಯೆಗೆ ಕಲಾಂ ಒಂದು ಸಲ್ಯೂಷನ್ ಕೊಟ್ರು. ಆದ್ರೆ, ಕರ್ನಾಟಕದ ಸಮಸ್ಯೆ ಬಗೆ ಹರಿಸುವುದು ಹೇಗೆ? ಈ ಬಿಜೆಪಿನೋರು ಮತ್ತು ಈಗ್ ತಾನೆ ವಾಪಸ್ ಬಂದಿರೋ ಕಾಂಗ್ರೆಸ್ ನೋರು ನಮಗೆ ಸಮರ್ಪಕವಾಗಿ ಕರೆಂಟ್ ಕೊಡಲ್ಲ ಅಂತ ನೀವಿನ್ನು ಕೊರಗೋ ಹಾಗಿಲ್ಲ. ಕೊರಗುವುದು ಮುಗಿಯದ ರಗಳೆ. ಅದು ಮುಗಿಸಬಹುದಾದ ರಗಳೆ. ಫ್ರೀ ಆಗಿ ಸಿಗ್ತಾ ಇರೋ ವಿದ್ಯುತ್ತನ್ನ ಬಳಸಿಕೊಳ್ಳೋ ವಿಧಾನ ನಮಗೆ ಗೊತ್ತಾಗ್ಬೇಕು ಅಷ್ಟೇ.

Success story of Karnataka farmer

ನಿಮಗಿನ್ನೂ ಗೊತ್ತಿಲ್ಲ. ಇಲ್ಲೊಬ್ಬ ರೈತ ಸೌರ ಶಕ್ತಿ ಬಳಸಿಕೊಂಡು ಯಶಸ್ವಿಯಾಗಿ ಬೆಳೆ ಬೆಳೀತಿದ್ದಾನೆ. ಕರೆಂಟಿಲ್ಲ ಅಂತ ಕೈ ಕಟ್ಟಿ ಕೂರೋ ರೈತರಿಗೆಲ್ಲಾ ರೋಲ್ ಮಾಡಲ್ ಆಗ್ತಾನೆ. ನಿತ್ಯವೂ ಪವರ್ ಸದಾ ನೀರು. ಇದಕ್ಕೆ 24/7 ಅನ್ತಾರೆ. ಇದು ಕೃಷ್ಣಪ್ಪ ಅನ್ನೋ ರೈತನ success story.

ನಮ್ಮ ರಾಜ್ಯದ ರೈತರಿಗೆ ನೀರಿನ ಅಭಾವ. ನೀರಿದ್ರೂ, ಅದನ್ನ ಹೊಲಗದ್ದೆಗೆ ಹರಿಸೋಕೆ ಕರೆಂಟ್‍ನದ್ದು ದೊಡ್ಡ ಸಮಸ್ಯೆ. ಸರ್ಕಾರಗಳು ನೀಡೋ ಪ್ರಣಾಳಿಕೆಗಳಿಗೆ ತಕ್ಕಂತೆ ಕರೆಂಟ್ ಕೊಡಲ್ಲ. ಈ ಸಮಸ್ಯೆಗೆ ಅಂಜದ ದೊಡ್ಡಬಳ್ಳಾಪುರ ರಸ್ತೆಯ ಮದಗೊಂಡಹಳ್ಳಿಯ ರೈತ ಕೃಷ್ಣಪ್ಪ, ಸೋಲಾರ್ ಪವರ್ ಬಳಸೋಕೆ ಶುರುಮಾಡಿದ್ರು.

ಆಂಪೋಲ್ಟ್ ಸೋಲಾರ್ ಸಲ್ಯೂಷನ್‍ನ ಹೊಸ ವ್ಯವಸ್ಥೆಯನ್ನ ಅಳವಡಿಸಿಕೊಂಡಿರೋದ್ರಿಂದ ಅವರಿಗೆ ನಿತ್ಯವೂ ಆರರಿಂದ ಎಂಟು ಗಂಟೆ ನೀರು ಸಿಗ್ತಿದೆ. ಒಂದು ವರ್ಷದ ಹಿಂದೆಯೇ ಈ ಸೋಲಾರ್ ವಿದ್ಯುತ್ ವ್ಯವಸ್ಥೆಯನ್ನ ಬಳಸಿಕೊಳ್ಳೋಕೆ ಶುರುಮಾಡಿದ ಕೃಷ್ಣಪ್ಪ, ಈಗಾಗ್ಲೇ ಎರಡು ಬೆಳೆ ಜೋಳವನ್ನು ಯಶಸ್ವಿಯಾಗಿ ಬೆಳೆದಿದ್ದಾರೆ.

ಸೌರ ಶಕ್ತಿಯನ್ನ ಶೇಖರಿಸಿಟ್ಟು ಬಳಸಿದ್ರೆ ಅದ್ರಿಂದ ಕಡಿಮೆ ವಿದ್ಯುತ್ ಸಿಗುತ್ತೆ. ಆದ್ರೆ ಈ ಸೋಲಾರ್ ವಿದ್ಯುತ್ ವ್ಯವಸ್ಥೆ ಹಾಗಲ್ಲ. ನೇರವಾಗಿ ಸೂರ್ಯನ ಬೆಳಕು ಸಿಗ್ತಿದ್ದಂತೆ ಅದನ್ನ ವಿದ್ಯುತ್ ಆಗಿ ಆಂಪೋಲ್ಟ್ ಸೋಲಾರ್ ಸಲ್ಯೂಷನ್ ಅವರೇ ಡಿಸೈನ್ ಮಾಡಿರೋ ಇನ್ವರ್ಟರ್ ಪರಿವರ್ತಿಸುತ್ತೆ. ಬೆಳಕು ಹೆಚ್ಚಾದಷ್ಟು ವಿದ್ಯುತ್ ಕೂಡ ಹೆಚ್ಚು ಹೆಚ್ಚು ಸಿಗುತ್ತೆ.

ಕಳೆದ ಒಂದು ವರ್ಷದ ಹಿಂದೆಯೇ ಇದನ್ನ ಅಳವಡಿಸಲಾಗಿತ್ತು. ಇದು ಆಂಪೋಲ್ಟ್ ಸೋಲಾರ್ ಸಲ್ಯೂಷನ್‍ನ ನೂತನ ಪ್ರಯತ್ನ. ಹತ್ತು ಎಚ್‍ಪಿ ಮೋಟಾರ್ ಇದ್ರೆ ಈ ಸೋಲಾರ್ ವ್ಯವಸ್ಥೆಯಿಂದ 6 ರಿಂದ 7 ಎಕರೆಗೆ ನೀರು ಹರಿಸಬಹುದು. ನೀರು ಖಾಲಿಯಾದ್ರೆ ತಂತಾನೇ ಆಫ್ ಆಗುತ್ತೆ. ಸುಮಾರು ನಾಲ್ಕು ಕಿಲೋ ಮೀಟರ್ ದೂರದಲ್ಲಿ ಮೋಟರ್ ಇದ್ರೂ ನೀರು ಹರಿಸಬಹುದು.

ಇದ್ರ ಸಂಪೂರ್ಣ ವೆಚ್ಚ ಏಳೂವರೆ ಲಕ್ಷ ರೂಪಾಯಿ. ಮತ್ತೊಂದು ಐಡಿಯಾ ಅಂದ್ರೆ ಅಕ್ಕಪಕ್ಕದ ಜಮೀನಿರೋ ರೈತರು ಒಟ್ಟಿಗೆ ಇದನ್ನ ಅಳವಡಿಸಿಕೊಂಡ್ರೆ ತುಂಬಾ ಕಡಿಮೆ ವೆಚ್ಚ ಅಂತ ಅನಿಸುತ್ತೆ. ಜೊತೆಗೆ ದಿನಪೂರ್ತಿ ನೀರು ಸಿಗೋದ್ರಿಂದ ಸಮವಾಗಿ ಹರಿಸಬಹುದು. ರೈತರಿಗೆ ವರದಾನವಾಗಿರೋ ಸೋಲಾರ್ ಶಕ್ತಿಯನ್ನ ಸಮರ್ಪಕವಾಗಿ ನೀವೂ ಬಳಸಿಕೊಳ್ಳಬಹುದು, ಮನಸ್ಸು ಮಾಡಿದ್ರೆ.

ಕರೆಂಟ್ ಕೊಡೋ ಸರ್ಕಾರವನ್ನ ನಂಬಿ ಹಾಳಾಗುವುದರ ಬದಲು ಈ ಸೋಲಾರ್ ವ್ಯವಸ್ಥೆಯನ್ನ ಅಳವಡಿಸಿಕೊಳ್ಳಿ. ಆಂಪೋಲ್ಟ್ ಸೋಲಾರ್ ಸಲ್ಯೂಷನ್ ಅವ್ರ ಕಚೇರಿ ಬೆಂಗಳೂರಿನ ಸುಂಕದಕಟ್ಟೆಯಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ವಿಸಿಟ್ ಮಾಡಬಹುದು.

ನೀವು ರೈತರಲ್ಲದಿದ್ರೆ, ಹೊಲ ಗದ್ದೆ ಇಲ್ಲದಿದ್ರೆ, 30x40 ಸೈಟೂ ಇಲ್ಲದಿದ್ರೆ ಯಾವ ವೆಬ್ ಸೈಟನ್ನು ವಿಸಿಟ್ ಮಾಡಿ ಏನು ಪ್ರಯೋಜನ ಅಂತ ಅನ್ಕೊಬಹುದು. ಇಷ್ಟರ ಮೇಲೆ ನಿಮ್ಮಿಷ್ಟ.

ಇದನ್ನೂ ಓದಿ : Renewable Electricity Nearly Doubles Under Obama: 'I Think They're The Future. They're Worth Fighting For'.

English summary
Krishnappa, a farmer from Doddaballapur district did not sit quite when Karnataka failed to provide adequate power. He installed solar power plant in his field and now tasted success. Abdul Kalam too has suggested use of solar power. Now, don't you think Krishnappa is as intelligent as Kalam is?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X