ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿತ್ತಲ್ ಮನೆ ಮಾರಾಟಕ್ಕಿದೆ, ನಿಮಗೆ ಬೇಕಾ?

By Srinath
|
Google Oneindia Kannada News

lakshmi-mittal-london-home-up-for-sale-credit-crunch
ಲಂಡನ್, ಮೇ 27: ಹೆಸರಿಗೆ ತಕ್ಕಂತೆ ಲಕ್ಷ್ಮೀಪುತ್ರ ಎಂದೇ ಜನಜನಿತರಾಗಿರುವ ಭಾರತದ ಲಕ್ಷ್ಮೀ ಎನ್ ಮಿತ್ತಲ್ ಅವರು ಹಣಕಾಸು ಬಾಧೆಯಿಂದ ಧರಾಶಾಯಿಯಾಗಿದ್ದಾರೆ. ಅಕ್ಷರಶಃ ಅವರು ತಮ್ಮ ಮನೆಯನ್ನು ಮಾರಿಕೊಳ್ಳುವಂತಹ ದುಃಸ್ಥಿತಿಗೆ ಬಂದಿದ್ದಾರೆ.

ಅದೂ ಎಂಥಾ ಮನೆ ಅಂತೀರಿ ವೈಭವೋಪೇತ ಬಂಗ್ಲೆ. 2008ರಲ್ಲಿ ಅತಿ ದುಬಾರಿ ಬೆಲೆಗೆ ಇದನ್ನು ಅವರು ಖರೀದಿಸಿದ್ದರು. ಕೆನ್ಸಿಂಗ್ ಟನ್ ಪ್ರದೇಶದಲ್ಲಿರುವ ಪ್ಯಾಲೆಸ್ ಗ್ರೀನ್ ಬಂಗಲೆಯನ್ನು 2008ರಲ್ಲಿ 117 ದಶಲಕ್ಷ ಪೌಂಡಿಗೆ ಖರೀದಿಸಿದ್ದರು.

ಆದರೆ Sunday Times ಪತ್ರಿಕಾ ವರದಿ ಪ್ರಕಾರ 110 ದಶಲಕ್ಷ ಪೌಂಡಿಗೆ ಮಾರಾಟವಾಗುವ ಸಾಧ್ಯತೆಯಿದ್ದು, ಲಕ್ಷ್ಮೀ ಎನ್ ಮಿತ್ತಲ್ ನಷ್ಟ ಅನುಭವಿಸುವುದು ಖಚಿತವಾಗಿದೆ. 12 ಶಯನಕೋಣೆಗಳುಳ್ಳ ಸುವಿಶಾಲ ಬಂಗಲೆಯನ್ನು ಲಕ್ಷ್ಮೀ ಎನ್ ಮಿತ್ತಲ್ ಅವರು ತಮ್ಮ ಪುತ್ರ ಆದಿತ್ಯನಿಗಾಗಿ ಖರೀದಿಸಿದ್ದರು. ಆದಿತ್ಯ ಅವರು ArcelorMittal ಉಕ್ಕು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದಾರೆ.

ಇಸ್ರೇಲ್- ಅಮೆರಿಕದ ಉದ್ಯಮಿ ಅವರಿಂದ ಆಗ ಮಾರಾಟವಾಗಿತ್ತು. 14,736 ಚದರಡಿ ವಿಸ್ತಾರದ ಮೊದಲಂತಸ್ತಿನಲ್ಲಿ ಶಯ್ಯಕೋಣೆಗಳೇ ತುಂಬಿವೆ. ಈ ಬಂಗಲೆಯಲ್ಲಿ ಈಜುಕೊಳವೇ ಇಲ್ಲ. ಆದರೆ ಕುತೂಹಲದ ಸಂಗತಿಯೆಂದರೆ ಆದಿತ್ಯ ಅವರ ಕುಟುಂಬ ಈ ಮನೆಯಲ್ಲಿ ವಾಸ್ತ್ಯವ್ಯ ಹೂಡಲೇ ಇಲ್ಲ.

ಲಕ್ಷ್ಮೀ ಎನ್ ಮಿತ್ತಲ್ ಅವರು ಸಮೀಪದಲ್ಲೇ ಇರುವ ಲಂಡನ್ನಿನ ಕೋಟ್ಯಧಿಪತಿಗಳು ನೆಲೆಸುವ Kensington Palace Gardenನಲ್ಲಿ ವಾಸವಾಗಿದ್ದಾರೆ.

ಸ್ಟೀಲ್ ಬೆಲೆ ಬಿದ್ದುಹೋಗಿರುವುದು ಮತ್ತು ಚೀನಾದಿಂದ ಉಕ್ಕು ಬೇಡಿಕೆ ಕಡಿಮೆಯಾಗಿರುವುದು ಲಕ್ಷ್ಮೀ ಎನ್ ಮಿತ್ತಲ್ ಅವರ ಹಣಕಾಸು ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದೆ. ಹಾಗಾಗಿ ಮನೆ ಮಾರಿಕೊಳ್ಳಲು ಮುಂದಾಗಿದ್ದಾರೆ.

English summary
Thanks to Credit crunch Lakshmi Mittal London home up for sale. As a result of the credit crunch and a fall in demand for steel from China, Mittal's fortunes took a hit. Rsult: His most expensive home in Britain has put up for sale.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X