ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷ್ಮೀ ಮಿತ್ತಲ್ ಕೊಲೆಗೆ ಫ್ರಾನ್ಸ್ ಆಟ

|
Google Oneindia Kannada News

Kill Mittal
ಲಂಡನ್, ಮೇ 25 : ಭಾರತೀಯ ಮೂಲದ ಯಶಸ್ವಿ ಉದ್ಯಮಿ ಲಕ್ಷ್ಮೀ ಮಿತ್ತಲ್ ಅವರಿಗೆ ಫ್ರಾನ್ಸ್ ನಲ್ಲಿ ಭಾರೀ ಅವಮಾನ ಮಾಡಲಾಗಿದೆ. ಕಿಲ್ ಮಿತ್ತಲ್ ಎಂಬ ವಿಡಿಯೋ ಗೇಮ್ ನಿರ್ಮಿಸಿ ಬಿಡುಗಡೆ ಮಾಡಲಾಗಿದೆ. ಸದ್ಯ ಪರದೆಯ ಮೂಲಕ ಮಿತ್ತಲ್ ಅವರನ್ನು ಕೊಲ್ಲಲು ಫ್ರಾನ್ಸ್ ಯುವಕರು ಪೈಪೋಟಿ ನಡೆಸಿದ್ದಾರೆ.

ನಮ್ಮ ಎದುರಿಗಿರುವ ಶತ್ರುವನ್ನು ಮುಟ್ಟಲೂ ಆಗದಿದ್ದಾಗ, ನಾವು ಆತನ ಪೋಟೋವನ್ನು ಸುಟ್ಟುಹಾಕಿ ವಿರೋಧ ವ್ಯಕ್ತಪಡಿಸುತ್ತೇವೆ. ಇದೇ ತಂತ್ರವನ್ನು ಫ್ರಾನ್ಸ್ ಸದ್ಯ ಅನುಸರಿಸಿದ್ದು, ಪರದೆಯ ಮೂಲಕ ಮಿತ್ತಲ್ ಅವರನ್ನು ಕೊಂದು ಸೇಡು ತೀರಿಸಿಕೊಳ್ಳುತ್ತಿದ್ದಾರೆ.

ಕಿಲ್ ಮಿತ್ತಲ್ ಎಂಬ ವಿಡಿಯೊ ಗೇಮ್ ಗೆ ಭಾರಿ ಜನಪ್ರಿಯತೆ ಜೊತೆಗೆ ವಿರೋಧವೂ ವ್ಯಕ್ತವಾಗಿದೆ. ಗೇಮ್‌ನ ನಿರ್ಮಿಸಿದ ಅಲೆಕ್ಸಾಂಡರ್ ಗ್ರಿಲ್ಲೆಟ್ಟಾ. ಇದು ಯುವಕರನ್ನು ಪ್ರಚೋದಿಸುವ ತಂತ್ರವಲ್ಲ. ಇದೊಂದು ಕಿಲ್ ಮಿತ್ತಲ್ ವಿಡಿಯೊ ಗೇಮ್‌ನಲ್ಲಿ ರಕ್ತಸಿಕ್ತ ಹಿಂಸಾಚಾರವೇನೂ ಇಲ್ಲ. ಇದು ಕೇವಲ ಆಟವಷ್ಟೇ ಎಂದು ತಮ್ಮ ಘನ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

ಮಿತ್ತಲ್ ಮೇಲೆ ಕೋಪವೇಕೆ : ಫ್ರಾನ್ಸ್ ನಲ್ಲಿ ಉಕ್ಕು ಕಂಪನಿಗಳನ್ನು ಸ್ಥಾಪಿಸಿ ಮಿತ್ತಲ್ ಸುಮಾರು 20 ಸಾವಿರ ಜನರಿಗೆ ಉದ್ಯೋಗ ನೀಡಿದ್ದಾರೆ. ಆದರೆ, ಕೆಲವು ದಿನಗಳ ಹಿಂದೆ ದಕ್ಷಿಣ ಫ್ರಾನ್ಸ್‌ನ ಫ್ಲೊರೆಂಜ್‌ನಲ್ಲಿರುವ ಅವರ ಕಬ್ಬಿಣ ಅದಿರು ಕರಗಿಸುವ ಘಟಕವೊಂದು ಮುಚ್ಚಿಹೋಗಿದೆ.

ಇದರ ಜೊತೆಗೆ ಡನ್‌ಕಿರ್ಕ್‌ನಲ್ಲಿರುವ ಘಟಕವೊಂದರ ಪುನಶ್ಚೇತನ ಯೋಜನೆಯನ್ನು ಮಿತ್ತಲ್ ಕಂಪನಿ ಮುಂದೂಡಿದೆ. ಇದರಿಂದಾಗಿ ಸಾವಿರಾರು ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗೆ ನಿರುದ್ಯೋಗಿಗಳಾದ ಕಾರ್ಮಿಕರ ಅಭಿಪ್ರಾಯ ಸಂಗ್ರಹಿಸಿ ಅಲೆಕ್ಸಾಂಡರ್ ವಿಡಿಯೋ ಗೇಮ್ ಸಿದ್ದ ಪಡಿಸಿ ತನ್ನ ಜೇಬು ತುಂಬಿಸಿಕೊಂಡಿದ್ದಾನೆ.

ಆಟದಲ್ಲಿ ಏನಿದೆ : ವಿಡಿಯೋ ಗೇಮ್ ನಲ್ಲಿ ಲಕ್ಷ್ಮಿ ಮಿತ್ತಲ್ ಅವರರನ್ನು ರೊಬೊಟ್ ಕಾರ್ಟೂನ್ ಮಾದರಿಯಲ್ಲಿ ಚಿತ್ರಿಸಲಾಗಿದೆ. ಮಿತ್ತಲ್ ಮತ್ತು ಪೊಲೀಸರತ್ತ ಆಟವಾಡುವ ಜನರು ಬ್ಯಾರಲ್‌ಗಳನ್ನು ಹಾಗೂ ಕೋಲಿನಂತಹ ವಸ್ತುಗಳನ್ನು ಎಸೆದು ಕಂಪನಿ ಪ್ರಾರಂಭಿಸುವಂತೆ ಒತ್ತಾಯಿಸಬಹುದು.

ಫ್ರಾನ್ಸ್ ನ ಈ ಕಾರ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ತಮ್ಮ ದೇಶದ ಜನರಿಗೆ ಉದ್ಯೋಗ ನೀಡಿದ್ದಾರೆ ಎಂಬ ಕೃತಜ್ಞತೆ ಮರೆತ ಫ್ರಾನ್ಸ್ ಕಿಲ್ ಮಿತ್ತಲ್ ಎಂಬ ಹೆಸರಿಟ್ಟು, ಆಟವಾಡುತ್ತಿದೆ. ದೇಶದ ಇಂತಹ ಕೆಲಸಕ್ಕೆ ಏನು ಹೇಳಬೇಕೋ ತಿಳಿಯದು.

English summary
A French game developer Alexandre Grilletta has done a free online game called Kill Mittal. which targets Arcelor Mittal boss Laxmi Mittal. in game players fighting with police and a robot version of Lakshmi Mittal to keep a factory open. because of closure of steel blast furnaces owned by Mittal. Alexandre Grilletta has done this game.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X