ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಗೇಟ್: ಫಣೀಶ್ ಮೂರ್ತಿ- ರೋಜ್ ಗೆ ಹೆಣ್ಣುಮಗು

By Srinath
|
Google Oneindia Kannada News

Ex Infy iGate CEO Phaneesh Murthy Araceli Roiz having baby girl
ಕ್ಯಾಲಿಫೋರ್ನಿಯಾ, ಮೇ 25: ಮೊದಲಿಗೆ ತಾನು ಕೆಲಸ ಮಾಡುತ್ತಿರುವ ಕಂಪನಿಗಗಾಗಲಿ (ಐಗೇಟ್) ಅಥವಾ ಯಾವುದೇ ಮಹಿಳಾ ಉದ್ಯೋಗಿಗೆ ಆಗಲಿ ಯಾವುದೇ ರೀತಿಯ ಮೋಸ ಮಾಡಿಲ್ಲ ಎಂದು ಐಗೇಟ್ ಕಂಪನಿಯ ಸಿಇಒ ಆಗಿದ್ದ ಫಣೀಶ್ ಮೂರ್ತಿ ಕಳ್ಳಾಟ ಆಡಿದ್ದರು. ಆದರೆ ಕಾಲಾಂತರದಲ್ಲಿ ಹೌದು, ತನ್ನ ಅಧೀನದಲ್ಲಿದ್ದ ಮಹಿಳಾ ಉದ್ಯೋಗಿಯ ಜತೆ ಸಂಬಂಧ ಹೊಂದಿದ್ದೆ. ಮತ್ತು ಅದರ ಬಗ್ಗೆ ಮೊನ್ನೆ ಮೊನ್ನೆಯಷ್ಟೇ ಕಂಪನಿ ಮೇಲಾಧಿಕಾರಿಗಳಿಗೆ ಮಾತಿನಲ್ಲಿ ಹೇಳಿದ್ದೆ ಎಂದು ಜಾರಿಕೊಳ್ಳಲು ಪ್ರಯತ್ನಿಸಿದರು.

ಆದರೆ ಇದೀಗ ಮಾಧ್ಯಮ ವರದಿಗಳ ಪ್ರಕಾರ ಪರಿಸ್ಥಿತಿಯಿಂದ ಎಸ್ಕೇಪ್ ಆಗಲು ಸಾಧ್ಯವಿಲ್ಲದಂತೆ 49 ವರ್ಷದ ಸ್ತ್ರೀಲೋಲ ಫಣೀಶ್ ಗೆ ಆತಂಕಕಾರಿ ಸಂಗತಿಯೊಂದು ಹೊರಬಿದ್ದಿದೆ. ಏನಪಾ ಅಂದರೆ ಸದರಿ ಮಹಿಳಾ ಉದ್ಯೋಗಿ (Araceli Roiz) ಗರ್ಭಿಣಿಯಾಗಿದ್ದು, ಆಕೆಯ ಮಡಿಲಲ್ಲಿರುವುದು ಹೆಣ್ಣು ಮಗು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಮೊನ್ನೆ ಮೊನ್ನೆಯವರೆಗೂ ಅಂದರೆ ಮೇ 14ರವರೆಗೂ ಎಲ್ಲವೂ ಸುಸೂತ್ರವಾಗಿಯೇ ನಡೆದಿತ್ತು. ಆದರೆ ಆ ಜೋಡಿಯ ಮಧ್ಯೆ ಆಮೇಲೆ ಅದೇನಾಯಿತೋ ಎಲ್ಲವೂ ಖುಲ್ಲಂ ಖುಲ್ಲಾ ಆಗಿದೆ. ಇದಕ್ಕೆ ಪುಷ್ಠಿ ನೀಡುವಂತೆ Facebook ಖಾತೆಯಲ್ಲಿ ಅರಾಸೆಲಿ ರೋಜ್ ಮತ್ತು ಫಣಿ ಮಧ್ಯೆ ಹರಿದಾಡಿರುವ ಪೋಸ್ಟಿಂಗಿಗಳಲ್ಲಿ ತಮಗೆ ಹೆಣ್ಣು ಮಗು ಆಗುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಆದರೆ ಈಗ ಇಬ್ಬರ ನಡುವಣ ಸಂಬಂಧ ಕಹಿಯಾಗಿದೆ. ಅರಾಸೆಲಿ ರೋಜ್ ವಕೀಲರನ್ನು ನೇಮಿಸಿಕೊಂಡಿದ್ದು ಫಣಿ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಘೋಷಿಸಿದ್ದಾಳೆ. ಕ್ಯಾಲಿಫೋರ್ನಿಯಾದ ಕಾನೂನು ಸೇವಾ ಸಂಸ್ಥೆ ಫಣಿ ವಾದ ಸರಣಿಯನ್ನು ತಳ್ಳಿ ಹಾಕಿದ್ದು ತನ್ನ ಕಕ್ಷಿದಾರಳು ಗರ್ಭವತಿಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಹೇಳಿಕೊಂಡಿದೆ.

ಮೊದಲು ತಮ್ಮ ಸಂಬಂಧವನ್ನು ಮುಚ್ಚಿಹಾಕಲು ಗರ್ಭ ತೆಗೆಸಿಹಾಕು ಎಂದಿದ್ದ ಫಣಿ, ರೋಜ್ ಅದಕ್ಕೆ ಒಪ್ಪಿಗೆ ಸೂಚಿಸದಿದ್ದಾಗ ಅಟ್ ಲೀಸ್ಟ್ ಕೆಲಸ ಬಿಟ್ಟುಬಿಡು. ಅದರಿಂದ ನನ್ನ ಸಿಇಒ ಸ್ಥಾನ ಉಳಿಸಿಕೊಳ್ಳಬಹುದು ಎಂದೂ ಗೋಗರೆದಿದ್ದರಂತೆ.

ಕಂಪನಿಗೂ ಪೀಕಲಾಟ: ಫಣಿ ಈ ಹಿಂದೆಯೂ ಇನ್ಫೋಸಿಸ್ ನಲ್ಲಿದ್ದಾಗ ಇಂತಹುದೇ 'ಅವಘಡ' ಮಾಡಿಕೊಂಡಿದ್ದರು. ಹಾಗಾಗಿ ಫಣಿ ತಮ್ಮ ಕಂಪನಿಯಲ್ಲಿ ಹೇಗೆ ನಡೆಸುಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಐಗೇಟ್ ಎಚ್ಚರ ವಹಿಸಬೇಕಿತ್ತು. ಹಾಲಿ ಪ್ರಕರಣದಲ್ಲಿ, ಅಮೆರಿಕದ ಕಾನೂನುರೀತ್ಯ ಫಣಿ ಜತೆಗೆ ಐಗೇಟ್ ಸಹ ಬಾಧ್ಯಸ್ಥವಾಗುತ್ತದೆ' ಎಂದು ರೋಜ್ ವಕೀಲರು ಹೇಳಿದ್ದಾರೆ.

English summary
Sexual Harassment - Ex Infy iGate CEO Phaneesh Murthy Araceli Roiz having baby girl. Igniting controversy over Phaneesh Murthy and iGate employee Araceli Roiz's sexual harassment case, media reports claimed that it is a 'baby girl' for Roiz and Murthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X