ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಆಧಾರ'ಸಹಿತ LPG ವಿತರಣೆಗೆ ತುಮಕೂರು ಸಜ್ಜು

By Srinath
|
Google Oneindia Kannada News

ತುಮಕೂರು, ಮೇ 24: ಆಧಾರ್ ಕಾರ್ಡ್ ಗುರುತಿನ ಸಂಖ್ಯೆ ಮೂಲಕ ಅಡುಗೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಧನವನ್ನು ನೇರವಾಗಿ ಗ್ರಾಹಕರ ಖಾತೆಗೆ ಜಮಾ ಮಾಡುವ ಮಹತ್ವಾಕಾಂಕ್ಷಿ ಯೋಜನೆಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಜೂನ್ 1 ರಿಂದ ತುಮಕೂರಿನಲ್ಲಿ ಕಾರ್ಯಗತವಾಗಲಿದೆ. ಜತೆಗೆ, ಮೈಸೂರಿನಲ್ಲೂ.

ತುಮಕೂರು, ಮೈಸೂರು ನಂತರದ ಸರದಿ ನಿಮ್ಮೂರು. ಹಾಗಾಗಿ ಈ ಯೋಜನೆಯ ಬಗ್ಗೆ ಎಲ್ಲರೂ ಆದ್ಯವಾಗಿ ಒಂದಷ್ಟು ಮುತುವರ್ಜಿ ವಹಿಸಿ ಮಾಹಿತಿ ಪಡೆಯುವುದು ಲೇಸು.

adhar-supported-gas-cylinder-distribution-tumkur-june-1

ತುಮಕೂರಿನ ಅಡುಗೆ ಅನಿಲ ಗ್ರಾಹಕರ ಗಮನಕ್ಕಾಗಿ, ಮೊಟ್ಟಮೊದಲನೆಯದಾಗಿ ಯಾರು ಈಗಾಗಲೇ ಆಧಾರ್ ಸಂಖ್ಯೆ ಹೊಂದಿದ್ದು, ಜತೆಗೆ ಅದನ್ನು ತಮ್ಮ ಬ್ಯಾಂಕ್ ಖಾತೆಯಲ್ಲಿ ಸೇರ್ಪಡೆ ಮಾಡಿರುತ್ತಾರೋ ಅಂಥವರಿಗೆ ಮಾತ್ರ ಜೂನ್ 1 ರಿಂದಲೇ ಈ ಯೋಜನೆಯ ಅನ್ವಯ ಸಹಾಯ ಧನ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

ಇದರ ಹೊರತಾಗಿ, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಹೊಂದಿಲ್ಲದವರಿಗಾಗಿ ಆಗಸ್ಟ್ 31ರವರೆಗೂ ಹಿಂದಿನ ವ್ಯವಸ್ಥೆಯಲ್ಲೇ ಸಬ್ಸಿಡಿಯಿರುವ ಸಿಲಿಂಡರ್ ವಿತರಣೆಯಾಗಲಿದೆ.

ಜೂನ್ 1ರಿಂದ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಮೂಲಕ ಸಿಲಿಂಡರ್ ಪಡೆಯುವ ಗ್ರಾಹಕರಿಗೆ ಮಾರುಕಟ್ಟೆ ದರದಲ್ಲಿಯೇ ಸಿಲಿಂಡರ್ ವಿತರಿಸಲಾಗುವುದು. ಅಂದರೆ ಅಂದಾಜು ಒಂದು ಸಿಲಿಂಡರಿಗೆ 900 ರೂ. ದರದಲ್ಲಿ ವಿತರಣೆಯಾಗಲಿದೆ. ಆದರೆ ಸಬ್ಸಿಡಿಯಿರುವ ಸಿಲಿಂಡರ್ ದರ ಸುಮಾರು 420 ರೂ. ಇದೆ. ಅಲ್ಲಿಗೆ ವ್ಯತ್ಯಾಸದ 500 ರೂ. ಮೊತ್ತವನ್ನು ಆಧಾರ್ ಸಂಖ್ಯೆಯಿರುವ ಬ್ಯಾಂಕ್ ಖಾತೆಗೆ ಕೇಂದ್ರ ಸರಕಾರವೇ ನೇರವಾಗಿ ಜಮಾ ಮಾಡಲಿದೆ.

ಇನ್ನು, ಇನ್ನೂ ಆಧಾರ್ ಸಂಖ್ಯೆ ಪಡೆದಿಲ್ಲದವರು ಸಬ್ಸಿಡಿ ಇರುವ ಗ್ಯಾಸ್ ಸಿಲೀಂಡರ್ ಪಡೆಯಲು ಅಡ್ಡಿಯಿಲ್ಲ. ಆದರೆ ನೆಪಿರಲಿ. ಇದು ಆಗಸ್ಟ್ 31ರವರೆಗೂ ಮಾತ್ರ. ಹಾಗಾಗಿ, ಮೊದಲು ಆಧಾರ್ ಕಾರ್ಡ್ ಮಾಡಿಸಿಟ್ಟುಕೊಳ್ಳಿ. ರಾಜ್ಯ ಇತರ ಭಾಗದ ಜನರಿಗೂ ಇದು ಅನ್ವಯವಾಗಲಿದೆ.
ಒಮ್ಮೆ ಈ ಜಾಹೀರಾತನ್ನು ಕ್ಲಿಕ್ಕಿಸಿ ನೋಡಿ.

English summary
Adhar supported LPG cylinder distribution will begin in Tumkur on June 1. None the less, those without the Adhar number oriented Bank account would also get subsidised LPG but only upto August 31. So hurry ti get Adhar registration
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X