ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಜನಸಂಖ್ಯೆ, ಸಾಕ್ಷರತೆ, ಲಿಂಗಾನು ಪ್ರಮಾಣ

By Mahesh
|
Google Oneindia Kannada News

ಬೆಂಗಳೂರು, ಮೇ 23: ಕರ್ನಾಟಕ ಜನಗಣತಿ ಕಾರ್ಯಪಡೆ ನಿರ್ದೇಶಕ ಅನಿಲ್ ಕುಮಾರ್ ಅವರು ಬೆಂಗಳೂರಿನಲ್ಲಿಂದು ಬಿಡುಗಡೆ ಮಾಡಿರುವ 2011ರ ಜನಗಣತಿ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಇರುವ ಒಟ್ಟು ಜನಸಂಖ್ಯೆ 6,10,95,297. ದೇಶದ ಒಟ್ಟು ಜನಸಂಖ್ಯೆ 121 ಕೋಟಿ.

ರಾಜ್ಯದ ಒಟ್ಟು ಆರು ಕೋಟಿ ಜನಸಂಖ್ಯೆ ಪೈಕಿ ಪುರುಷರ ಸಂಖ್ಯೆ 3,೦9,66,657, ಮಹಿಳೆಯರ ಜನಸಂಖ್ಯೆ 3,01,28,640. ರಾಜ್ಯದಲ್ಲಿರುವ ಎಸ್ಸಿ ಜನಾಂಗ ಒಟ್ಟು ಜನಸಂಖ್ಯೆ ಒಂದು ಕೋಟಿ ನಲವತ್ತು ಲಕ್ಷ. ಎಸ್ಟಿ ಜನಸಂಖ್ಯೆ 42,48,987.

ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಒಂಬತ್ತನೇ ಸ್ಥಾನ ಸಿಕ್ಕಿದೆ. ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಜನಸಂಖ್ಯೆ ಇದೆ. ಇಲ್ಲಿ ಇರುವ ಜನಸಂಖ್ಯೆ 96,27,551 ಅತಿ ಕಡಿಮೆ ಜನಸಂಖ್ಯೆ ಕೊಡಗು ಜಿಲ್ಲೆಯದು, ಇಲ್ಲಿನ ಜನಸಂಖ್ಯೆ 5,54,519.

Karnataka Census 2011

ಮಹಾನಗರ ಪಾಲಿಕೆವಾರು ಜನಸಂಖ್ಯೆ ವಿವರ :

* ಬೆಂಗಳೂರು ಮಹಾನಗರ ಪಾಲಿಕೆ : 84,43,675
* ಬೆಳಗಾವಿ: 4,88,157
* ಹುಬ್ಬಳ್ಳಿ-ಧಾರವಾಡ : 9,43,788,
* ಬಳ್ಳಾರಿ:4,10,445,
* ದಾವಣಗೆರೆ: 4,34,971,
* ಮಂಗಳೂರು: 4,85,968,
* ಮೈಸೂರು : 8,93,062
* ಗುಲ್ಬರ್ಗಾ : 5,33, 587.

2011ರ ಜನಗಣತಿ ಪ್ರಕಾರ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ 3 ಜಿಲ್ಲೆಗಳು
* ಬೆಂಗಳೂರು ನಗರ -96,21,551,
* ಬೆಳಗಾವಿ -47,79,661,
* ಮೈಸೂರು-30,01,127.

ಅತಿ ಕಡಿಮೆ ಜನಸಂಖ್ಯೆ ಹೊಂದಿರುವ 3 ಜಿಲ್ಲೆಗಳು
* ಕೊಡಗು-5,56,519,
* ಬೆಂಗಳೂರು ಗ್ರಾಮಾಂತರ-9,90,923,
* ಚಾಮರಾಜನಗರ- 10,20,179.

ಒಟ್ಟು ಸಾಕ್ಷರತೆಯ ಪ್ರಮಾಣ 2011 ರಲ್ಲಿ 75.04 ಈ ಪ್ರಮಾಣ 20೦1ರಲ್ಲಿ ಶೇ.66.06ರಷ್ಟಿತ್ತು. ಈ ಹತ್ತು ವರ್ಷದ ಅವಧಿಯಲ್ಲಿ ಶೇ.8.8 ರಷ್ಟು ಸಾಕ್ಷರತೆ ಹೆಚ್ಚಳವಾಗಿದೆ. ಈಗ ರಾಜ್ಯದಲ್ಲಿ 4,6,47,322 ಮಂದಿ ಸಾಕ್ಷರರಿದ್ದಾರೆ. 2011ರ ಜನಗಣತಿ ವರದಿಯಲ್ಲಿ ಸಾಕ್ಷರರ ಸಂಖ್ಯೆ 3,04,34,962 ಇತ್ತು.

ಜಿಲ್ಲಾವಾರು ಸಾಕ್ಷರತೆ ಪ್ರಮಾಣ :
* ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು ಇಲ್ಲಿನ ಸಾಕ್ಷರತೆ ಪ್ರಮಾಣ ಶೇ.88.57.
* ಬೆಂಗಳೂರುನಗರ 2ನೇ ಸ್ಥಾನದಲ್ಲಿದ್ದು, 87.67,
* ಉಡುಪಿ-86.64,
* ಚಾಮರಾಜನಗರ-ಶೇ.61.43,
* ಯಾದಗಿರಿ ಜಿಲ್ಲೆ ಸಾಕ್ಷರತೆಯಲ್ಲಿ ಕೊನೆಯ ಸ್ಥಾನದಲ್ಲಿದ್ದು, ಇಲ್ಲಿನ ಪ್ರಮಾಣ ಶೇ.51.83ರಷ್ಟಿದೆ.

ಇನ್ನು ಪ್ರತಿ ಸಾವಿರ ಜನಸಂಖ್ಯೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಲೈಂಗಿಕ ಅನುಪಾತದ ಸಂಖ್ಯೆ :
* ಬೆಳಗಾವಿ 988,
* ಹುಬ್ಬಳ್ಳಿ-ಧಾರವಾಡ-989,
* ದಾವಣಗೆರೆ-971,
* ಬಳ್ಳಾರಿ-991,
* ಬಿಬಿಎಂಪಿ ಬೆಂಗಳೂರು-923,
* ಮಂಗಳೂರು-1006,
* ಮೈಸೂರು-999, ಗುಲ್ಬರ್ಗಾ-964.

ಸಾವಿರ ಪುರುಷ ಜನಸಂಖ್ಯೆಗೆ ಈಗ ಮಹಿಳಾ ಸಂಖ್ಯೆ 973. ಕಳೆದ 2001ರ ಜನಗಣತಿಯಲ್ಲಿ ಸಾವಿರ ಪುರುಷರಿಗೆ 965 ಮಹಿಳೆಯರ ಸಂಖ್ಯೆ ಇತ್ತು. ಈಗ ಪುರುಷರ ಸಂಖ್ಯೆಗೆ ಹೋಲಿಸಿದರೆ ಸ್ವಲ್ಪ ಮಟ್ಟಿಗೆ ಮಹಿಳಾ ಸಂಖ್ಯೆ ಹೆಚ್ಚಾಗಿರುವುದು ಜನಗಣತಿಯಲ್ಲಿ ಕಂಡು ಬಂದಿದೆ.

ಈಗ ದೇಶದ ಒಟ್ಟು ಜನಸಂಖ್ಯೆ 121 ಕೋಟಿ 05,69,573 ಅತೀ ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಜ್ಯಗಳ ಪೈಕಿ ಉತ್ತರಪ್ರದೇಶ ಅಗ್ರಸ್ಥಾನದಲ್ಲಿದೆ. ಇಲ್ಲಿನ ಜನಸಂಖ್ಯೆ 19 ಕೋಟಿ 98,12,341. ಅತೀ ಕಡಿಮೆ ಜನಸಂಖ್ಯೆ ಹೊಂದಿರುವ ಪ್ರದೇಶ ಎಂದರೆ ಲಕ್ಷದ್ವೀಪ. ಇಲ್ಲಿನ ಜನಸಂಖ್ಯೆ ಕೇವಲ 64,473.

English summary
According to the date released by Karnataka Census Board Karnataka's population is 6,10,95,297 out of India's 121 Cr population. Dakshina Kannada District tops the Literacy rate with 88.57% and Yadgir at the bottom with 51%. Mangalore tops the sex ratio it has 1006
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X