ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ಲಾಂ ಧರ್ಮಾಂಧರಿಂದ ಬ್ರಿಟನಿನಲ್ಲಿ ಸೈನಿಕನ ಕಗ್ಗೊಲೆ

By Srinath
|
Google Oneindia Kannada News

ಲಂಡನ್, ಮೇ 23: ಇಸ್ಲಾಂ ಧರ್ಮದ ಪರ ಘೋಷಣೆಗಳನ್ನು ಕೂಗುತ್ತಿದ್ದ ಇಬ್ಬರು ಸೈನಿಕನೊಬ್ಬನನ್ನು ಹತ್ಯೆ ಮಾಡಿದ್ದಾರೆ. ಇದರಿಂದ ರಾಜಧಾನಿ ಲಂಡನ್ ಬೆಚ್ಚಿಬಿದ್ದಿದೆ. ಬ್ರಿಟನ್ ಸರಕಾರ ಇದೊಂದು ಭಯೋತ್ಪಾದಕ ಕೃತ್ಯ ಎಂದು ಶಂಕಿಸಿದೆ. ಆಗ್ನೇಯ ಲಂಡನ್ನಿನ Woolwich ಬಳಿಯಿರುವ ದಂಡು ಪ್ರದೇಶದಲ್ಲಿ ಬುಧವಾರ ಈ ಘಟನೆ ನಡೆದಿದೆ.

ಸೈನಿಕನ ಹತ್ಯೆ ಸುದ್ದಿ ತಿಳಿಯುತ್ತಿದ್ದಂರೆ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಜತೆ ಮಾತುಕತೆ ನಡೆಸುತ್ತಿದ್ದ ಪ್ರಧಾನಿ ಡೇವಿಡ್ ಕೆಮರೂನ್ ಅವರು ತಮ್ಮ ಪ್ರವಾಸವನ್ನು ಮೊಟಕಗೊಳಿಸಿ, ಲಂಡನ್ನಿಗೆ ವಾಪಸಾಗಿದ್ದಾರೆ. ಇದೀಗ ತುರ್ತು ರಾಷ್ಟ್ರೀಯ ಭದ್ರತಾ ಸಭೆಯನ್ನು ನಡೆಸುತ್ತಿದ್ದಾರೆ.

British soldier hacked to death Islamist attack suspected,

ಮೊದಲು ಸೈನಿಕನ್ನು ಇರಿದು ಸಾಯಿಸಿದ ಪಾತಕಿಗಳು ನಂತರ ಆತನ ಕಾರನ್ನು ಕಂಬಕ್ಕೆ ನುಗ್ಗಿಸಿದ್ದಾರೆ. ಬಳಿಕ ಸೈನಿಕ ತಲೆ ಕಡಿಯಲು ಹವಣಿಸಿದ್ದಾರೆ. ಆದರೆ ಆ ವೇಳೆಗೆ ಸ್ಥಳೀಯರು ಜಮಾಯಿಸಿದಾಗ ಪರಾರಿಯಾಗಲು ಯತ್ನಿಸಿದ್ದಾರೆ. ಇದೊಂದು ಭಯೋತ್ಪಾದಕ ಕೃತ್ಯ ಎಂದು ಬ್ರಿಟನ್ ಮೇಯರ್ ಹೇಳಿದ್ದಾರೆ.

ಹತ್ಯೆ ನಡೆದ ಕೆಲವೇ ಕ್ಷಣಗಳಲ್ಲಿ ಮಾಂಸ ಕತ್ತರಿಸುವ ಚಾಕು, ಚೂರಿಗಳನ್ನು ಝಳಪಿಸುತ್ತಿದ್ದ ಪಾತಕಿಗಳ ಚಿತ್ರವನ್ನು ಸ್ಥಳೀಯರು ಚಿತ್ರೀಕರಿಸಿದ್ದಾರೆ. 'ಅಲ್ಲಾ ಆಣೆಗೂ ನಾವು ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ. ಈ ಹತ್ಯೆ ಮಾಡಲು ಒಂದೇ ಒಂದು ಕಾರಣವೆಂದರೆ ಪ್ರತಿ ದಿನ ಮುಸ್ಲಿಮರ ಹತ್ಯೆಗಳಾಗುತ್ತಿವೆ' ಎಂದು ಪಾತಕಿಯೊಬ್ಬ ಹತ್ಯೆ ಸಂದರ್ಭದಲ್ಲಿ ಕೂಗುತ್ತಿರುವ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪಾತಕಿಗಳು 20-30 ವರ್ಷದ ಯುವಕರಾಗಿದ್ದು, ಜೀನ್ಸ್ ಪ್ಯಾಂಟ್ ಮತ್ತು ಉಣ್ಣೆ ಜಾಕೆಟ್ ಧರಿಸಿದ್ದರು. ಬ್ರಿಟನ್ ಇಂಗ್ಲೀಷ್ ನಲ್ಲಿ ನಿರರ್ಗಳವಾಗಿ ಹುಚ್ಚನಂತೆ ಕೂಗಾಟ ನಡೆಸಿದ್ದು ವಿಡಿಯೋದಲ್ಲಿ ದಾಖಲಾಗಿದೆ. ಬ್ರಿಟನ್ನಿನ ITV news channelಗೆ ಈ ದೃಶ್ಯಾವಳಿಗಳು ಸಿಕ್ಕಿವೆ ಎಂದು ವರದಿಯಾಗಿದೆ.

'ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ಎಂದು ನಂಬಿ ಬ್ರಿಟನ್ ಸೈನಿಕನನ್ನು ಹತ್ಯೆ ಮಾಡಿದ್ದೇವೆ' ಎಂದು ಪಾತಕಿಗಳು ಕೂಗು ಹಾಕಿದ್ದಾರೆ. '2005 ಜುಲೈ ನಡೆದ ಆತ್ಮಾಹುತಿ ದಾಳಿ ನಂತರ ಇದು ಭಯೋತ್ಪಾದಕರ ಕುಕೃತ್ಯ ಇದಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ನಡೆದ ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಪಾತಕಿಗಳ ಮೇಲೆ ಗುಂಡಿನ ಮಳೆಗೆರೆದಿದ್ದಾರೆ. ಗಾಯಗೊಂಡ ಇಬ್ಬರನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಪಾತಕಿಗಳ ಬಗ್ಗೆ ಪೊಲೀಸರು ತಕ್ಷಣಕ್ಕೆ ಹೆಚ್ಚಿನ ವಿವರ ಬಹಿರಂಗಪಡಿಸಿಲ್ಲ.

'ಮಹಿಳೆಯರ ಎದುರೇ ಈ ಹತ್ಯೆ ನಡೆಸುತ್ತಿರುವುದಕ್ಕೆ ನಮಗೆ ವಿಷಾದವಾಗಿದೆ. ಆದರೆ ನಮ್ಮ ಮುಸ್ಲಿಂ ನೆಲೆಗಳಲ್ಲಿ ನಾವೂ ಇಂತಹುದೇ ದೃಶ್ಯಗಳನ್ನು ನೋಡುತ್ತಿದ್ದೇವೆ ಎಂದು ಪಾತಕಿಗಳು ಕೂಗುತ್ತಿರುವುದು ವಿಡಿಯೋದಲ್ಲಿದೆ. 2001ರಿಂದ ಅಫಘಾನಿಸ್ತಾನದಲ್ಲೂ ಮತ್ತು 2003 ರಿಂದ 2009ರವರೆಗೂ ಇರಾಕಿನಲ್ಲಿ ಬ್ರಿಟನ್ ಸೇನಾಪಡೆಗಳು ಬೀಡುಬಿಟ್ಟಿವೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

English summary
A British soldier was hacked to death by two men shouting Islamic slogans in a south London street on Wednesday, in what the government said appeared to be a terrorist attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X