ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರ: ನಿರ್ಭಯಾ ಹೆಸರಿನಲ್ಲಿ ಮಾವಿನ ಹಣ್ಣು!

By Srinath
|
Google Oneindia Kannada News

ಲಖ್ನೋ, ಮೇ 23: ಇದೇನು ಪರಿಸ್ಥಿತಿಯ ವ್ಯಂಗ್ಯವೋ ಅಥವಾ ಸಂತಸ ಪಡುವ ವಿಷಯವೋ ನೀವೇ ನಿರ್ಧರಿಸಬೇಕು.
ಏಕೆಂದರೆ ಕಳೆದ ವರ್ಷ ಡಿಸೆಂಬರಿನಲ್ಲಿ ನಡೆದ ಅಮಾನುಷ ರೇಪ್ ಮತ್ತು ಹತ್ಯೆ ಪ್ರಕರಣದ ಬಾಧಿತೆಯ ಹೆಸರನ್ನು ಇಲ್ಲಿನ ಬೆಳಗಾರರೊಬ್ಬರು ಮಾವಿನ ಹಣ್ಣಿಗೆ ನಾಮಕರಣ ಮಾಡಿದ್ದಾರೆ.

grower-kaleemullah-khan-names-mango-after-nirbhaya

ಉತ್ತರಪ್ರದೇಶದ ಸುಪ್ರಸಿದ್ಧ ಮಾವಿನ ಹಣ್ಣು ಕೇಂದ್ರವಾದ ಮಲಿಹಾಬಾದಿಗೆ ಈ ಹೊಸ ಹೆಸರಿನ ತಳಿಯನ್ನು ಮಾರಾಟಕ್ಕೆ ಬಿಡಲಾಗಿದೆ. ಮೃತ ಯುವತಿಯ ಸ್ಮರಣೆಯಲ್ಲಿ ಮಾವಿನ ಹಣ್ಣಿಗೆ ಹೆಸರಿಡುವ ಮೂಲಕ ಆಕೆಯನ್ನು ಗೌರವಿಸುತ್ತಿದ್ದೇವೆ ಎಂದು ಬೆಳೆಗಾರ ಖಲೀಮುಲ್ಲಾ ಖಾನ್ ತಿಳಿಸಿದ್ದಾರೆ.

ಪದ್ಮಶ್ರೀ ಪುರಸ್ಕೃತ ಖಲೀಮುಲ್ಲಾ ಖಾನ್ 3 ವರ್ಷಗಳ ಹಿಂದೆಯೇ ಈ ಮಾವಿನ ಹಣ್ಣಿನ ಗಿಡವನ್ನು ನೆಟ್ಟಿದ್ದರಂತೆ. ಆದರೆ ಅಲ್ಪಾವಧಿಯಲ್ಲೇ ಅದು ಫಲ ನೀಡಿರುವುದರಿಂದ ಸಂಭ್ರಮಿಸಿರುವ ಅವರು ಅರೆವೈದ್ಯಕೀಯ ವಿದ್ಯಾರ್ಥಿನಿಯ ಬಾಳು ಮುರುಟಿಹೋಗಿದ್ದರ ಬಗ್ಗೆ ಮಮ್ಮಲ ಮರುಗಿದ್ದು, ತಮ್ಮ ಮಾವಿನ ಫಸಲಿಗೆ ಆಕೆಯ ಹೆಸರನ್ನು ಇಟ್ಟಿದ್ದಾರೆ. ಅಂದಹಾಗೆ, ನಿರ್ಭಯಾ ಎಂಬುದು ಸದರಿ ವಿದ್ಯಾರ್ಥಿನಿಗೆ ಮಾಧ್ಯಮಗಳು ಇಟ್ಟ ಹೆಸರು.

57 ವರ್ಷದ ರೈತ ಖಾನ್ ಅವರಿಗೂ ಮಾವಿನ ಹಣ್ಣಿಗೂ ನಿಕಟ ಸಂಬಂಧವಿದೆ. ಒಂದೇ ಮರದಲ್ಲಿ 300 ತಳಿಯ ಮಾವನ ಹಣ್ಣುಗಳನ್ನು ಬೆಳೆಯುವ ಮೂಲಕ ಅವರು ಈಗಾಗಲೇ Limca Book of World Recordsಗೆ ದಾಖಲಾಗಿದ್ದಾರೆ.

1999ರಲ್ಲಿ ಒಂದೇ ಮರದಲ್ಲಿ 300 ತಳಿಯ ಮಾವಿನ ಹಣ್ಣುಗಳನ್ನು ಬೆಳೆದ ಖಾನ್, ಆ ಮರವನ್ನು ಅಂದಿನ ರಾಷ್ಟ್ರಪತಿಗಳಿಗೆ ಗೌರವಪೂರ್ವಕವಾಗಿ ಅರ್ಪಿಸಿದರಂತೆ. ನವ ದೆಹಲಿಯಲ್ಲಿರುವ ಸುವಿಶಾಲ ಮೊಘಲ್ ಸಸ್ಯಕಾಶಿಯಲ್ಲಿ ಆ ಮರ ಇಂದಿಗೂ ನಳನಳಿಸುತ್ತಿದೆ.

ಈ ಹಿಂದೆಯೂ ಅವರು ವಿವಿಧ ತಳಿಗಳ ಮಾವಿನ ಹಣ್ಣುಗಳಿಗೆ ನಾನಾ ಗಣ್ಯ ವ್ಯಕ್ತಿಗಳ ಹೆಸರನ್ನಿಟ್ಟಿದ್ದಾರೆ. ಆ ಪಟ್ಟಿಯಲ್ಲಿ ಐಶ್ವರ್ಯಾ ರೈ, ನರ್ಗಿಸ್, ಸೋನಿಯಾ ಗಾಂಧಿ, ಅಖಿಲೇಶ್ ಯಾದವ್ ಹೆಸರುಗಳು ಕಾಣಿಸಿಕೊಂಡಿವೆ.

English summary
A new variety of mango, harvested at Uttar Pradesh’s famous mango centre Malihabad, at Uttar Pradesh has been named Nirbhaya after the 23-year-old Delhi girl who was brutally gangraped December 16 last year. The grower Kaleemullah Khan is a Padma Shri awardee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X