ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಯೂಟದ ಜತೆ ನಂದಿನಿ ಹಾಲು, ಬಿಸಿಬಿಸಿ ಚರ್ಚೆ

By Mahesh
|
Google Oneindia Kannada News

ಮಂಡ್ಯ, ಮೇ.22: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಕೆನೆಭರಿತ ನಂದಿನಿ ಹಾಲು ಕೊಡುವ ಬಗ್ಗೆ ಸದ್ಯದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಮಹದೇವ ಪ್ರಸಾದ್ ಅವರು ಘೋಷಿಸಿದ್ದಾರೆ.

ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಂದಿನಿ ಹಾಲು ಉತ್ಪಾದನೆಯಾಗುತ್ತಿದೆ. ಹಾಲು ಉತ್ಪಾದಕರಿಗೆ ಸರ್ಕಾರ 4 ರು ಪ್ರೋತ್ಸಾಹ ಧನ ನೀಡಲು ಮುಂದಾಗಿದೆ. ಇದರಿಂದ ಹಾಲಿನ ಪ್ರಮಾಣ ಗಣಣೀಯವಾಗಿ ಏರಿಕೆಯಾಗಿದೆ ಎಂದರು.

ಬಿಸಿಯೂಟದ ಜೊತೆ ಒಂದು ಲೋಟ ಹಾಲು ನೀಡಿದಲ್ಲಿ ಮಕ್ಕಳ ಪೌಷ್ಟಿಕತೆ ಕೊರತೆ ನೀಗಿಸಬಹುದಾಗಿದೆ. ಒಕ್ಕೂಟದಲ್ಲಿ ಹಾಲು ಸಂಗ್ರಹಣೆ ಸಮಸ್ಯೆಗೆ ಪರಿಹಾರ ಸಿಕ್ಕಿದ್ದಂತಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳೊಡನೆ ಚರ್ಚಿಸಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಮಹದೇವ ಪ್ರಸಾದ್ ಹೇಳಿದ್ದಾರೆ.

Karnataka Government mulls Milk with Midday Meals : Mahadeva Prasad

ಹಾಲು ಓಕೆ, ಮೊಟ್ಟೆ ಇಲ್ಲ ಯಾಕೆ? : ಹಾಲು ಅಥವಾ ಮೊಟ್ಟೆ ಅಥವಾ ಬಾಳೆಹಣ್ಣು ನೀಡುವ ಪ್ರಸ್ತಾಪ ಹಲವಾರು ವರ್ಷಗಳ ಹಿಂದಿನ ನಿರ್ಧಾರ. ರಾಜ್ಯ ಸರ್ಕಾರ ಅಷ್ಟೇ ಅಲ್ಲದೆ ಸ್ಥಳೀಯ ಹಾಲು ಒಕ್ಕೂಟಗಳು ಕೂಡಾ ಈ ರೀತಿ ಹಾಲು ಹಣ್ಣು ವಿತರಣೆಗೆ ಮುಂದಾಗಿದ್ದನ್ನು ಕಂಡಿದ್ದೇವೆ. ಆದರೆ ಈ ಮಹತ್ತರ ಪ್ರಸ್ತಾಪಕ್ಕೆ ತಡೆ ಒಡ್ಡಲು ಒಂದು ವರ್ಗ ಸದಾ ಕಾದಿರುತ್ತದೆ ಎಂಬ ಮಾತಿದೆ. ಆರ್ಥಿಕ ಕೊರತೆ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರಗಳು ಈ ಪ್ರಸ್ತಾಪವನ್ನು ತಡೆಹಿಡಿದಿದ್ದವು.

ಇನ್ನೊಂದೆಡೆ 'ಸುವರ್ಣ ಆರೋಗ್ಯ ಚೇತನ' ಯೋಜನೆಯಡಿ ನಡೆದ ತಪಾಸಣಾ ವರದಿಯಂತೆ ಶೇ 38ರಷ್ಟು ಮಕ್ಕಳು ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವುದರ ಬಗ್ಗೆ ಮಾಹಿತಿ ದೊರಕಿದೆ. ಹಾಗಾಗಿ ಕೇಂದ್ರ ಸರಕಾರ ತನ್ನ ಪಾಲಿನ ಅನುದಾನವನ್ನು ಹೆಚ್ಚಿಸಿತ್ತು

ಅಲ್ಲದೆ ಅಥಣಿ ವಿಮೋಚನಾ ಸಂಘ ಎಂಬ ಸರ್ಕಾರೇತರ ಸಂಸ್ಥೆ ಕೂಡಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿ ಹಾಲು ಅಥವಾ ಮೊಟ್ಟೆ ವಿತರಣೆಗೆ ಆಗ್ರಹಿಸಿತ್ತು. 4531 ಮಕ್ಕಳು ಪೌಷ್ಟಿಕಾಂಶ ಕೊರತೆ ಎದುರಿಸುತ್ತಿದ್ದಾರೆ ಎಂದು ಎನ್ ಜಿಒ ಹೇಳಿತ್ತು.

ನಮ್ಮ ರಾಜ್ಯದಲ್ಲಿ ಮಕ್ಕಳಿಗೆ ಬಿಸಿಯೂಟ 'ಮೆನು' ಪರಿಷ್ಕರಣೆ ಮಾಡಲು, ಪೌಷ್ಟಿಕಾಂಶ ಆಹಾರ ನೀಡಲು ಆರ್ಥಿಕ ಕೊರತೆ ಎನ್ನುವ ಕಾರಣ ನೀಡಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಿಲ್ಲ. ಇನ್ನು ಮೊಟ್ಟೆ ಬದಲಿಗೆ ಬಾಳೆಹಣ್ಣು ನೀಡುವ ಬದಲಿ ವ್ಯವಸ್ಥೆ ನೀಡುವ ಜಾರಿಗೊಳಿಸಿದರೆ ಉತ್ತಮ ಎಂಬ ಕೂಗು ಎದ್ದಿದೆ.

ಮೊಟ್ಟೆ, ಮಾಂಸ ತಾಮಸ ಆಹಾರ ಇದನ್ನು ಸೇವಿಸುವುದರಿಂದ ಮಕ್ಕಳಲ್ಲಿ ರಾಕ್ಷಸೀ ಪ್ರವೃತ್ತಿ ಹೆಚ್ಚುತ್ತದೆ ಎಂಬ ಸುದ್ದಿ ಹಬ್ಬಿಸಲಾಯಿತು. ಬಿಸಿಯೂಟದ ಹೊಣೆಯನ್ನು ಹಲವಾರು ಕಡೆ ಮಠಗಳು ಹಾಗೂ ಇಸ್ಕಾನ್ ನಂಥ ಸಂಸ್ಥೆಗಳು ವಹಿಸಿಕೊಂಡಿರುವುದರಿಂದ ಮೊಟ್ಟೆಗೆ ಕತ್ತರಿ ಬಿದ್ದಿತು.

ಹಿಂದುಳಿದ ಪ್ರದೇಶಗಳಲ್ಲಿ ನೂರಾರು ಮಕ್ಕಳು ಊಟಕ್ಕಿಲ್ಲದೆ ಸಾಯುತ್ತಿರುವ ವರದಿ ಬಂದಾಗ ಬಿಜೆಪಿ ಸರ್ಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿ ಸೂಕ್ತ ಆಹಾರ ಭದ್ರತೆ ಒದಗಿಸುವಂತೆ ಸೂಚಿಸಿತು. ಅದರಂತೆ ಬೇಕಾದ ಮಕ್ಕಳಿಗೆ ಮೊಟ್ಟೆ ಅಥವಾ ಬಾಳೆಹಣ್ಣು ಅಥವಾ ದ್ವಿದಳ ಧಾನ್ಯ ನೀಡುವ ಯೋಜನೆ ಆರಂಭವಾಗಬೇಕಿತ್ತು. ಯಾಕೋ ನಿಂತು ಬಿಟ್ಟಿತು. ಈಗ ಗೋಹತ್ಯೆ ವಿಷಯದಲ್ಲಿ ಖಡಕ್ ನಿರ್ಧಾರ ಪ್ರಕಟಿಸಿರುವ ಸಿದ್ದರಾಮಯ್ಯ ಅವರು ಮಕ್ಕಳ ಪೌಷ್ಟಿಕತೆ ವಿಚಾರದಲ್ಲಿ ಏನು ನಿರ್ಧಾರ ಪ್ರಕಟಿಸುತ್ತಾರೋ ಕಾದು ನೋಡಬೇಕಿದೆ.

English summary
Karnataka state Congress government plans to implement a scheme to provide milk to school children along with their mid-day meal said Co Operative Minister Mahadeva Prasad. There is always chaos in serving Egg or Banana with Midday meals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X