ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನನ್ನ ನಂಬಿ ಪ್ಲೀಸ್; ನಾನು ಯಾವುದೇ ಫಿಕ್ಸ್ ಮಾಡಿಲ್ಲ'

By Srinath
|
Google Oneindia Kannada News

IPL Spot Fixing - Sreesanth changes tone says never fixed cricket game
ಬೆಂಗಳೂರು, ಮೇ 22: ಇದು ನಿಮ್ಮ ನಿಮ್ಮ ನಂಬಿಕೆಗೆ ಬಿಟ್ಟ ವಿಚಾರ. 'ಕಳ್ಳಾಟದ ಆಪಾದಿತ ಶ್ರೀಶಾಂತ ಸಭ್ಯರು ಆಡುವ ಕ್ರಿಕೆಟಿಗೆ ತಾನು ಯಾವುದೇ ರೀತಿಯ ಸ್ಪಾಟ್ ಇಟ್ಟಿಲ್ಲ' ಎಂದಿದ್ದಾನೆ. ಸೋ, ಅವನ ಮಾತನ್ನು ನಂಬೋದು ಬಿಡೋದು ನಿಮಗೆ ಬಿಟ್ಟ ವಿಚಾರ.

ಏನಪ್ಪಾ ಅಂದರೆ ಶ್ರೀಶಾಂತ ನಿನ್ನೆ ಅತ್ತ ಮತ್ತೆ ಪೊಲೀಸ್ ಕಸ್ಟಡಿಗೆ ಒಳಪಡುತ್ತಿದ್ದಂತೆ ಆತನ ಪರ ವಕೀಲರು ಎಲ್ಲ ಮಾಧ್ಯಮಗಳಿಗೆ ಇಮೇಲ್ ಮಾಡಿ, ತನ್ನ ಕಕ್ಷಿದಾರರಾದ ಶ್ರೀಶಾಂತ್ ಅವರು ಯಾವುದೇ ಸ್ಪಾಟ್ ಫಿಕ್ಸಿಂಗ್ ಮಾಡಿಲ್ಲ ಎಂದಿದ್ದಾರೆ.

'ಹೌದು ನಾನು ಅಮಾಯಕ. ನಾನೇನೂ ತಪ್ಪು ಮಾಡಿಲ್ಲ. ನಾನು ಈ ಸ್ಪಾಟ್ ಫಿಕ್ಸಿಂಗ್ ಕಳ್ಳಾಟದಲ್ಲಿ ಖಂಡಿತಾ ಭಾಗಿಯಾಗಿಲ್ಲ' ಎಂದು ಇಮೇಲಿನಲ್ಲಿ ಶ್ರೀಶಾಂತ ರಾಗ ಬದಲಿಸಿದ್ದಾನೆ. ಪೊಲೀಸರ ಮುಂದೆ ತನ್ನ ತಪ್ಪೊಪ್ಪಿಕೊಂಡು ವಿಚಾರಣೆಗೆಂದು ಏನೇ ಪ್ರಶ್ನೆ ಕೇಳಿದರು ಗೊಳೋ ಎನ್ನುತ್ತಿರುವ ಅಳುಮುಂಜಿ ಶ್ರೀಶಾಂತನ ಬಗ್ಗೆ 'ಅಳುವ ಗಂಡಸರನ್ನು ನಂಬಲೇ ಬಾರದು' ಎಂದು ಹೆಂಗೆಳೆಯರೊಬ್ಬರು ಹೇಳಿದ್ದು ಇಲ್ಲಿ ಉಲ್ಲೇಖಾರ್ಹ.

ರೆಬೆಕಾ ಜಾನ್ ಎಂಬ ಲಾಯರ್ ಮುಖಾಂತರ ಇಮೇಲನ್ನು ರವಾನಿಸಿರುವ ಪುಣ್ಯಾತ್ಮ ಶ್ರೀಶಾಂತ ತಾನು ಯಾವುದೇ ಸ್ಪಾಟ್ ಫಿಕ್ಸಿಂಗ್ ಕಳ್ಳಾಟದಲ್ಲಿ ಭಾಗಿಯಾಗಿಲ್ಲ ಎಂದು ಮತ್ತೆ ಮತ್ತೆ ಹೇಳಿದ್ದು, ನನ್ನ ಜೀವನದಲ್ಲಿ ಕ್ರಿಕೆಟನ್ನು ಆ ಆಟದ ನೈಜ ಮನೋಭಾವದಿಂದ ಆಡಿದ್ದೇನೆ ಎಂದಿದ್ದಾನೆ.

'ನಾನು ನನ್ನ ಜೀವನದ ಅತಿ ದುರ್ಗಮ ಹಂತದಲ್ಲಿ ಸಾಗುತ್ತಿದ್ದೇನೆ ಎಂಬುದು ನನ್ನ ಅರಿವಿಗೆ ಬಂದಿದೆ. ಆದರೆ ಪ್ರಶಂಸೆ/ಪ್ರೋತ್ಸಾಹಗಳನ್ನು ಬೈಗುಳ/ಅವಮಾನಗಳ ಜತೆಜತೆಗೆ ಸ್ವೀಕರಿಸುವುದನ್ನು ಕಲಿತಿದ್ದೇನೆ. ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ನನಗೆ ಅತ್ಯುಚ್ಛ ನಂಬಿಕೆ/ವಿಶ್ವಾಸವಿದೆ. ಕಾಲಾಂತರದಲ್ಲಿ ನಾನು ನಿರ್ದೋಷಿ ಎಂಬುದು ಸಾಬೀತಾಗಲಿದೆ. ಸಭ್ಯ ಆಟಗಾರನಾಗಿ ನಾನು ಮತ್ತೆ ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತೇನೆ' ಎಂದು ಮೇಲ್ ಪ್ರಕಟಣೆಯಲ್ಲಿ ಶ್ರೀಶಾಂತ್ ಅಲವತ್ತುಕೊಂಡಿದ್ದಾನೆ.

English summary
IPL Spot Fixing - Sreesanth changes tone says never fixed cricket game. Sreesanth, who is an accused in the IPL spot-fixing case, in a statement emailed to the media by his lawyer Rebecca John, said he have never indulged in any spot fixing and have always played cricket in the spirit of the game.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X