ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ದೇಶದ ಪ್ರಮುಖ ರಾಜಕಾರಿಣಿಗಳು

|
Google Oneindia Kannada News

ಅಪಘಾತ ಎನ್ನುವುದು ಅನಿರೀಕ್ಷಿತವಾಗಿ, ಪೂರ್ವಯೋಜನೆಯಿಲ್ಲದೆ ನಡೆಯುವ ದುರ್ಘಟನೆ. ಇಂದಿನ ಅವಸರದ ಬದುಕಿನಿಂದಾಗಿ ಅಪಘಾತದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುತ್ತಿದೆ.

ಪ್ರತಿದಿನವೂ ಪ್ರಪಂಚದ ಒಂದಲ್ಲ ಒಂದು ಕಡೆ ಭೂ, ವಾಯು ಮತ್ತು ಜಲ ಸಾರಿಗೆಯ ಮೂಲಕ ಮನುಷ್ಯರ ಮತ್ತು ಯಂತ್ರಗಳ ನಿಯಂತ್ರಣ ತಪ್ಪಿ ಅಪಘಾತಗಳು ನಡೆಯುತ್ತಲೇ ಇರುತ್ತವೆ.

ಇತ್ತೀಚೆಗೆ ರಾಜ್ಯ ಕಂಡ ಅತ್ಯಂತ ಭೀಕರ ವಿಮಾನ ಅಪಘಾತವೆಂದರೆ ದುಬಾಯಿಯಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನವು ಪತನಗೊಂಡು 158 ಮಂದಿ ಸಾವನ್ನಪ್ಪಿದ್ದು.

ದೇಶದ ಅತಿ ಕೆಟ್ಟ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ನಮ್ಮ ಪ್ರಮುಖ ರಾಜಕಾರಿಣಿಗಳ ಪಟ್ಟಿ ಸ್ಲೈಡಿನಲ್ಲಿ..

ಸಂಜಯ್ ಗಾಂಧಿ

ಸಂಜಯ್ ಗಾಂಧಿ

23.06.1980 ಗಾಂಧಿ - ನೆಹರೂ ಕುಟುಂಬಕ್ಕೆ ಮತ್ತು ದೇಶಕ್ಕೆ ಅತ್ಯಂತ ಕರಾಳದಿನ. ಡೆಲ್ಲಿ ಫ್ಲೈಯಿಂಗ್ ಕ್ಲಬ್ಬಿನ ವಿಮಾನದಲ್ಲಿ ಸಂಜಯ್ ಗಾಂಧಿ ಪ್ರಯಾಣಿಸುತ್ತಿದ್ದಾಗ ನಿಯಂತ್ರಣ ತಪ್ಪಿ ದೆಹಲಿಯ ಸಫ್ದರ್ಜಂಗ್ ವಿಮಾನ ನಿಲ್ದಾಣದ ಬಳಿ ಧರೆಗುರುಳಿತು. ಸಂಜಯ್ ಗಾಂಧಿ ಜೊತೆ ಪ್ರಯಾಣಿಸುತ್ತಿದ್ದ ಕ್ಯಾಪ್ಟನ್ ಸುಭಾಷ್ ಸೆಕ್ಸೆನಾ ಕೂಡಾ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸಂಜಯ್ ಗಾಂಧಿ ಸಾವನ್ನಪ್ಪಿದಾಗ ಅವರ ಮಗ ವರುಣ್ ಗಾಂಧಿ ಮೂರು ತಿಂಗಳ ಮಗು

ಮಾಧವ್ ರಾವ್ ಸಿಂಧ್ಯಾ

ಮಾಧವ್ ರಾವ್ ಸಿಂಧ್ಯಾ

29.09.2001 ರಂದು ದೆಹಲಿಯಿಂದ ಕಾನ್ಪುರಕ್ಕೆ ಸಂಚರಿಸುತ್ತಿದ್ದಾಗ ಮಾಧವ್ ರಾವ್ ಸಿಂಧ್ಯಾ ಮತ್ತು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇತರ ಏಳು ಮಂದಿ ಮಣಿಪುರದ ಬಳಿ ವಿಮಾನಕ್ಕೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ಪ್ರತಿಕೂಲ ಹವಾಮಾನದಿಂದಾಗಿ ಸೆಸೆನಾ ಸಿ90 ವಿಮಾನ ನೆಲಕ್ಕುರುಳಿತ್ತು.

ಜಿ ಎಂ ಸಿ ಬಾಲಯೋಗಿ

ಜಿ ಎಂ ಸಿ ಬಾಲಯೋಗಿ

ಲೋಕಸಭಾ ಸ್ಪೀಕರ್ ಆಗಿದ್ದ ಗಂತಿ ಮೋಹನ ಚಂದ್ರ ಬಾಲಯೋಗಿ 03.03.2002 ತನ್ನ ಬೆಲ್ 206 ಹೆಲಿಕಾಪ್ಟರಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಾಪ್ಟರ್ ಪಶ್ಚಿಮ ಗೋದಾವರಿ ಜಿಲ್ಲೆಯ ಬಳಿ ನೆಲಕ್ಕುರುಳಿತ್ತು. ಬಾಲಯೋಗಿ ಬ್ರಹ್ಮಾವರಂನಿಂದ ಹೈದರಾಬಾದಿಗೆ ಪ್ರಯಾಣಿಸುತ್ತಿದ್ದರು.

ಓ ಪಿ ಜಿಂದಾಲ್

ಓ ಪಿ ಜಿಂದಾಲ್

ಹರ್ಯಾಣ ಸರಕಾರದಲ್ಲಿ ಇಂಧನ ಸಚಿವರಾಗಿದ್ದ ಜಿಂದಾಲ್ ಖ್ಯಾತ ಉದ್ಯಮಿ ಕೂಡಾ. 31.03.2005 ರಂದು ತನ್ನ ಖಾಸಾಗಿ ಹೆಲಿಕ್ಪಾಪ್ಟರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಜಿಂದಾಲ್ ದುರಂತ ಸಾವಿಗೀಡಾಗಿದ್ದರು.

ವೈ ಎಸ್ ರಾಜಶೇಖರ್ ರೆಡ್ಡಿ

ವೈ ಎಸ್ ರಾಜಶೇಖರ್ ರೆಡ್ಡಿ

ಆಂಧ್ರಪ್ರದೇಶ ಕಂಡ ಪ್ರಭಾವಿ ಮುಖ್ಯಮಂತ್ರಿಗಳಲೊಬ್ಬರು ರಾಜಶೇಖರ್ ರೆಡ್ಡಿ. ಸರಕಾರೀ ಕಾರ್ಯದ ನಿಮಿತ್ತ ಬೆಲ್ 430 ಕಾಪ್ಟರಿನಲ್ಲಿ 02.09.2009 ರಂದು ಪ್ರಯಾಣಿಸುತ್ತಿದ್ದಾಗ ಕರ್ನೂಲಿನಿಂದ 74 ಕಿ,ಮಿ ದೂರವಿರುವ ರುದ್ರಕೊಂಡ ಬೆಟ್ಟದಲ್ಲಿ ಕಾಪ್ಟರ್ ಪತನಗೊಂಡಿತ್ತು. ವೈಎಸ್ಆರ್ ಸೇರಿ ಇತರ ನಾಲ್ಕು ಅಧಿಕಾರಿಗಳೂ ಸಾವನ್ನಪ್ಪಿದ್ದರು.

ದೋರ್ಜಿ ಖಂಡು

ದೋರ್ಜಿ ಖಂಡು

ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಖಂಡು 30.04.2011 ರಂದು ಹೆಲಿಕಾಪ್ಟರ್ ಪತನಗೊಂಡು ದುರ್ಮರಣಕ್ಕೀಡಾದರು. ಪವನ್ ಹನ್ಸ್ ಹೆಲಿಕಾಪ್ಟರಿನಲ್ಲಿ ಪ್ರಯಾಣಿಸುತ್ತಿದ್ದ ಖಂಡು ತವಾಂಗ್ ನಿಂಡ ಇಟಾನಗರಿಗೆ ಸಂಚರಿಸುತ್ತಿದ್ದರು. ಇವರ ಜೊತೆ ಇನ್ನಿತರ ನಾಲ್ಕು ಮಂದಿ ಸಾವನ್ನಪ್ಪಿದ್ದರು.

ಮೋಹನ್ ಕುಮಾರಮಂಗಲಂ

ಮೋಹನ್ ಕುಮಾರಮಂಗಲಂ

ಕೇಂದ್ರದಲ್ಲಿ ರಾಜ್ಯ ಸಚಿವರಾಗಿದ್ದ ಕುಮಾರಮಂಗಲಂ ಪಾಂಡಿಚೇರಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಇಂದಿರಾ ಗಾಂಧಿ ಆಪ್ತ ಬಳಗದಲ್ಲಿ ಕಾಣಿಸಿಕೊಂಡಿದ್ದ ಕುಮಾರಮಂಗಲಂ 30.05.1973ರಲ್ಲಿ ನವದೆಹಲಿ ಬಳಿ ವಿಮಾನ ಅಪಘಾತದಲ್ಲಿ ದುರ್ಮರಣಕ್ಕೀಡಾದರು.

ಸುರೇಂದ್ರ ನಾಥ್

ಸುರೇಂದ್ರ ನಾಥ್

ಪಂಜಾಬಿನ ರಾಜ್ಯಪಾಲರಾಗಿದ್ದ ಸುರೇಂದ್ರ ನಾಥ್ 09.07.1994 ರಲ್ಲಿ ಭೂಂತಾರ್ ವಿಮಾನನಿಲ್ದಾಣದ ಬಳಿ ಸಾವನ್ನಪ್ಪಿದ್ದರು. ಇವರ ಜೊತೆ ಇವರ ಕುಟುಂಬದ ಹತ್ತು ಸದಸ್ಯರೂ ಕೂಡ ಮರಣಹೊಂದಿದರು. ವಾರಾಂತ್ಯದ ಪ್ರವಾಸಕ್ಕೆಂದು ಸುರೇಂದ್ರ ನಾಥ್ ಕುಟುಂಬದವರೊಂದಿಗೆ ಚಂಢೀಗಡದಿಂದ ಪ್ರಯಾಣಿಸುತ್ತಿದ್ದರು.

English summary
Top eight Indian politicians died in air crash. The details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X