ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಕಿರುಕುಳ: ಮತ್ತೆ ಐಗೇಟ್ ಫನೀಶ್ ಫಿನಿಶ್

By Srinath
|
Google Oneindia Kannada News

sexual harassment ex infy iGate CEO Phaneesh Murthy axed
ಕ್ಯಾಲಿಫೋರ್ನಿಯಾ, ಮೇ 21: ಐಗೇಟ್ ಕಂಪನಿಯ ಸಿಇಒ ಫಣೀಶ್ ಮೂರ್ತಿ ಅವರನ್ನು ಮತ್ತೆ ಕೆಲಸದಿಂದ ತೆಗೆದುಹಾಕಲಾಗಿದೆ. ಮತ್ತದೇ ಲೈಂಗಿಕ ಕಿರುಕುಳ ಅವರ ಬೆನ್ನುಹತ್ತಿ, ಉದ್ಯೋಗಕ್ಕೆ ಸಂಚಕಾರ ತಂದಿದೆ. ಫಣೀಶ್ ಮೂರ್ತಿ ಅವರನ್ನು ಸಿಇಒ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಸಂಸ್ಥೆ iGate Corp ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ಫೋಸಿಸ್ ಸಂಸ್ಥೆಗೆ ಭದ್ರ ಅಡಿಪಾಯ ಹಾಕಿ, ಪ್ರತಿಭೆಯಲ್ಲಿ ಎನ್ಆರ್ ನಾರಾಯಣ ಮೂರ್ತಿ ಅವರಿಗೆ ಸರಿಸಮವಾಗಿರುವ ಫಣೀಶ್, ಲೈಂಗಿಕ ದುರ್ವರ್ತನೆ ಪೀಡಿತರಾಗಿರುವುದು ದುರ್ದೈವವೇ ಸರಿ.

ಆರೋಪ ನಿರಾಕರಿಸಿದ ಫನೀಶ್: Araceli Roez ಎಂಬುವವರು ದೂರು ದಾಖಲಿಸಿದ್ದಾರೆ. ಆದರೆ ಅದರಲ್ಲಿ ಯಾವುದೇ ಹುರುಳಿಲ್ಲ. ಅವರ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಫಣೀಶ್ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಅಧೀನದಲ್ಲಿದ್ದ ಮಹಿಳಾ ಉದ್ಯೋಗಿಯ ಜತೆ ಸಂಬಂಧ ಹೊಂದಿರುವುದನ್ನು ಫಣೀಶ್ ಮೂರ್ತಿ ಅವರು ಆಡಳಿತ ಮಂಡಳಿಯ ಗಮನಕ್ಕೆ ತಂದಿರಲಿಲ್ಲ ಎಂಬುದು iGATE ಕಂಪನಿಯ ಆರೋಪವಾಗಿದೆ. ಫಣೀಶ್ ಮೂರ್ತಿ ಸ್ಥಾನಕ್ಕೆ ಗೆರಾರ್ಡ್ ವಾಜಿಂಜರ್ ಅವರನ್ನು ತಾತ್ಕಾಲಿಕವಾಗಿ ನೇಮಿಸಲಾಗಿದೆ. ಫಣೀಶ್ ಅವರನ್ನ ಸೇವೆಯಿಂದ ವಜಾಗೊಳಿಸಿದ್ದರೂ ಅವರಿಗೆ 65 ವರ್ಷವಾಗುವ ತನಕ ಪ್ರತೀ ತಿಂಗಳು 6 ಸಾವಿರ ಡಾಲರ್ (3 ಲಕ್ಷ 30 ಸಾವಿರ ರುಪಾಯಿ) ಹಣ ನೀಡಲು ಕಂಪನಿ ನಿರ್ಧರಿಸಿದೆ.

ಅಮೆರಿಕದ ನಾಸ್ಡಾಕ್ ಷೇರು ಕೇಂದ್ರದಲ್ಲಿ ನೋಂದಾವಣೆಗೊಂಡಿರುವ iGATE ಕಂಪನಿಯಲ್ಲಿ ಬಹುತೇಕ ಭಾರತೀಯರೇ ಉದ್ಯೋಗಿಗಳಾಗಿದ್ದಾರೆ.

English summary
sexual harassment ex infy iGate CEO Phaneesh Murthy axed.Following complaints of sexual harassment iGate removes president and CEO Phaneesh Murthy; appoints Gerhard Watzinger interim president and CEO. In the meanwhile Sacked igate chief Phaneesh Murthy denied charges against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X