ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಜೆಪಿ-ಬಿಜೆಪಿ ವಿಲೀನ ಸಾಧ್ಯತೆ: ಸಿಬಿಐ ಫಿಯರ್ ಫ್ಯಾಕ್ಟರ್

By Srinath
|
Google Oneindia Kannada News

yeddyurappa-kjp-bjp-merger-cbi-the-only-stumbling-block
ಬೆಂಗಳೂರು, ಮೇ 20: ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಆಡಳಿತ ಚುಕ್ಕಾಣಿ ಹಿಡಿದು 'ವಿಜೃಂಭಿಸಿದ್ದ' ಬಿಜೆಪಿ ತದನಂತರ ಹೀನಾಯ ಸೋಲುಂಡು 'ಎಕ್ಟಿಟ್' ಆಗಿರುವುದು ಆ ಪಕ್ಷದ ವರಿಷ್ಠರನ್ನು ತೀವ್ರ ನಿರಾಶೆಗೆ ದೂಡಿದೆ.

ಈ ಹಂತದಲ್ಲಿ 'ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಮ್ಮ ನಾಯಕರೇ. ಚುನಾವಣೆ ನಂತರ ಅವರು ಮತ್ತೆ ಬಿಜೆಪಿ ನಾಯಕತ್ವ ವಹಿಸಿಕೊಳ್ಳಬೇಕು' ಎಂಬ ಅವರ ಕಟ್ಟಾ ಬೆಂಬಲಿಗರ ಆಶಯಕ್ಕೆ ಹಿರಿಯ ನಾಯಕರೂ ಈಗ ಕೋರಸ್ ಹಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲವಾದರೂ ಪಕ್ಷದ ಹಾಲಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಯಡಿಯೂರಪ್ಪ ಬಗ್ಗೆ ಹೊಂದಿರುವ ಮೃಧು ಧೋರಣೆಯನ್ನು ಇನ್ನೂ ಪೋಷಿಸುತ್ತಿದ್ದಾರೆ ಎನ್ನಲಾಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ಬಿಜೆಪಿ ಮತ್ತೆ ಹೀನಾಯ ಸೋಲು ಕಂಡರೆ ಗತಿಯೇನು ಎಂಬ ಚಿಂತೆ ಅವರನ್ನು ತೀವ್ರವಾಗಿ ಬಾಧಿಸುತ್ತಿದೆ. ಹಾಗಾಗಿ ಮತ್ತೆ ಯಡಿಯೂರಪ್ಪಗೆ ಶರಣಾಗುವ ಮಾತನ್ನಾಡುತ್ತಿದ್ದಾರಂತೆ.

ಕುತೂಹಲದ ಸಂಗತಿಯೆಂದರೆ ಇದಕ್ಕೆ ಯಡಿಯೂರಪ್ಪ ಸಹ ಪೂರಕವಾಗಿ ಪ್ರತಿಕ್ರಿಯಿಸಿದ್ದಾರಂತೆ. ಆದರೆ

ಸಿಬಿಐ ಫಿಯರ್ ಫ್ಯಾಕ್ಟರ್: ಕೆಜೆಪಿ ಜತೆ ಕೈಜೋಡಿಸಲು ಬಿಜೆಪಿಗೆ ತೊಡರುಗಾಲು ಆಗುತ್ತಿರುವುದು ಇಡೀ ಪ್ರಪಂಚಕ್ಕೇ ತಿಳಿದಿರುವಂತೆ ಕಾಂಗ್ರೆಸ್ಸಿನ ಸಿಬಿಐ ಎಂಬ ಪಾಶುಪತಾಸ್ತ್ರ. 'ಸಿಬಿಐ ತೂಗುಕತ್ತಿ ಯಡಿಯೂರಪ್ಪ ನೆತ್ತಿ ಮೇಲೆ ತೂಗಾಡುತ್ತಲೇ ಇದೆ. ಒಂದು ವೇಳೆ ಬಿಜೆಪಿ-ಕೆಜೆಪಿ ಒಂದಾದರೆ ಲೋಕಸಭೆ ಚುನಾವಣೆ ವೇಳೆಗೆ ಸರಿಯಾಗಿ ಆ ತೂಗುಕತ್ತಿ ತುಂಡರಿಸಿಕೊಂಡು ಬಿದ್ದುಬಿಟ್ಟರೆ ಎಂಬ ಭಯ/ಆತಂಕ ಯಡಿಯೂರಪ್ಪ ಅವರನ್ನು ತೀವ್ರವಾಗಿ ಬಾಧಿಸುತ್ತಿದೆ. ಹಾಗಾಗಿ ಅವರು ಹಿಂದೇಟು ಹಾಕುತ್ತಿದ್ದಾರೆ' ಎನ್ನುತ್ತಾರೆ ಬಿಜೆಪಿಯ ಹಿರಿಯ ನಾಯಕರೊಬ್ಬರು.

ಹೀಗೆ ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟು, ಆ ವೇಳೆಗೆ ಹೇಗಾದರೂ ಮಾಡಿ ಮತ್ತೆ ಕರ್ನಾಟಕವನನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಹಪಹಪಿಸುತ್ತಿರುವುದು ಸರಿಯಷ್ಟೇ. ಆದರೆ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಪೀಡ್ ನೋಡಿದರೆ ಬಿಜೆಪಿ ಕರ್ನಾಟಕದ ಮೇಲೆ ಮತ್ತೆ ತನ್ನ ಹಿಡಿತ ಸಾಧಿಸಲಿದೆ ಎಂಬುವುದು ಗಗನಕುಸುಮವೇ ಸರಿ ಎನ್ನುತ್ತಾರೆ ಕಾಂಗ್ರೆಸ್ಸಿಗರು.

English summary
BS Yeddyurappa KJP BJP merger- CBI the only stumbling block. sources in the BJP said party president Rajnath Singh does not want a repeat of the recent debacle in the coming Lok Sabha elections and is planning to get BSY back on board. The only problem is that the Congress might use the cases against BSY to keep him at gunpoint for the next Lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X