ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ : ವಿಮಾನ ನಿಲ್ದಾಣದಿಂದಲೇ ವಜ್ರ ಕದ್ದ ಕಳ್ಳರು

|
Google Oneindia Kannada News

Diamond
ಮುಂಬೈ, ಮೇ 20 : ಅತ್ಯಂತ ಬಿಗಿ ಭದ್ರತೆಯ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಿನೀಮಯ ರೀತಿಯಲ್ಲಿ 4.5 ಕೋಟಿ ರೂ. ಬೆಲೆಬಾಳುವ ವ್ರಜದ ಪೊಟ್ಟಣವನ್ನು ಚಾಲಕಿ ಕಳ್ಳರು ಅಪಹರಿಸಿದ್ದು, ಆರೋಪಿಗಳ ಶೋಧಕ್ಕಾಗಿ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಿಂದ ಖಾಸಗಿ ಕಂಪನಿಯೊಂದು ಬೆಲ್ಜಿಯಂ ದೇಶಕ್ಕೆ 24 ಪೊಟ್ಟಣಗಳಲ್ಲಿ ವಜ್ರವನ್ನು ಸಾಗಿಸುತ್ತಿತ್ತು. ಇದರ ಸುಳಿವು ಅರಿತ ಕಳ್ಳರ ಗುಂಪು ರಣತಂತ್ರ ರೂಪಿಸಿ ವಿಮಾನ ನಿಲ್ದಾಣ ಪ್ರವೇಶಿಸಿದೆ. ಭದ್ರತಾ ಪಡೆಗಳ ಕಣ್ಣಿಗೂ ಮಣ್ಣೆರಚಿ ಕಾರ್ಮಿಕರ ಸೋಗಿನಲ್ಲಿ ಸುತ್ತಾಡಿ ವಜ್ರವಿರುವ ಸ್ಥಳ ಪತ್ತೆ ಹಚ್ಚಿದೆ.

ನಂತರ ಕೆಲವು ಕಳ್ಳರು ವಿಮಾನಗಳಿಗೆ ಸರಕರನ್ನು ತುಂಬುವ ಕಾರ್ಮಿಕರ ವೇಷ ಧರಿಸಿ ವಿಮಾನಕ್ಕೆ ಸರಕು ತುಂಬಲು ಪ್ರಾರಂಭಿಸಿದ್ದಾರೆ. ವಜ್ರವಿರುವ ಪೆಟ್ಟಿಗೆಯನ್ನು ವಿಮಾನಕ್ಕೆ ತುಂಬಿಸುವಾಗ ಅದರಲ್ಲಿದ್ದ, 4.5 ಕೋಟಿ ರೂ. ಬೆಲೆಬಾಳುವ ಒಂದು ಪೊಟ್ಟಣವನ್ನು ಅಪಹರಿಸಿದ್ದಾರೆ.

ವಜ್ರದ ಪೊಟ್ಟಣ ಅಪಹರಣ ಪ್ರಕರಣ ವಿಮಾನ ನಿಲ್ದಾಣ ಮತ್ತು ಸಹರಾ ಪೊಲೀಸರ ನಿದ್ದೆಗೆಡಿಸಿದ್ದು, ಆರೋಪಿಗಳಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ಅತ್ಯಂತ ಬಿಗಿ ಭದ್ರತೆಯ ಏರ್ ಪೋರ್ಟ್ ನಲ್ಲಿ ಭದ್ರತಾಪಡೆಗಳನ್ನು ವಂಚಿಸಿ ಕಳ್ಳರು ಹೇಗೆ ಪಲಾಯನ ಮಾಡಿರಬಹದು? ಎಂಬುದು ಪೊಲೀಸರಲ್ಲಿ ಕುತೂಹಲ ಮೂಡಿಸಿದೆ.

ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳ ಕೈವಾಡವೂ ಈ ಘಟನೆಯಲ್ಲಿ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಈಗಾಗಲೇ ನಾಲ್ವರು ಶಂಕಿತರನ್ನು ಸಹರಾ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಮಾನ ನಿಲ್ದಾಣದ ಅಧಿಕಾರಿಗಳು ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಈಗಾಗಲೇ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪಡೆದಿದ್ದು, ಆರೋಪಿಗಾಗಿ ಶೋಧ ಪ್ರಾರಂಭಿಸಿದ್ದಾರೆ.

English summary
Diamonds worth Rs 4.5 crore stolen from Mumbai airport. The Sahar police have registered a case against an unidentified person who had stolen a sachet containing diamonds. The police are inquiring about the suspect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X