ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡ್ವಾಣಿ ಭಾನುವಾರ ಬೆಂಗಳೂರಿಗೆ ಬಂದಿದ್ದು ಯಾಕೆ?

By Prasad
|
Google Oneindia Kannada News

Why was Advani in Bangalore on Sunday
ಬೆಂಗಳೂರು, ಮೇ. 20 : ಉಚ್ಚಾಟಿತ ಬಿಜೆಪಿ ಎಂಎಲ್‌ಸಿ, ಯಡಿಯೂರಪ್ಪ ಅವರು ಕಟ್ಟಾ ಅನುಯಾಯಿ ಲೆಹರ್ ಸಿಂಗ್ ಅವರಿಂದ ತೀವ್ರ ಟೀಕೆಗೆ ಗುರಿಯಾಗಿರುವ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಸದ್ದಿಲ್ಲದೆ ಭಾನುವಾರ ಬೆಂಗಳೂರಿಗೆ ಬಂದು ತೆರಳಿದ್ದಾರೆ.

ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಲ್ಲಿಗೆ ಬಂದಿದ್ದ ಅಡ್ವಾಣಿಯವರು, ಕರ್ನಾಟಕದಲ್ಲಿ ಸೋತ ಬಿಜೆಪಿಯ ಬಗ್ಗೆ, ಲೆಹರ್ ಸಿಂಗ್ ಅವರು ಮಾಡಿರುವ ಹಲವಾರು ಗಂಭೀರ ಆರೋಪಗಳ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿ ಪತ್ರಕರ್ತರನ್ನು ನಿರಾಶೆಗೊಳಿಸಿದರು.

8ನೇ ಶತಮಾನದಲ್ಲಿ ಅದ್ವೈತ ಸಿದ್ಧಾಂತವನ್ನು ಪ್ರಪಂಚದುದ್ದಕ್ಕೂ ಪಸರಿಸಿದ ಆಧ್ಯಾತ್ಮ ಗುರು ಆದಿ ಶಂಕರಾಚಾರ್ಯರ ಸಂದೇಶವನ್ನು ಸಾರಲು ಅರಮನೆ ಮೈದಾನದಲ್ಲಿ ವೇದಾಂತ ಭಾರತಿ ಸಂಸ್ಥೆ ಆಯೋಜಿಸಲಾಗಿದ್ದ 'ಆನಂದ ಸಿಂಧು' ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅವರು ಕೂಡ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಅಡ್ವಾಣಿ ಅವರು, ಜಾತಿ, ಪಂಗಡ, ಉಚ್ಚನೀಚಗಳ ಪರಿಧಿಯನ್ನು ಮೀರಿ ಜನರನ್ನು ಒಗ್ಗೂಡಿಸುವಲ್ಲಿ ಆಧ್ಯಾತ್ಮ ಜಾಗತಿಕವಾಗಿ ಪ್ರಮುಖ ಪಾತ್ರವಹಿಸಿದೆ. ಆದಿ ಶಂಕರರ ಸಂದೇಶ ಮನುಕುಲವನ್ನು ಒಂದು ಮಾಡುತ್ತದೆ ಎಂದರು. ಕಾರ್ಯಕ್ರಮದ ನಂತರ ಸಂಜೆಯೇ ಅವರು ದೆಹಲಿಗೆ ತೆರಳಿದರು.

English summary
Bharatiya Janata Party veteran leader L.K. Advani was in Bangalore on Sunday to attend a religious programme 'Ananda Sindhu' to spread messages of Adi Shankarayacharya organized by Vedanta Bharati. He avoided any interaction with the media and left for Delhi Sunday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X