ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಪ್ಪಿದ ಸಚಿವ ಸ್ಥಾನ, ಪರಿಷತ್ ಸದಸ್ಯರು ಗರಂ

|
Google Oneindia Kannada News

Motamma
ಬೆಂಗಳೂರು, ಮೇ 18 : ಕಗ್ಗಂಟಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟ ವಿಸ್ತರಣೆ ಸಮಸ್ಯೆ ಕೊನೆಗೂ ಬಗೆಹರಿದಿದೆ. ಇಪ್ಪತ್ತು ಮಂದಿ ಶಾಸಕರು ಸಂಪುಟ ದರ್ಜೆ ಸಚಿವರಾಗಿ ಮತ್ತು ಎಂಟು ಮಂದಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡಿಲ್ಲ ಎಂಬುದು ಪರಿಷತ್ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜಭವನದಲ್ಲಿ ನಡೆದ ಸಚಿವರ ಪ್ರಮಾಣ ವಚನ ಸಮಾರಂಭಕ್ಕೆ ವಿಧಾನಪರಿಷತ್ ಸದಸ್ಯರು ಗೈರು ಹಾಜರಾಗುವ ಮೂಲಕ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಸಚಿವಸ್ಥಾನ ಕೈ ತಪ್ಪಿದ ಪರಿಷತ್ ಸದಸ್ಯರು ನಾಳೆ ದೆಹಲಿಗೆ ಹೋಗುವ ನಿರ್ಧಾರ ಕೈಗೊಂಡಿದ್ದಾರೆ.(ನೂತನ ಸಚಿವರ ಪಟ್ಟಿ)

ವಿಧಾನಪರಿಷತ್ ಸದಸ್ಯರಾದ ವೀರಣ್ಣ ಮತ್ತೀಕಟ್ಟಿ ಮತ್ತು ಮೋಟಮ್ಮ ಅವರ ಹೆಸರುಗಳು ಸಚಿವರ ಪಟ್ಟಿಯಲ್ಲಿ ಮೊದಲು ಕಾಣಿಸಿಕೊಂಡಿತ್ತು. ಆದರೆ, ಹೈ ಕಮಾಂಡ್ ನಾಯಕರು ಅಂತಿಮಗೊಳಿಸಿರುವ ಪಟ್ಟಿಯಲ್ಲಿ ಪರಿಷತ್ ಸದಸ್ಯರ ಹೆಸರುಗಳನ್ನು ಕೈ ಬಿಡಲಾಗಿದೆ. (ಹತ್ತು ಜಿಲ್ಲೆಗಳಿಗೆ ಸಚಿವ ಸ್ಥಾನವಿಲ್ಲ)

ಇದರಿಂದ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದವರು ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದ ದೂರವುಳಿದರು. ಹೈ ಮಾಂಡ್ ನಾಯಕರ ಜೊತೆ ಚರ್ಚಿಸಲು ಈ ನಾಯಕರು ನಾಳೆ ದೆಹಲಿಗೆ ತೆರೆಳುವುದಾಗಿಯೂ ಹೇಳಿದ್ದಾರೆ. ರಾಜ್ಯ ನಾಯಕರು ಇವರನ್ನು ಸಮಾಧಾನ ಪಡಿಸುತ್ತಾರೆಯೇ ಅಥವ ಇವರು ದೆಹಲಿಗೆ ತೆರಳುತ್ತಾರೆಯೇ ಎಂಬ ಪ್ರಶ್ನೆಗೆ ನಾಳೆ ಉತ್ತರ ದೊರೆಯಲಿದೆ.

ಶಾಸಕರು ಗೈರು : ಪಕ್ಷದ ಪ್ರಭಾವಿ ಮುಖಂಡ ಡಿ.ಕೆ.ಶಿವಕುಮಾರ್ ದೆಹಲಿಯಲ್ಲೇ ಉಳಿದಿದ್ದು ಅವರು ಪ್ರಮಾಣ ವಚನ ಸಮಾರಂಭದಿಂದ ದೂರವುಳಿದರು. ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ಮತ್ತು ಸಾಗರ ಕ್ಷೇತ್ರದ ಶಾಸಕ ಕಾಗೋಡು ತಿಮ್ಮಪ್ಪ ಸಹ ಸಚಿವ ಸ್ಥಾನ ಕೈ ತಪ್ಪಿದ್ದರಿಂದ ರಾಜಭವನಕ್ಕೆ ಆಗಮಿಸಲಿಲ್ಲ.

English summary
Legislative council members did not join Siddaramaiah cabinet. Legislative council members Motamma and Veeranna Mattikatti wish to join cabinet. But in the final list any Legislative council members did not join cabinet. So council members decided to meet AICC president Sonia Gandhi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X