ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಸಂಪುಟ ವಿಸ್ತರಣೆ ಸಮಾರಂಭ

|
Google Oneindia Kannada News

H.R. Bhardwaj
ಬೆಂಗಳೂರು, ಮೇ 18 : ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟಕ್ಕೆ ಇಂದು 28 ಸಚಿವರು ಸೇರ್ಪಡೆಗೊಂಡರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಹೆಚ್.ಆರ್.ಭಾರದ್ವಾಜ್ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿಸದರು.

ಶನಿವಾರ ಬೆಳಗ್ಗೆ 10.35ಕ್ಕೆ ಪ್ರಮಾಣವಚನ ಸ್ವೀಕಾರ ಸಮಾರಂಭವ ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾಯಿತು. ನಂತರ ರಾಜ್ಯಪಾಲರ ಅನುಮತಿ ಪಡೆದು ಸಚಿವರ ಪ್ರಮಾಣ ವಚನ ಸಮಾರಂಭ ಪ್ರಾರಂಭಿಸಲಾಯಿತು. ಐವರು ಸಚಿವರಿಗೆ ಒಟ್ಟಾಗಿ ರಾಜ್ಯಪಾಲರು ಪ್ರಮಾಣ ವಚನ ಭೋಧಿಸಿದರು. 20 ಶಾಸಕರು ಸಂಪುಟ ದರ್ಜೆ ಸಚಿವರಾಗಿ ಮತ್ತು ಎಂಟು ಜನರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು, ಸಚಿವರಾಗಿ ಪ್ರಮಾಣವಚವ ಸ್ವೀಕರಿಸಿದ ಶಾಸಕರ ಕುಟುಂಬ ಸದಸ್ಯರು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇಂದು ಪ್ರಮಾಣ ವಚನ ಸ್ವೀಕರಿಸಿದ ಸಚಿವರ ಪಟ್ಟಿ

ಸಂಪುಟ ದರ್ಜೆ ಸಚಿವರು

* ಆರ್.ವಿ.ದೇಶಪಾಂಡೆ- ಹಳಿಯಾಳ
* ಖಮರುಲ್ ಇಸ್ಲಾಂ - ಗುಲ್ಬರ್ಗ ಉತ್ತರ
* ಪ್ರಕಾಶ್ ಹುಕ್ಕೇರಿ - ಚಿಕ್ಕೋಡಿ - ಸದಲಗಾ
* ರಾಮಲಿಂಗಾರೆಡ್ಡಿ - ಬಿ.ಟಿ.ಎಂ. ಲೇಔಟ್
* ಟಿ.ಬಿ.ಜಯಚಂದ್ರ- ಶಿರಾ
* ರಮಾನಾಥ ರೈ - ಬಂಟ್ವಾಳ
* ಎಚ್.ಕೆ.ಪಾಟೀಲ- ಗದಗ
* ಶಾಮನೂರು ಶಿವಶಂಕರಪ್ಪ- ದಾವಣಗೆರೆ ದಕ್ಷಿಣ
* ವಿ.ಶ್ರೀನಿವಾಸ ಪ್ರಸಾದ್ - ನಂಜನಗೂಡು
* ಡಾ.ಎಚ್.ಸಿ.ಮಹದೇವಪ್ಪ - ಟಿ.ನರಸೀಪುರ
* ಕೆ.ಜೆ.ಜಾರ್ಜ್ - ಸರ್ವಜ್ಞನಗರ
* ಎಚ್.ಎಸ್.ಮಹದೇವಪ್ರಸಾದ್ - ಗುಂಡ್ಲುಪೇಟೆ
* ಅಂಬರೀಷ್ - ಮಂಡ್ಯ
* ವಿನಯಕುಮಾರ ಸೊರಕೆ - ಕಾಪು
* ಬಾಬುರಾವ್ ಚಿಂಚನಸೂರ - ಗುರುಮಠಕಲ್
* ಯು.ಟಿ.ಖಾದರ್ - ಮಂಗಳೂರು
* ಸತೀಶ ಜಾರಕಿಹೊಳಿ - ಯಮಕನಮರಡಿ
* ಎಂ.ಬಿ.ಪಾಟೀಲ - ಬಬಲೇಶ್ವರ
* ಎಚ್.ಆಂಜನೇಯ - ಹೊಳಲ್ಕೆರೆ
* ಶಿವರಾಜ ತಂಗಡಗಿ - ಕನಕಗಿರಿ

ರಾಜ್ಯ ಸಚಿವರು

* ಅಭಯಚಂದ್ರ ಜೈನ್ - ಮೂಡಬಿದರೆ
* ದಿನೇಶ್ ಗುಂಡೂರಾವ್ - ಗಾಂಧಿನಗರ
* ಕೃಷ್ಣಬೈರೇಗೌಡ - ಬ್ಯಾಟರಾಯನಪುರ
* ಶರಣಪ್ರಕಾಶ್ ಪಾಟೀಲ - ಸೇಡಂ
* ಸಂತೋಷ್ ಲಾಡ್ - ಕಲಘಟಗಿ
* ಕಿಮ್ಮನೆ ರತ್ನಾಕರ - ತೀರ್ಥಹಳ್ಳಿ
* ಉಮಾಶ್ರೀ - ತೇರದಾಳ
* ಪಿ.ಟಿ.ಪರಮೇಶ್ವರ್ ನಾಯ್ಕ - ಹೂವಿನಹಡಗಲಿ [ಭುಗಿಲೆದ್ದ ಅಸಮಾಧಾನ]

English summary
The newly elected Karnataka Chief Minister, Siddaramaiah, on Saturday(May.18) inducted 28 new ministers into his cabinet. Governor H.R. Bhardwaj administered the oath of office and secrecy to the new ministers in a function held at the Raj Bhavan, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X