ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯಾ : ಅತ್ಯಾಚಾರಿಗೆ 45 ವರ್ಷ ಜೈಲು ಶಿಕ್ಷೆ

|
Google Oneindia Kannada News

jail
ಮೆಲ್ಬೋರ್ನ್, ಮೇ 17 : ಭಾರತೀಯ ಮೂಲದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದ ಆರೋಪಿಗೆ ಆಸ್ಟ್ರೇಲಿಯಾ ನ್ಯಾಯಾಲಯ 45 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಈ ಮೂಲಕ ವಿದ್ಯಾಭ್ಯಾಸ ಮಾಡಲು ವಿದೇಶಕ್ಕೆ ತೆರಳಿ ಕಾಮಾಂಧನ ಕಣ್ಣಿಗೆ ಬಿದ್ದು, ಸಾವನ್ನಪ್ಪಿದ ಯುವತಿಯ ಆತ್ಮಕ್ಕೆ ಶಾಂತಿ ದೊರಕಿಸಿದ್ದಾರೆ.

ಡೇನಿಯಲ್ ಸ್ಟ್ಯಾನಿ ಜೈಲು ಶಿಕ್ಷೆ ಅನುಭವಿಸಿದ ಆರೋಪಿಯಾಗಿದ್ದು, ಈತ 2011ರಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಡೇನಿಯಲ್ ತೋಷಾ ತಕ್ಕರ್ ಮೇಲೆ ಅತ್ಯಾಚಾರ ನಡೆಸಿ, ಕೇಬಲ್ ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ಶವವನ್ನು ಸೂಟ್‌ಕೇಸ್‌ನಲ್ಲಿಟ್ಟು ಕಾಲುವೆಗೆ ಎಸೆದಿದ್ದ.

ಕ್ರೂರ ಕೆಲಸ ಮಾಡಿದ ಕಾಮಾಂಧನಿಗೆ ಸರಿಯಾದ ಶಿಕ್ಷೆ ನೀಡಿರುವ ನ್ಯೂ ಸೌತ್‌ವೇಲ್ಸ್ ಸರ್ವೋಚ್ಛ ನ್ಯಾಯಾಲಯ, ೪೫ ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ೩೦ ವರ್ಷಗಳ ಕಾಲ ಆರೋಪಿಗೆ ಪೆರೋಲ್ ನೀಡುವಂತಿಲ್ಲ ಎಂದು ತೀರ್ಪು ನೀಡಿದೆ.

ಘಟನೆ ಏನು : ಉತ್ತರ ಭಾರತ ಮೂಲದವರಾದ ಡೇನಿಯಲ್ ತೋಷಾ ತಕ್ಕರ್ ಸಿಡ್ನಿಗೆ ಉನ್ನತ ವ್ಯಾಸಂಗ ಮಾಡಲು ತೆರಳಿದ್ದರು. ಇವರ ಸಹಪಾಠಿಯಾಗಿದ್ದ ಆರೋಪಿ ತೋಪಾ ತಕ್ಕರ್ ಅವರು ವಾಸಿಸುತ್ತಿದ್ದ ಎಡ್ವಿನ್‌ಸ್ಟ್ರೀಟ್‌ ಅಪಾರ್ಟ್ ಮೆಂಟ್ ನಲ್ಲಿಯೇ ವಾಸವಾಗಿದ್ದ.

ಒಂದು ದಿನ ತಕ್ಕರ್ ಮನಗೆ ನುಗ್ಗಿದ ಆರೋಪಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ಪೊಲೀಸರಿಗೆ ದೂರು ನೀಡುತ್ತೇನೆ ಎಂದು ತಕ್ಕರ್ ಹೇಳಿದಾಗ, ಕೋಪಗೊಂದ ಆತ ಕೇಬಲ್ ವೈರ್ ನಿಂದ ಕುತ್ತಿಗೆಗೆ ಬಿಗಿದು ತಕ್ಕರ್ ಳನ್ನು ಹತ್ಯೆ ಮಾಡಿದ್ದ.

ನಂತರ ಸೂಟ್‌ಕೇಸ್‌ನಲ್ಲಿ ಶವವಿಟ್ಟು ಕಾಲುವೆಗೆ ಎಸೆದಿದ್ದ ಕಾಲುವೆಯಲ್ಲಿ ದೊರೆತ ಶವವನ್ನು ಪರೀಕ್ಷಿಸಿದ ಪೊಲೀಸರು ತನಿಖೆ ಕೈಗೊಂಡು ಆರೋಪಿ ಡೇನಿಯಲ್ ರನ್ನು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯ ಪೈಶಾಚಿಕ ಕೃತ್ಯವನ್ನು ಖಂಡಿಸಿದೆ.

ಇಂತಹ ವ್ಯಕ್ತಿಯನ್ನು ಸಮಾಜದಲ್ಲಿ ಬಾಳಲು ಬಿಡುವುದು ತಪ್ಪು ಎಂದು ಅಭಿಪ್ರಾಯಪಟ್ಟು 45 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮತ್ತು ಮೂವತ್ತು ವರ್ಷ ಪರೋಲ್ ಮೇಲೆಯೂ ಹೊರಬರುವಂತಿಲ್ಲ ಎಂದು ತೀರ್ಪು ನೀಡಿ ಕಾಮುಕರಿಗೆ ಸರಿಯಾದ ಎಚ್ಚರಿಕೆ ನೀಡಿದೆ.

English summary
A 21-year-old Australian man was today sentenced to 45 years in jail with a minimum non-parole period of 30 years for the "planned and premeditated" rape and murder of Indian student Tosha Thakkar, who he strangled to death, stuffed into a suitcase and dumped in a canal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X