ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾಚ್ ಫಿಕ್ಸಿಂಗ್: ಶ್ರೀಶಾಂತ್ ಸೇರಿ ಮೂವರ ಬಂಧನ

|
Google Oneindia Kannada News

Sreesanth
ಮುಂಬೈ, ಮೇ 16 : ಐಪಿಎಲ್ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಿದ ಆರೋಪದ ಮೇಲೆ ಕ್ರಿಕೆಟಿಗ ಎಸ್.ಶ್ರೀಶಾಂತ್ ಸೇರಿದಂತೆ ಮೂವರು ಆಟಗಾರರನ್ನು ನವದೆಹಲಿ ಪೊಲೀಸರು ಗುರುವಾರ ಬೆಳಗ್ಗೆ ಮುಂಬೈನಲ್ಲಿ ಬಂಧಿಸಿದ್ದಾರೆ. ಸ್ಪಾಟ್ ಫಿಕ್ಸಿಂಗ್ ಶ್ರೀಶಾಂತ್ ಸೇರಿದಂತೆ ರಾಜಸ್ಥಾನ್ ರಾಯಲ್ಸ್ ತಂಡದ ಮೂವರು ಆಟಗಾರರನ್ನು ಬಂಧಿಸಲಾಗಿದೆ.

ಐಪಿಎಲ್ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಿದ ಆರೋಪದ ಮೇಲೆ ರಾಜಸ್ಥಾನ್ ರಾಯಲ್ಸ್ ತಂಡದ ಅಜಿತ್ ಚಂಡಿಲಾ, ಅಂಕಿತ್ ಚೌವ್ಹಾಣ್ ಮತ್ತು ಎಸ್.ಶ್ರೀಶಾಂತ್ ಅವರನ್ನು ಇಂದು ಬೆಳಗ್ಗೆ 2.30ರ ಸುಮಾರಿಗೆ ಮುಂಬೈನಲ್ಲಿ ಬಂಧಿಸಲಾಗಿದೆ. ಮುಂಬೈ, ಅಹಮದಾಬಾದ್ ಮತ್ತು ದೆಹಲಿಯಲ್ಲಿ ದಾಳಿ ನಡೆಸಿದ ಪೊಲೀಸರು ಆಟಗಾರರನ್ನು ಬಂಧಿಸಿದ್ದಾರೆ.

ಸ್ಪಾಟ್ ಫಿಕ್ಸಿಂಗ್ ಗೆ ಸಹಕರಿಸುತ್ತಿದ್ದ ಏಳುಮಂದಿ ಬುಕ್ಕಿಗಳನ್ನು ದಾಳಿಯ ವೇಳೆ ವಶಕ್ಕೆ ಪಡೆಯಲಾಗಿದೆ. ಬಂಧಿತರ ವಿಚಾರಣೆ ನಡೆಸುತ್ತಿರುವ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ತಂಡದ ಆಟಗಾರರ ಬಂಧನದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ರಾಜಸ್ಥಾನ್ ರಾಯಲ್ಸ್ ತಂಡದ ಒಡತಿ ಶಿಲ್ಪಾಶೆಟ್ಟಿ ನಿರಾಕರಿಸಿದ್ದಾರೆ.

ಬುಕ್ಕಿಗಳು ಶ್ರೀಶಾಂತ್ ಸೇರಿದಂತೆ ಮೂವರು ಆಟಗಾರರಿಗೆ 40 ಬಾರಿ ದೂರವಾಣಿ ಕರೆ ಮಾಡಿದ್ದಾರೆ ಎಂಬ ಮಾಹಿತಿಗಳು ಪೊಲೀಸರಿಗೆ ಲಭ್ಯವಾಗಿದೆ. ಇನ್ನೂ ಇಬ್ಬರು ಬುಕ್ಕಿಗಳು ತಲೆಮರಿಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ರಾಜಸ್ಥಾನ್ ತಂಡದ ಮ್ಯಾನೇಜರ್ ಅವರನ್ನು ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ತನಿಖೆಗೆ ಸಹಕಾರ : ತಂಡದ ಮೂವರು ಆಟಗಾರರನ್ನು ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಬಂಧಿಸಿರುವ ಬಗ್ಗೆ ಪ್ರತಿಕಾ ಹೇಳಿಕೆ ಬಿಡುಗಡ ಮಾಡಿರುವ ರಾಜಸ್ಥಾನ್ ರಾಯಲ್ಸ್ ತಂಡದ ಅಧಿಕಾರಿಗಳು ತನಿಖೆಗೆ ತಂಡದ ವತಿಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ತಿಳಿಸಿದೆ.

ಬಂಧಿತ ಚೌವ್ಹಾಣ್ ಮೊದಲ ಬಾರಿಗೆ ಐಪಿಎಲ್ ಪಂದ್ಯದಲ್ಲಿ ಆಡುತ್ತಿದ್ದರು. ಮುಂಬೈ ಮೂಲದವರಾದ ಚೌವ್ಹಾಣ್ ರನ್ನು ರಾಜಸ್ಥಾನ್ ರಾಯಲ್ಸ್ ತಂಡ ಖರೀದಿಸಿತ್ತು.

ಓವರ್ ಗೆ 60 ಲಕ್ಷ : ಸ್ಟಾಟ್ ಫಿಕ್ಸಿಂಗ್ ಹಗರಣದ ಬಗ್ಗೆ ಮಹತ್ವದ ಮಾಹಿತಿ ನೀಡಿರುವ ಪೊಲೀಸರು ಒಂದು ಓವರ್ ಗೆ ಆಟಗಾರರಿಗೆ ಬುಕ್ಕಿಗಳು 60 ಲಕ್ಷ ರೂ. ಹಣ ನೀಡುತ್ತಿದ್ದರು ಎಂದು ಹೇಳಿದ್ದಾರೆ. ಒಂದು ಓವರ್ ನಲ್ಲಿ 20 ರನ್ ನೀಡಿದರೆ ಅಂತಹ ಆಟಗಾರರಿಗೆ 60 ಲಕ್ಷ ಹಣ ನೀಡಲಾಗುತ್ತಿತ್ತು ಎಂದು ಬಂಧಿತ ಬುಕ್ಕಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

English summary
In a sensational development, Indian paceman S Sreesanth and two of his Rajasthan Royals teammates Ajit Chandila and Ankeet Chavan were arrested by the Delhi police on the charges of spot fixing in the ongoing Indian Premier League.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X