ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಲೇಶ್ವರಂ ಬಾಂಬ್ ಬ್ಲಾಸ್ಟ್, ಸ್ಪೋಟಕಗಳು ಪತ್ತೆ

|
Google Oneindia Kannada News

explosives
ಬೆಂಗಳೂರು, ಮೇ 15 : ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ಪ್ರಬಲವಾದ ಸ್ಪೋಟ ನಡೆಸಲು ಸಂಚು ರೂಪಿಸಲಾಗಿತ್ತು ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಕೊಯಮತ್ತೂರಿನಲ್ಲಿ ಬಂಧಿಸಲಾದ ಶಂಕಿತ ಉಗ್ರರ ಮನೆಯಿಂದ ಭಾರೀ ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಉಗ್ರರ ಹೇಳಿಕೆಗೆ ಆಧಾರ ಲಭ್ಯವಾಗಿದೆ.

ಬೆಂಗಳೂರು ಬಾಂಬ್ ಸ್ಫೋಟದ ತನಿಖೆಯನ್ನು ತೀವ್ರ ಗತಿಯಲ್ಲಿ ಮುಂದುವರೆಸಿರುವ ಬೆಂಗಳೂರು ಪೊಲೀಸರು, ಮಂಗಳವಾರ ಕೊಯಮತ್ತೂರಿನ ಶಂಕಿತ ಉಗ್ರರ ನಿವಾಸಗಳ ಮೇಲೆ ದಾಳಿ ನಡೆಸಿ ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.

ಶಂಕಿತ ಮೂವರು ಉಗ್ರರ ನಿವಾಸಗಳಿಂದ ಪೊಲೀಸರು ಇಪ್ಪತ್ತು ಜಿಲೆಟಿನ್ ಕಡ್ಡಿಗಳು ಮತ್ತು ಹಲವಾರು ಕೆಜಿ ಸ್ಪೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಪ್ರಬಲವಾದ ಸ್ಪೋಟ ನಡೆಸಲು ಈ ಸ್ಪೋಟಕಗಳನ್ನು ಸಂಗ್ರಹಿಸಲಾಗಿತ್ತು ಎಂದು ವಿಚಾರಣೆ ವೇಳೆ ಬಂಧಿತರು ಒಪ್ಪಿಕೊಂಡಿದ್ದಾರೆ.

ಒಬ್ಬ ಬಂಧಿತ ಉಗ್ರನ ಜೊತೆ ಕೊಯಮತ್ತೂರಿಗೆ ತೆರಳಿದ್ದ ಬೆಂಗಳೂರು ಪೊಲೀಸರು ಭಾರೀ ಸ್ಪೋಟಗಳ ಸಮೇತ ಬೆಂಗಳೂರಿಗೆ ಮರಳಿದ್ದಾರೆ. ವಿಚಾರಣೆ ಪ್ರಗತಿಯಲ್ಲಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.

ಏ.17ರಂದು ಬಿಜೆಪಿ ಕಚೇರಿ ಬಳಿ ಪ್ರಬಲ ಬಾಂಬ್ ಸ್ಪೋಟ ನಡೆಸಲು ಯೋಜನೆ ರೂಪಿಸಿದ್ದೇವು. ಆದರೆ, ಸ್ಪೋಟಕಗಳನ್ನು ಸಾಗಿಸಲು ಕೊನೆ ಕ್ಷಣದಲ್ಲಿ ಅಡಚಣೆ ಉಂಟಾಯಿತು. ಆದ್ದರಿಂದ ಇದ್ದಷ್ಟೆ ಸ್ಪೋಟಕ ಬಳಸಿದೆವು ಎಂದು ಬಂಧಿತ ಉಗ್ರರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿಯ ಬಾಂಬ್ ಸ್ಫೋಟದ ತೀವ್ರತೆಯಿಂದಾಗಿ ಹದಿನೇಳು ಮಂದಿ ಗಾಯಗೊಂಡಿದ್ದರು. ಕೆಲವು ಗಾಯಾಳುಗಳು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಪ್ರಬಲವಾದ ಸ್ಪೋಟ ನಡೆಸಲು ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿ ನಿಜಕ್ಕೂ ಬೆಚ್ಚಿ ಬೀಳಿಸಿದೆ.

ಮತ್ತೊಬ್ಬ ಆರೋಪಿ ಬಂಧನ :
ಮಲ್ಲೇಶ್ವರಂ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕುನ್ನಂಕುಳಂನಲ್ಲಿ ಶನಿವಾರ ಬಂಧಿಸಲಾದ ಮತ್ತೊಬ್ಬ ಶಂಕಿತ ಆರೋಪಿಯನ್ನು ಬೆಂಗಳೂರಿಗೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಟ್ಟಾರೆ ಬಾಂಬ್ ಸ್ಪೋಟ ಪ್ರಕರಣದ ತನಿಖೆಯನ್ನು ಪೊಲೀಸರು ತ್ವರಿತಗತಿಯಲ್ಲಿ ಮುಂದುವರೆಸಿದ್ದಾರೆ. ಸ್ಪೋಟಕ್ಕೆ ಸಂಬಂಧಿಸಿದಂತೆ ಇದುವರೆಗೂ 10ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.

English summary
Special police team from Karnataka recovered explosives, including gelatin sticks from Coimbatore city on Tuesday, May 14. following inputs provided by an accused in the April 17 bomb blast near the BJP headquarters in Bangalore. police recovered explosives from two places around the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X