ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಾರಾತ್ಮಕ ಮತದಾನಕ್ಕೆ ಹೊಸ ವ್ಯವಸ್ಥೆ

|
Google Oneindia Kannada News

election
ನವದೆಹಲಿ, ಮೇ 15 : ಇಂದಿನ ಕೆಲವು ರಾಜಕಾರಣಿಗಳು ಭ್ರಷ್ಟರಾಗಿದ್ದಾರೆ, ಚುನಾವಣೆಯಲ್ಲಿ ಯಾವ ಅಭ್ಯರ್ಥಿಗೂ ಮತ ನೀಡಲು ನನಗೆ ಇಷ್ಟವಿಲ್ಲ ಎನ್ನುವವರಿಗೆ ಸಿಹಿ ಸುದ್ದಿ. ವಿದ್ಯುನ್ಮಾನ ಮತಯಂತ್ರದಲ್ಲಿಯೇ ನಕಾರಾತ್ಮಕ ಮತದಾನದಕ್ಕೆ ಅವಕಾಶ ನೀಡುವ ವ್ಯವಸ್ಥೆ ಜಾರಿಗೊಳಿಸುವುದಾಗಿ ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಮತಗಟ್ಟೆಗೆ ಬಂದ ಮತದಾರರು ನಕಾರಾತ್ಮಕ ಮತದಾನ ಮಾಡಲು ಅವಕಾಶ ನೀಡಲು ಮತಯಂತ್ರದಲ್ಲಿಯೇ ಪ್ರತ್ಯೇಕ ಬಟನ್ ಅಳವಡಿಸಲಾಗುತ್ತದೆ. ಈ ವ್ಯವಸ್ಥೆ ಜಾರಿಗೊಳಿಸಲು ಆಯೋಗ ಸಿದ್ಧತೆ ಆರಂಭಿಸಿದೆ.

ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಈ ವ್ಯವಸ್ಥೆ ದೇಶದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ.

ಮತದಾನದ ವೇಳೆಯಲ್ಲಿ ನಕಾರಾತ್ಮಕ ಮತದಾನಕ್ಕೆ ಅವಕಾಶ ಕಲ್ಪಿಸಬೇಕೆಂದು ಕೋರಿ ಪೀಪಲ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ ಸಂಸ್ಥೆ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮತಯಂತ್ರ (ಇವಿಎಮ್) ನಲ್ಲಿಯೇ ನಕಾರಾತ್ಮಕ ಮತದಾನಕ್ಕೆ ಅವಕಾಶ ಕಲ್ಪಿಸಲು ಸಾಧ್ಯವೇ ? ವಿವರಣೆ ನೀಡಿ ಎಂದು ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.

ಬುಧವಾರ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿರುವ ಕೇಂದ್ರ ಚುನಾವಣಾ ಆಯೋಗ, ಎಲ್ಲಾ ಚುನಾವಣೆಗಳಲ್ಲೂ ನಕಾರಾತ್ಮಕ ಮತ ಚಲಾಯಿಸಲು ಈಗಾಗಲೇ ಅವಕಾಶ ಕಲ್ಪಿಸಲಾಗಿದೆ.

ಮತಗಟ್ಟೆಗೆ ಬಂದ ಮತದಾರರು ಫಾರಂ ೧೭ಎ ಪಡೆದು ಯಾವ ಅಭ್ಯರ್ಥಿಗೂ ಮತದಾನ ಮಾಡಲು ಇಷ್ಟವಿಲ್ಲ ಎಂದು ಬರೆದು ಕೊಡಬಹುದು. ಮತಯಂತ್ರದಲ್ಲೇ ನಕಾರಾತ್ಮಕ ಮತದಾನಕ್ಕೆ ಅವಕಾಶ ಕಲ್ಪಿಸಲು ಪ್ರತ್ಯೇಕ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಹೇಳಿದೆ.

ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿರುವುದರಿಂದ ಈ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ಬರುವ ಸಾಧ್ಯತೆ ಇದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವ ಅಭ್ಯರ್ಥಿಯೂ ನಿಮಗೆ ಯೋಗ್ಯ ಎಂದು ಅನ್ನಿಸದಿದ್ದರೆ, ನೀವು ನಕಾರಾತ್ಮಕ ಮತದಾನ ಮಾಡಬಹುದು.

(ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ?)

English summary
In election you doesn't want to vote for anyone candidate, you can press single button in voting machine. Central Election Commission will introduce this system from upcoming Lok Sabha election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X