ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣಮಠದ ಮೇಲೆ ಮಠಾಧೀಶರ ಪಾರುಪತ್ಯ ಅಂತ್ಯ?

By ಬಾಲರಾಜ್ ತಂತ್ರಿ
|
Google Oneindia Kannada News

ಉಳ್ಳಾಲದಿಂದ ಮಲ್ಪೆಯವರೆಗೆ 'ಕಾಂಗ್ರೆಸ್ ನಡಿಗೆ ಜನರ ಕಡೆಗೆ' ಪಾದಯಾತ್ರೆಯ ವೇಳೆ ಉಡುಪಿ ಯುವ ಕಾಂಗ್ರೆಸ್ ಮುಖಂಡರಿಗೆ ಸಿದ್ದರಾಮಯ್ಯ ಹೇಳಿದ್ದ ಹೇಳಿಕೆಯನ್ನು ಒಮ್ಮೆ ಅವಲೋಕಿಸೋಣ. ಸಿದ್ದು ಅಂದಿನ ಹೇಳಿಕೆಗೆ ಬದ್ದರಾಗಿದ್ದರೆ ಉಡುಪಿ ಕೃಷ್ಣಮಠದ ಮೇಲೆ ಮಠಾಧೀಶರಿಗಿರುವ ಪಾರುಪತ್ಯ ಅಂತ್ಯಕ್ಕೆ ದಿನಗಣನೆ ಆರಂಭವಾಗಲಿದೆಯೇ?.

ನಾನು ಮುಖ್ಯಮಂತ್ರಿಯಾದರೆ ನನ್ನ ಮೊದಲ ಆದ್ಯತೆ ಕೃಷ್ಣಮಠವನ್ನು ಮುಜರಾಯಿ ವ್ಯಾಪ್ತಿಗೆ ತರುವುದು ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿ ಉಡುಪಿಯ ಮಾಧ್ವ ಪೀಠವನ್ನು ಎಚ್ಚರಿಸಿದ್ದರು. ಈಗ ಸಿದ್ದು ರಾಜ್ಯದ 28ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಸಿದ್ದು ಮತ್ತು ಅಷ್ಟಮಠಾಧೀಷರ ಮುಂದಿನ ನಡೆಯೇನು ಎನ್ನುವುದು ಕುತೂಹಲದ ಸಂಗತಿ.

2006ರಲ್ಲಿ ಸಿದ್ದರಾಮಯ್ಯ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ನಂತರ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆ ಡಿಸೆಂಬರ್ ಆರರಂದು ನಡೆದಿತ್ತು. ಚುನಾವಣೆಗೆ ಒಂದು ದಿನ್ನ ಮುನ್ನ ಸಿದ್ದರಾಮಯ್ಯ ಬೆಂಗಳೂರಿನ ವಿದ್ಯಾಪೀಠದಲ್ಲಿ ಉಡುಪಿ ಪೇಜಾವರ ಶ್ರೀಗಳ ಆಶೀರ್ವಾದ ಪಡೆದುಕೊಂಡು ಹೋಗಿದ್ದರು. ಸಿದ್ದು ಆ ಚುನಾವಣೆಯಲ್ಲಿ ಪ್ರಯಾಸದ 257 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ವಿರುದ್ದ ಜಯಗಳಿಸಿದ್ದನ್ನು ಓದುಗರ ಗಮನಕ್ಕೆ ತರುತ್ತಿದ್ದೇವೆ.

ಕಾನೂನು ಏನು ಹೇಳುತ್ತೆ: ಉಡುಪಿಯ ಕೃಷ್ಣಮಠ ಯಾವುದೇ ಮಠಾದಿಪತಿಗಳ ಒಡೆತನದಲ್ಲ, ಅದು ಹಿಂದೂ ಪೂಜಾ ಕೈಂಕರ್ಯಕ್ಕೆ ಮೀಸಲಾಗಿರುವುದು. ಹಾಗಾಗಿ ಕೃಷ್ಣಮಠ ಸಾರ್ವಜನಿಕರ ವ್ಯಾಪ್ತಿಗೆ ಬರುವುದು ಎಂದು ಅಂದಿನ ಮದರಾಸು ನ್ಯಾಯಾಲಯ ಈ ಹಿಂದೆ ಆದೇಶ ನೀಡಿತ್ತು.

ಸದರಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅಷ್ಟಮಠಗಳ ಪೈಕಿ ಆರು ಮಠಾಧಿಪತಿಗಳು ಸುಪ್ರೀಂ ಕೋರ್ಟಿನಲ್ಲಿ ಸಿವಿಲ್ ಅರ್ಜಿ ಸಲ್ಲಿಸಿದ್ದರು. ಸರ್ವೋಚ್ಚ ನ್ಯಾಯಾಲಯ ಎಲ್ಲಾ ದಾಖಲೆಗಳನ್ನು, ಶ್ರೀಕೃಷ್ಣ ದೇವಸ್ಥಾನಕ್ಕೆ ರಾಜರು, ಸಾಮಂತರು ನೀಡುತ್ತಿದ್ದ ಉಂಬಳ ಮುಂತಾದವನ್ನು ಕೂಲಂಕುಷವಾಗಿ ಪರಿಗಣಿಸಿ ಮದರಾಸು ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು.

ಕೃಷ್ಣ ದೇವಾಲಯವು ಅಷ್ಠ ಮಠಾಧೀಶರು ಕೃಷ್ಣನಿಗೆ ಖಾಸಾಗಿ ಪೂಜೆ ಸಲ್ಲಿಸಲು ಸ್ಥಾಪನೆಯಾದ ದೇವಾಲಯವಲ್ಲ. ಶ್ರೀಕೃಷ್ಣ ದೇವಾಲಯವು ಒಂದು ಮಠವಲ್ಲ, ಇದೊಂದು ಸಾರ್ವಜನಿಕ ದೇವಾಯಲಯ ಎಂದು ಸರ್ವೋಚ್ಚ ನ್ಯಾಯಾಲಯ 1961ರಲ್ಲಿ ಆದೇಶ ನೀಡಿತ್ತು.

ಮುಂದೆ ಓದಿ...

ಸಿದ್ದು ಮತ್ತು ಕೃಷ್ಣಮಠ

ಸಿದ್ದು ಮತ್ತು ಕೃಷ್ಣಮಠ

ಇದಾದ ನಂತರ ಕಳೆದ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ, ಸರಕಾರಿ ಫೈಲಿನಲ್ಲಿ ದೇವಾಲಯವನ್ನು ಪೀಠಾಧಿಪತಿಗಳಿಗೆ ಹಸ್ತಾಂತರಿಸಬಾರದು ಎನ್ನುವ ದಾಖಲೆಗಳಿದ್ದರೂ, ಸರ್ವೋಚ್ಚ ನ್ಯಾಯಾಲಯದ ಆದೇಶವನ್ನೂ ಬದಿಗೊತ್ತಿ ಪ್ರಮುಖ ಹೆಜ್ಜೆ ಇಟ್ಟಿತ್ತು.

ಸಿದ್ದು ಮತ್ತು ಕೃಷ್ಣಮಠ

ಸಿದ್ದು ಮತ್ತು ಕೃಷ್ಣಮಠ

ಆಗಸ್ಟ್ 2010ರಲ್ಲಿ ಮುಜರಾಯಿ ಸಚಿವರೂ ಆಗಿದ್ದ ದಿ.ವಿಎಸ್ ಆಚಾರ್ಯ ಉಡುಪಿಯ ಶ್ರೀಕೃಷ್ಣ ದೇವಸ್ಥಾನವನ್ನು ಮುಜರಾಯಿ ಇಲಾಖೆಯಿಂದ ಡಿ-ನೋಟಿಫೈ ಮಾಡಿ ಪೀಠಾಧಿಪತಿಗಳಿಗೆ ಹಸ್ತಾಂತರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದರು. ಉಡುಪಿ ಪೇಜಾವರ ಶ್ರೀಗಳ ವಿನಂತಿಯ ಮೇರೆಗೆ ಆಚಾರ್ಯ ಈ ಕ್ರಮ ಕೈಗೊಂಡಿದ್ದರು.

ಸಿದ್ದು ಮತ್ತು ಕೃಷ್ಣಮಠ

ಸಿದ್ದು ಮತ್ತು ಕೃಷ್ಣಮಠ

ಯಡಿಯೂರಪ್ಪನವರು ಆಚಾರ್ಯರ ಪತ್ರಕ್ಕೆ ಅನುಮೋದನೆ ನೀಡಿದ್ದರು. ಹಾಗಾಗಿ ನ್ಯಾಯಾಂಗ ವ್ಯವಸ್ಥೆಯ ಆದೇಶಕ್ಕೆ ವಿರುದ್ದವಾಗಿದ್ದರೂ ಸರಕಾರಿ ದಾಖಲೆಯ ಪ್ರಕಾರ ಉಡುಪಿ ಶ್ರೀಕೃಷ್ಣಮಠ ಅಷ್ಠ ಮಠಾಧೀಶರಿಗೆ ಸೇರಿದ್ದಾಗಿದೆ.

ಸಿದ್ದು ಮತ್ತು ಕೃಷ್ಣಮಠ

ಸಿದ್ದು ಮತ್ತು ಕೃಷ್ಣಮಠ

ಸರಕಾರದ ಈ ಕ್ರಮದಿಂದ ಕೆಂಡಾಮಂಡಲವಾಗಿದ್ದ ಸಿದ್ದರಾಮಯ್ಯ, ಐತಿಹಾಸಿಕ ಗೋಕರ್ಣ ದೇವಸ್ಥಾನವನ್ನು ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಪರಭಾರೆ ಮಾಡುವ ಸರಕಾರ ಉಡುಪಿ ಶ್ರೀಕೃಷ್ಣಮಠವನ್ನು ಕುರುಬರಿಗೆ ಬಿಟ್ಟುಕೊಡಲಿ ಎಂದು ಸವಾಲೆಸಿದಿದ್ದರು. ಅಂದಿನಿಂದಲೂ ಶ್ರೀಕೃಷ್ಣಮಠದ ಮೇಲೆ ಪೀಠಾದಿಪತಿಗಳ ಹಿಡಿತ ತಪ್ಪಿಸಲು ಸಿದ್ದು ಹೋರಾಟ ಮಾಡುತ್ತಲೇ ಬಂದಿದ್ದರು. ಇದಕ್ಕೆ ಸಮಾಜದ ಹಲವು ಭಾಗಗಳಿಂದ ಬೆಂಬಲ ಕೂಡಾ ವ್ಯಕ್ತವಾಗಿತ್ತು.

ಸಿದ್ದು ಮತ್ತು ಕೃಷ್ಣಮಠ

ಸಿದ್ದು ಮತ್ತು ಕೃಷ್ಣಮಠ

ಉಡುಪಿ ಮಠವನ್ನು ಮಠಾಧೀಶರ ಹಿಡಿತದಿಂದ ವಾಪಾಸ್ ಪಡೆಯ ಬೇಕೆನ್ನುವ ಹೋರಾಟ ಸಾಮಾಜಿಕ ಸಂಘಟನೆ, ಬುದ್ದಿಜೀವಿಗಳಿಂದ ನಡೆಯುತ್ತಲೇ ಬಂದಿದೆ. ಈ ಹಿಂದೆ ಅದಮಾರು ಶ್ರೀಗಳು ಪರ್ಯಾಯ ಪೀಠಾಧಿಪತಿಗಳಾಗಿದ್ದ ಅವಧಿಯಲ್ಲಿ ಶಿಥಿಲಗೊಂಡಿದ್ದ ಕನಕ ಗೋಪುರದ ಜೀರ್ಣೋದ್ದಾರಕ್ಕೆ ಮುಂದಾಗಿದ್ದಾರು. ಆದರೆ ಕನಕ ಗೋಪುರವನ್ನು ಕೆಡವಲು ಪರ್ಯಾಯ ಮಠ ಮುಂದಾಗಿದೆ ಎನ್ನುವ ಸುದ್ದಿ ಹಬ್ಬಿ ಭಾರೀ ಪ್ರತಿಭಟನೆಗಳು ನಡೆದಿದ್ದವು.

ಸಿದ್ದು ಮತ್ತು ಕೃಷ್ಣಮಠ

ಸಿದ್ದು ಮತ್ತು ಕೃಷ್ಣಮಠ

ಪಂಕ್ತಿ ಭೋಜನ, ಮಡೆಸ್ನಾನ ಮುಂತಾದ ವಿಚಾರವೂ ಇದರ ಜೊತೆಗೆ ಬೆರೆತು ಉಡುಪಿ ಶ್ರೀಕೃಷ್ಣಮಠವನ್ನು ಮುಜರಾಯಿಗೆ ಒಪ್ಪಿಸ ಬೇಕೆನ್ನುವ ಕೂಗು ತಾರಕಕ್ಕೇರಿತ್ತು. ಇನ್ನು ಸಿದ್ದರಾಮಯ್ಯ ಅಕ್ಷಯ ತದಿಗೆಯ ದಿನ (ಮೇ 13) ಮುಖ್ಯಮಂತ್ರಿ ಹುದ್ದೆಗೇರಿದ್ದಾರೆ. ಸಿದ್ದರಾಮಯ್ಯ ತನ್ನ ಹಿಂದಿನ ನಿರ್ಣಯಕ್ಕೆ ಬದ್ದರಾಗುತ್ತಾರಾ ಅಥವಾ ಉಡುಪಿ ಮಠಾಧೀಶರ ಮನವಿಗೆ ಸ್ಪಂಧಿಸುತ್ತಾರೋ ಎಲ್ಲವೂ ಉಡುಪಿ ಶ್ರೀಕೃಷ್ಣನೇ ಬಲ್ಲ..

English summary
If we recall the Siddaramaiah statement in Udupi couple of months back, the question is whether Mujarai department will take over Udupi Krishna Mutt. Siddaramaiah said in Udupi during padayatra 'If I become the Chief Minister, my priority is bring back Udupi Krishna Mutt in to Mujarai department".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X