ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿವಿಂಗ್ ಟುಗೆದರ್: ಮಹಿಳೆ ಹತ್ಯೆಮಾಡಿ ಸತ್ತ ಇನ್ಸ್‌ಪೆಕ್ಟರ್

By Srinath
|
Google Oneindia Kannada News

living-together-inspector-badri-geetha-suicide-gurgaon
ನವದೆಹಲಿ, ಮೇ 13: ದೆಹಲಿಯ ವಿಶೇಷ ಪೊಲೀಸ್ ಪಡೆಯ ಇನ್ಸ್‌ಪೆಕ್ಟರ್ ತನ್ನ ಜತೆ ಸಹ ಜೀವನ (ಲಿವ್ ಇನ್ ಸಂಬಂಧ) ನಡೆಸುತ್ತಿದ್ದ ಮಹಿಳೆಯನ್ನು ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇನ್ಸ್‌ಪೆಕ್ಟರ್ ಬದ್ರಿ ದತ್ (45) ಹಾಗೂ ಗೀತಾ ಶರ್ಮಾ (45) ಮೃತಪಟ್ಟವರು. ಈ ಜೋಡಿ ದೇಹಗಳು ಗುರ್ ಗಾಂವ್ ನ ಸುಶಾಂತ್ ಪೊಲೀಸ್ ಠಾಣಾ ವ್ಯಾಪ್ತಿಯ ಆರ್‌ಡಿ ನಗರದಲ್ಲಿ ಅಪಾರ್ಟ್ ಮೆಂಟಿನಲ್ಲಿ ಶನಿವಾರ ಪತ್ತೆಯಾಗಿವೆ. ಇನ್ಸ್‌ಪೆಕ್ಟರ್ ಬದ್ರಿ ದತ್ ಭಯೋತ್ಪಾದಕರ ನಿಗ್ರಹ ದಳದಲ್ಲಿ ಭಾರಿ ಯಶಸ್ಸು ಕಂಡಿದ್ದರು. ಬದ್ರಿ ಎರಡು ಬಾರಿ ಸಾಹಸ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದರು.

ಬದ್ರಿ ದತ್, ಗೀತಾಳನ್ನು ಹತ್ಯೆಗೈದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗುರ್ ಗಾಂವ್ ಹೆಚ್ಚುವರಿ ಪೊಲೀಸ್ ಆಯುಕ್ತ ಮಹೇಶ್ವರ್ ದಯಾಳ್ ತಿಳಿಸಿದ್ದಾರೆ. ಆದರೆ ಈ ಹತ್ಯೆಗಳಿಗೆ ನಿಖರ ಕಾರಣ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.

ಪತ್ನಿ ಮತ್ತು ಇಬ್ಬರು ಮಕ್ಕಳು ಫರಿದಾಬಾದಿನಲ್ಲಿ ವಾಸಿಸುತ್ತಿದ್ದಾರೆ. ಕೌಟುಂಬಿಕ ಕಲಹ ಘಟನೆಗೆ ಕಾರಣವಾಗಿರಬಹುದು ಎನ್ನಲಾಗಿದೆ. ಬದ್ರಿ, ತಮ್ಮ ಪತ್ನಿ ಮಕ್ಕಳನ್ನು ತೊರೆದು ಗೀತಾ ಶರ್ಮಾ ಜತೆ ವಾಸಿಸುತ್ತಿದ್ದರು.

1991ರಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ದಿಲ್ಲಿ ಪೊಲೀಸ್ ಸೇರಿದ್ದ ಬದ್ರಿ, 1999 ರಿಂದ ದೆಹಲಿ ಭಯೋತ್ಪಾದಕ ನಿಗ್ರಹ ದಳದಲ್ಲಿ ವಿಶೇಷಾಧಿಕಾರಿಯಾಗಿ ಸೇವೆಗೆ ನಿಯೋಜನೆಗೊಂಡಿದ್ದರು. ದಳದಲ್ಲಿ ಅತ್ಯಂತ ಚಾಣಾಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದರು.

English summary
Inspector Badri Dutt, 45, who had achieved great success in tackling terrorists, and Geeta Sharma, 45, were found dead in an apartment in RD City under Sushant Lok police station in Gurgaon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X