ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದು ಅಭಿಮಾನಿ ಸಾವು, ಪರಿಹಾರ ಘೋಷಣೆ

|
Google Oneindia Kannada News

died
ಬೆಂಗಳೂರು, ಮೇ 13 : ಸಿದ್ದರಾಮಯ್ಯ ಪದಗ್ರಹಣ ಸಮಾರಂಭಕ್ಕೆ ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತನೊಬ್ಬ ನೂಕು ನುಗ್ಗಲಿನಿಂದ ಮೃತಪಟ್ಟಿದ್ದಾನೆ. ಕಂಠೀರವ ಕ್ರೀಡಾಂಗಣದ ಬಳಿ ನೂಕು ನುಗ್ಗಲಿನಲ್ಲಿ ಗಾಯಗೊಂಡ ಕಾರ್ಯಕರ್ತ ಮಂಜಪ್ಪ ಅವರನ್ನು ಮಲ್ಯ ಆಸ್ಪತ್ರಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಗಿಸಿ ಹೊರಬರುವಾಗ ಸ್ಟೇಡಿಯಂನ ಗೇಟ್ ನಂ 5 ಬಳಿ ನೂಕು ನುಗ್ಗಲು ಸಂಭವಿಸಿತು. ಈ ಸಂದರ್ಭದಲ್ಲಿ ಬೆಂಗಳೂರಿನ ವೈಟ್ ಫೀಲ್ಡ್ ನಿವಾಸಿ ಮಂಜಪ್ಪ (40) ಅವರಿಗೆ ಹೃದಯಾಘಾತ ಸಂಭವಿಸಿತು. ತಕ್ಷಣ ಅವರನ್ನು ಹತ್ತಿರದ ಮಲ್ಯ ಆಸ್ಪತ್ರಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಂಜಪ್ಪ ಮೃತಪಟ್ಟಿದ್ದಾರೆ.

ನೂಕು ನುಗ್ಗಲಿನಲ್ಲಿ ಅಜ್ಜಿಯೊಬ್ಬರಿಗೂ ಗಾಯವಾಗಿದ್ದು ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಪರಿಹಾರ ಘೋಷಣೆ : ಪದಗ್ರಹಣ ಸಮಾರಂಭದ ನಂತರ ವಿಧಾನಸೌಧದ ಮುಖ್ಯಮಂತ್ರಿ ಕಚೇರಿಗೆ ತೆರಳಿ ನಂತರ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೃತ ಮಂಜಪ್ಪನ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಮಧ್ಯಾಹ್ನ 3 ಗಂಟೆಯ ವೇಳೆಗೆ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದ ಸಿದ್ದರಾಮಯ್ಯ ಮೃತನ ಕುಟುಂಬಕ್ಕೆ 2 ಲಕ್ಷ ರೂ.ಗಳ ಪರಿಹಾರ ಘೋಷಿಸಿದರು. ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದರು.

English summary
A 50 year-old Congress supporter died after attending the swearing-in ceremony of Chief Minister Siddaramaiah at the jam packed Kanteerava stadium here today, police said. The deceased was identified as Manjappa, a city resident, who collapsed near gate number seven while coming out after the function attended by nearly 50,000 Congress supporters from across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X