ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮಾಂಧನ ದಾಹಕ್ಕೆ ಸಿಕ್ಕಿದ್ದು 80 ವರ್ಷ ವೃದ್ಧೆ

By Mahesh
|
Google Oneindia Kannada News

Horror and Shame: 80-year-old woman raped in Tamil Nadu
ಸೇಲಂ, ಮೇ.12: ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಕಾಮವಿಕೃತಿಗಳು ದಕ್ಷಿಣ ರಾಜ್ಯಕ್ಕೂ ಕಾಲಿಟ್ಟಿದೆ. ಕಾಮಾಂಧರ ದಾಹಕ್ಕೆ 80 ವರ್ಷ ವಯಸ್ಸಿನ ವೃದ್ಧೆ ಸಿಲುಕಿ ನಲುಗಿದ್ದಾರೆ. ವೃದ್ಧೆಯ ಸ್ಥಿತಿ ಗಂಭೀರವಾಗಿದ್ದು ಆಕೆಯನ್ನು ಆಸ್ಪತ್ರೆಗೆ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

41 ವರ್ಷ ಪ್ರಾಯದ ಕಾಮಾಂಧ ವ್ಯಕ್ತಿಯೊಬ್ಬ 80 ವರ್ಷ ವಯಸ್ಸಿನ ಮಹಿಳೆ ಮೇಲೆ ಅತ್ಯಾಚಾರ ಎಸಸಗಿದ್ದಾನೆ. ವಿಧವೆಯೂ ಆಗಿರುವ ವೃದ್ಧ ಮಹಿಳೆಯು ಜೀವನ್ಮರಣ ಹೋರಾಟದಲ್ಲಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ. ಸೇಲಂ ಜಿಲ್ಲೆಯ ಮಲೈಯಕಾಡಿ ಎಂಬ ಪ್ರದೇಶದಲ್ಲಿ ತರಕಾರಿ ಮಾರುವ ಪಳನಿವೇಳ್ ಎಂಬ ವ್ಯಕ್ತಿಯೇ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

ಇಬ್ಬರು ಹೆಂಡಿರು ಮತ್ತು ನಾಲ್ವರು ಮಕ್ಕಳನ್ನು ಹೊಂದಿರುವ ಆರೋಪಿ ಪಳನಿವೇಳ್ ಶುಕ್ರವಾರ ಮಧ್ಯರಾತ್ರಿಯ ವೇಳೆ ನತದೃಷ್ಟ ವೃದ್ಧೆಯ ಮನೆಗೆ ತೆರಳಿ ಆಕೆಯಿಂದ ಕುಡಿಯಲು ನೀರು ಕೇಳಿದ್ದಾನೆ. ಆಕೆ ಹೊರಬರಲು ನಿರಾಕರಿಸಿದಾಗ ಆತ ಮನೆಯ ಒಳಗೆ ನುಗ್ಗಿ ಆಕೆಯ ಮರ್ಮಾಂಗವನ್ನು ಕಚ್ಚಿ ಆಕೆ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿದ್ದಾನೆ. ಮಲೈಕಾಡಿಯ ಗೋಪಾಲಪುರಂ ಎಂಬ ಊರಿನಲ್ಲಿ ವೃದ್ಧ ಮಹಿಳೆ ಒಂಟಿಯಾಗಿ ವಾಸಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಅತ್ಯಾಚಾರಕ್ಕೊಳಗಾದ ವೃದ್ಧೆಗೆ ಕುಮಾರಮಂಗಲಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿಸ್ತೆ ನೀಡಲಾಗಿದೆ ನಂತರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಅಕೆ ದೇಹಸ್ಥಿತಿ ಅತ್ಯಂತ ಗಂಭೀರವಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

English summary
In a shocking incident, an 80-year old woman was allegedly raped by a 41-year-old man following which she was admitted to a hospital in a serious condition. Horror and Shame: 80-year-old woman raped in Tamil Nadu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X