ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನ್ಯಾಕ್ರೀ ಸಿಎಂ ಆಗಬಾರದು: ಪರಮೇಶ್ವರ್‌ ಗುಡುಗು

By Srinath
|
Google Oneindia Kannada News

kpcc-chief-parameshwar-also-wants-to-be-chief-minister
ಬೆಂಗಳೂರು, ಮೇ 10- ಬಹುಮತದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು ನಿಜಕ್ಕೂ ಬಹುಮಂದಿ ತುದಿಗಾಲಲ್ಲಿ ನಿಂತಿದ್ದಾರೆ. ಹಾಗಾಗಿ, ರಾಜ್ಯದಲ್ಲಿ ನೂತನ ಸಿಎಂ ಆಯ್ಕೆ ಕಗ್ಗಂಟಾಗುತ್ತಿದೆ.

'ಆಪರೇಶನ್ ಸಕ್ಸಸ್ ಬಟ್ ಪೇಷೆಂಟ್ ಡೈಡ್' ಅಂತಾರೆ. ಆದರೆ ಇಲ್ಲಿ ಪಕ್ಷವನ್ನು ಹಿಮಾಲಯಕ್ಕೇರಿಸಿ ನಮ್ಮ ಡಾಕ್ಟರ್ ಪರಮೇಶ್ವರ್ ಖುದ್ದು ಸೋತಿರುವುದು ಒಂದಷ್ಟು ಇರುಸುಮುರುಸು ತಂದಿದೆ. ಆದರೆ ಅದೇನೂ ತಮಗೆ ವರಿ ಅಲ್ಲ ಎನ್ನುತ್ತಿದ್ದಾರೆ ನಮ್ಮ ಪರಮೇಶ್ವರಿ.

ಕೆಪಿಸಿಸಿ ಅಧ್ಯಕ್ಷರಾಗಿ ಇಂದು CLP ಮೀಟಿಂಗ್ ಆಯೋಜಿಸಿರುವ ಡಾಕ್ಟರ್ ಪರಮೇಶ್ವರ್ ಅವರು ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದರು. ಆ ವೇಳೆ ತಮ್ಮ ಸುಖ-ದುಃಖ ಹಂಚಿಕೊಂಡ ಡಾಕ್ಟರ್ ಪರಮೇಶ್ವರ್, ನಾನ್ಯಾಕ್ರೀ ಮುಖ್ಯಮಂತ್ರಿ ಆಗಬಾರದು ಎಂದೇ ನೇರವಾಗಿ ಅರ್ಜಿ ಹಾಕಿದರು.

'ನಾನೂ ಸಹ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದೇನೆ. ಪಕ್ಷ ಅಧಿಕಾರಕ್ಕೆ ಬರಲು ನನ್ನ ಶ್ರಮವೂ ಸಾಕಷ್ಟಿದೆ. ಹೀಗಾಗಿ ಸಿಎಂ ಸ್ಥಾನ ಕೇಳುತ್ತಿದ್ದೇನೆ. ಅದರಲ್ಲಿ ತಪ್ಪೇನಿದೆ' ಎಂದು ಪುನರುಚ್ಚರಿಸಿದ ಡಾಕ್ಟರ್ ಪರಮೇಶ್ವರ್, ನಾನು ಸುಮ್ಮಸುಮ್ಮನೆ ಆಕಾಂಕ್ಷೆ ಹೊಂದಿಲ್ಲ. ನನ್ನಲ್ಲೂ ಮುಖ್ಯಮಂತ್ರಿ ಕರ್ತವ್ಯವನ್ನು ನಿಭಾಯಿಸುವ ಸತ್ತ್ವ/ಸಾಮರ್ಥ್ಯವಿದೆ. ಮುಖ್ಯಮಂತ್ರಿಯನ್ನಾಗಿಸಿದರೆ ಖಂಡಿತ ಜವಾಬ್ದಾರಿ ಹೊರುತ್ತೇನೆ. ಅದರಲ್ಲಿ ಯಾರಿಗೂ ಅನುಮಾನ ಬೇಡ' ಎಂದು ಅರ್ಜಿ ಜತೆಗೆ ತಮ್ಮ ಶಕ್ತಿ-ಸಾಮರ್ಥ್ಯದ ಒಕ್ಕಣೆಯನ್ನೂ ನೀಡಿದರು.

ಹೌದಲ್ವಾ ಡಾಕ್ಟರ್ ಪರಮೇಶ್ವರ್ ಅವರೂ ಸಿಎಂ ಏಕಾಗಬಾರದು?

English summary
Even as the selection of new Chief Minister to Karnataka gets murky in Congress party the KPCC Chief G Parameshwar also claims his right to become Chief Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X